ಎವಿಜಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ- ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

0

ಪುತ್ತೂರು: ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.14ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಕ್ಕಳಿಗೆ ರಸಪ್ರಶ್ನೆಯ ಮೂಲಕ ವಿಶೇಷ ಕಾರ್ಯಕ್ರಮ ನಡೆಸಲಾಯಿತು.


ಮೈಸೂರಿನ ಜಾವಾ ರೋಟರಿ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಬೇಬಿ ಸೋನಿಕ ಜನಾರ್ಧನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ರೋಟರಿ ಕ್ಲಬ್ ಸೆಂಟ್ರಲ್‌ನ ಅಧ್ಯಕ್ಷ ಚಂದ್ರಹಾಸ ರೈ ರವರು ಮಾತನಾಡಿ, ಶೈಕ್ಷಣಿಕವಾಗಿ, ಭೌತಿಕವಾಗಿ ಪಂಚಾಂಗವನ್ನು ಹಾಕಿ ಕೊಟ್ಟ ನಾಯಕ ಜವಹರಲಾಲ್ ನೆಹರುರವರ ಬಗ್ಗೆ ಮತ್ತು ಅವರಿಗಿರುವ ಮಕ್ಕಳ ಮೇಲಿನ ಪ್ರೀತಿಯ ಕುರಿತು ತಿಳಿಸಿದ ಅವರು ಮಕ್ಕಳ ಸಕಾರಾತ್ಮಕ ಭವಿಷ್ಯದ ವರ್ತನೆಯ ಬಗ್ಗೆ ಶಿಕ್ಷಕರಷ್ಟೇ ಪೋಷಕರ ಜವಾಬ್ದಾರಿ ಇದೆ ಎಂಬುದನ್ನು ತಿಳಿಸಿದರು. ಎವಿಜಿ ಶಾಲೆಯ ವ್ಯವಸ್ಥೆಯ ಬಗ್ಗೆ ಆರಂಭದ ಹೆಜ್ಜೆಗಳು ಬಹಳ ಉತ್ತಮವಾಗಿದೆ, ಇಲ್ಲಿ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಬೆಳೆಯಲಿ ಎಂದು ಹಾರೈಸಿದರು.


ಸಭಾಧ್ಯಕ್ಷತೆ ವಹಿಸಿದ ಶಾಲೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅವರು ಮಕ್ಕಳ ದಿನಾಚರಣೆ ಬಗ್ಗೆ ತಿಳಿಸಿ, ಭವಿಷ್ಯದ ಉತ್ತಮ ಪ್ರಜೆಗಳಾಗಿ ಬೆಳೆಯಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಬೇಬಿ ಸೋನಿಕ ಇವರಿಗೆ ಶಾಲು ಹೊದಿಸಿ, ಪೇಟ ತೊಡಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಶಾಲೆಯ ಸಂಚಾಲಕ ಎ ವಿ ನಾರಾಯಣ ,ಉಪಾಧ್ಯಕ್ಷ ಉಮೇಶ್ ಮಲುವೇಳು, ಶಾಲಾ ಆಡಳಿತ ಅಧಿಕಾರಿ ಗುಡ್ಡಪ್ಪ ಗೌಡ ಬಲ್ಯ, ಶಾಲೆಯ ನಿರ್ದೇಶಕ ಸೀತಾರಾಮ ಪೂಜಾರಿ ಮೇಲ್ಮಜಲು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗಡೆ, ಶಾಲೆಯ ಮುಖ್ಯೋಪಾಧ್ಯಾಯ ಅಮರನಾಥ್ ಹಾಗೂ ಶಾಲಾ ವಿದ್ಯಾರ್ಥಿ ನಾಯಕ ಕವನ್ ಬಿ ಉಪಸ್ಥಿತರಿದ್ದರು.

ಮೈಸೂರಿನ ಸಹಾಯಕ ಸರಕಾರಿ ಅಭಿಯೋಜಕ ಜನಾರ್ಧನ ಬೆಟ್ಟಂಪಾಡಿ, ಬೇಬಿ ಸೋನಿಕ, ಕುಮಾರಿ ಕುಷಿತ ರವರ ಗಾನ ಮಾಧುರ್ಯ ಎಂಬ ಸಂಗೀತ ಕಾರ್ಯಕ್ರಮದಲ್ಲಿ ವಿವಿಧ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ಮನರಂಜಿಸಿದರು. ನ.14ರಂದು ಹುಟ್ಟಿದ ಈ ಶಾಲೆಯ ವಿದ್ಯಾರ್ಥಿಗಳಾದ ರೋಹಿತ್ ಪಿ ದೊಡ್ಡಮನಿ ಮತ್ತು ರುತ್ವಿಕ್. ಕೆ ಹುಟ್ಟುಹಬ್ಬವನ್ನು ಇದೇ ಸಂದರ್ಭದಲ್ಲಿ ಆಚರಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ಮಕ್ಕಳ ದಿನಾಚರಣೆಗೆ ಸಂಬಂಧಿಸಿದಂತೆ ಕೆಲವೊಂದು ರಸಪ್ರಶ್ನೆಗಳನ್ನು ಕೇಳಿ ಅಲ್ಲಿಯೇ ಬಹುಮಾನವನ್ನು ವಿತರಿಸಲಾಯಿತು. ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗಾಗಿ ಕೆಲವೊಂದು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಶಾಲೆಯ ನಿರ್ದೇಶಕರಾದ ಸೀತಾರಾಮ ಕೇವಳ, ಪ್ರತಿಭಾ ದೇವಿ, ಪೋಷಕರು, ಬೋಧಕ – ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪಾಲ್ಗೊಂಡರು. ವಿದ್ಯಾರ್ಥಿನಿಯರಾದ ಚಾರ್ವಿ, ವಿಭ, ಆರುಶಿ ರವರು ಪ್ರಾರ್ಥಿಸಿದರು. ಶಿಕ್ಷಕಿಯರಾದ ಸವಿತಾ ಕುಮಾರಿ ಮತ್ತು ಪ್ರಕ್ಷುತ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮಾಸ್ಟರ್ ಅದ್ವಿಕ್ ಬಂಜನ್ ಸ್ವಾಗತಿಸಿ, ಎ.ಎನ್ ಜ್ಯೋಸ್ತ್ನ ಗೌಡ ವಂದಿಸಿದರು. ವಿಖ್ಯಾತ್ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಶಿಕ್ಷಕಿಯರಾದ ಸುಚಿತ ಮತ್ತು ಹಿತಶ್ರೀ ಅತಿಥಿ ಪರಿಚಯಿಸಿದರು. ಗನ್ವಿತ್, ಅದ್ವಿತಿ ಬಂಜನ್ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here