ಪುತ್ತೂರು: ಇತ್ತೀಚೆಗೆ ಪರ್ಪುಂಜದಲ್ಲಿ ನಡೆದ ಕಾರು ಮತ್ತು ರಿಕ್ಷಾ ಅಪಘಾತದಲ್ಲಿ ತೀವ್ರ ಗಾಯಗೊಂಡು ಜೀವನ್ಮರಣ ಹೋರಾಟದಲ್ಲಿದ್ದ 3 ತಿಂಗಳ ಮಗುವನ್ನು ದಿನವಿಡೀ ಆರೈಕೆ ಮಾಡಿ ಅದರ ಚಿಕಿತ್ಸೆಯ ಬಿಲ್ಲು ನೀಡಿ ಮಗುವನ್ನು ಪೋಷಕರಿಗೆ ನೀಡಿ ಮಾನವೀಯತೆಯನ್ನು ಮೆರೆದ ಸಮಾಜ ಸೇವಕಿ ಶಿಕ್ಷಕಿ ಮಹಿಳಾ ಕಾಂಗ್ರೆಸ್ ಕಾರ್ಯಧ್ಯಕ್ಷೆ ಚಂದ್ರಪ್ರಭಾ ಗೌಡ ಇವರನ್ನು ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇವರ ವತಿಯಿಂದ ಗೌರವಿಸಲಾಯಿತು. ಅಧ್ಯಕ್ಷ ಸುಭಾಶ್ ರೈ ಬೆಳ್ಳಿಪ್ಪಾಡಿ, ವಲಯ ಸೇನಾನಿ ಸುರೇಶ್ ಪಿ, ಪೂರ್ವ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ, ಭಾಸ್ಕರ ಕೋಡಿಂಬಾಳ, ಸುಂದರಿ ಬಲ್ಕಾಡಿ, ಮತ್ತು ಕೋಶಾಧಿಕಾರಿ ವಿಜಯ ಡಿಸೋಜಾ, ಸದಸ್ಯರಾದ ಉಮೇಶ್ ಮಳುವೇಲು, ದಿನೇಶ್ ಆಚಾರ್ಯ, ಆಶಾ ರೆಬೆಲ್ಲೊ ಮತ್ತಿತರರು ಉಪಸ್ಥಿತರಿದ್ದರು.
