ಪುತ್ತೂರು: ಮುಸ್ಲಿಂ ಯೂತ್ ಫೆಡರೇಶನ್ ಬೈತಡ್ಕ ಇದರ ನೂತನ ಅಧ್ಯಕ್ಷರಾಗಿ ಸುಲೈಮಾನ್ ಬೆದ್ರಾಜೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆಸಿಫ್ ಚೆಡವು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನೌಫಲ್ ಸಮಹಾದಿ ಮತ್ತು ಇರ್ಷಾದ್ ಸುರುಳಿಮಜಲ್, ಕೋಶಾಧಿಕಾರಿಯಾಗಿ ಕೌಸರ್ ಬೆಳಂದೂರು, ಜೊತೆ ಕಾರ್ಯದರ್ಶಿಗಳಾಗಿ ಲತೀಫ್ ಎಸ್.ಎಂ ಹಾಗೂ ಸವಾದ್ ಕೆಲೆಂಬಿರಿ ಆಯ್ಕೆಯಾದರು. ಸಮಿತಿ ಸದಸ್ಯರುಗಳಾಗಿ ಹಾರಿಸ್ ಕಲ್ಪಡ, ರಹೀಝ್ ಅಂಕಜಾಲ್, ಬಶೀರ್ ಸಖಾಫಿ, ರಝಾಕ್ ಅಂಕಜಾಲ್, ಕರೀಂ ಅಬೀರ, ನಾಸಿರ್ ಅಬೀರ, ಸಿದ್ದೀಕ್ ಕೂಡುರಸ್ತೆ, ಸಲೀಂ ಅಬೀರ, ಮುಸ್ತಫಾ ಸಅದಿ, ನಾಸಿರ್ ಕೂಡುರಸ್ತೆ, ನಿಝಾಮ್ ಫಾಳಿಲಿ, ಮುಸ್ತಫಾ ಸಮಹಾದಿ, ಸಮೀರ್ ಬೆಳಂದೂರು, ಇಸ್ಮಾಯಿಲ್ ಅಬೀರ, ಉಕ್ಕಾಶ್ ಬೈತಡ್ಕ ಆಯ್ಕೆಯಾದರು.

ಬೈತಡ್ಕ ದರ್ಗಾ ಮತ್ತು ಜುಮಾ ಮಸೀದಿ ಸಭಾಂಗಣದಲ್ಲಿ ಅಧ್ಯಕ್ಷ ಇಕ್ಬಾಲ್ ಹಾಜಿ ಬೈತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ಜಮಾಅತ್ ಕಮಿಟಿ ಪದಾಧಿಕಾರಿಗಳು, ಸದಸ್ಯರು, ಜಮಾಅತರು ಉಪಸ್ಥಿತರಿದ್ದರು.