
ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೀಪಾವಳಿಯ ಬಲೀಂದ್ರ ಪೂಜೆಯಂದು ಬಲಿಹೊರಟು, ಶ್ರೀದೇವರ ವರ್ಷದ ಪ್ರಥಮ ಸವಾರಿಯಾಗಿ ಪೂಕರೆ ಉತ್ಸವವು ಕಾರ್ತಿಕ ಮಾಸದ ಹಸ್ತಾ ನಕ್ಷತ್ರ ಒದಗುವ ನ.16 ರಂದು ಸಂಜೆ ವೈಭವದಿಂದ ನಡೆಯಿತು.
ನಂದಿ/ಬಸವನ ಮುಖವಾಡ ಧರಿಸಿದ (ಎರುಕೋಲ) ದೈವ ಶ್ರೀ ದೇವರನ್ನು ಪೂಕರೆ ಕಟ್ಟೆಗೆ ಕರೆದುಕೊಂಡು ಬರುವುದೇ ವಿಶೇಷ. ಸಂಜೆ ಶ್ರೀ ದೇವರ ಬಲಿ ಹೊರಟು ದೇಗುಲದ ಪಶ್ಚಿಮ ದ್ವಾರದಿಂದ ರಾಜಮಾರ್ಗದಲ್ಲಿ ಭಂಡಾರದ ಬಿರುದಾವಳಿ, ಛತ್ರ ಚಾಮರ , ಬೇತಾಳ, ಹಸ್ರಕೊಡೆ, ದಂಡುಶಿಲಾಲು, ವಾದ್ಯ ಮೇಳ, ನಂದಿ ಮುಖವಾಡದ ದೈವದೊಂದಿಗೆ ನೇರವಾಗಿ ಪೂಕರೆ ಕಟ್ಟೆಗೆ ತೆರಳಿ, ಪೂಕರೆ ಕಟ್ಟೆಯಿಂದ ದೇವಳದ ಗದ್ದೆಯನ್ನು ನೋಡಿದ ಬಳಿಕ ಶ್ರೀ ದೇವರು ಕಟ್ಟೆಯಲ್ಲಿ ವಿರಾಜಮಾನರಾದರು. ವೇ ಮೂ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಮೂಲ ನಾಗ ಸನ್ನಿಽಗೆ ತೆರಳಿದರು. ತಂತ್ರಿಯವರು ಪೂಕರೆ ಗದ್ದೆಗೆ ಪ್ರಾರ್ಥನೆ ಮಾಡಿದರು.
ಪೂಕರೆ ಸಿದ್ಧಪಡಿಸಿದ ಸ್ಥಳದಲ್ಲಿ ಪ್ರಾರ್ಥನೆ:
ಪೂಕರೆ ಸಿದ್ಧ ಪಡಿಸಿದ ಸ್ಥಳದಲ್ಲಿ ದೈವ ಮಧ್ಯಸ್ತ ಶಶಾಂಕ್ ನೆಲ್ಲಿತ್ತಾಯ ಅವರು ನುಡಿಗಟ್ಟಿನೊಂದಿಗೆ ಪ್ರಾರ್ಥಿಸಿದದರು. ಪೂಕರೆ ಉತ್ಸವಕ್ಕೆ ಸಂಬಂಽಸಿದವರು ಜೋಡು ಪೂಕರೆಯನ್ನು ದೇವರಮಾರು ಗದ್ದೆ ಮತ್ತು ಬಾಕಿತಮಾರು ಗದ್ದೆಯಲ್ಲಿ ಇಟ್ಟು ಪ್ರಾರ್ಥನೆ ಮಾಡಿದರು. ಬಳಿಕ ಪೂಕರೆ ಕಟ್ಟೆಯಲ್ಲಿ ಶ್ರೀದೇವರಿಗೆ ದೀವಟಿಕೆ ಪ್ರಣಾಮ್, ಕಟ್ಟೆಪೂಜೆ ನಡೆದು, ಬುಲೆಕಾಣಿಕೆಯನ್ನು ಸಂಪ್ರದಾಯದಂತೆ ಸೀಮಿತ ಭಕ್ತರಿಗೆ ಸೀಯಾಳ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಸುಮಾ ಅಶೋಕ್ ರೈ, ದೇವಳದ ವ್ಯವಸಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ದಿನೇಶ್ ಪಿ.ವಿ, ಮಹಾಬಲ ರೈ ವಳತ್ತಡ್ಕ, ಈಶ್ವರ ಬೆಡೇಕರ್, ವಿನಯ ಸುವರ್ಣ, ಸುಭಾಶ್ ರೈ ಬೆಳ್ಳಿಪ್ಪಾಡಿ, ನಳಿನಿ ಪಿ ಶೆಟ್ಟಿ, ಕೃಷ್ಣವೇಣಿ, ಕಾರ್ಯನಿರ್ವಹಣಾಽಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಸಿಬ್ಬಂದಿ ರವೀಂದ್ರ, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯರಾದ ಶೇಖರ್ ನಾರಾವಿ, ರಾಮ್ದಾಸ್ ಗೌಡ, ನಯನಾ ರೈ, ಹಿರಿಯರಾದ ಕಿಟ್ಟಣ್ಣ ಗೌಡ, ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ, ದೇವತಾ ಸಮಿತಿ ಅಧ್ಯಕ್ಷ ಅಭಿಜೀತ್, ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಪಿ.ಜಿ.ಚಂದ್ರಶೇಖರ್ ರಾವ್, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ರತ್ನಾಕರ ನಾಕ್, ಶ್ರೀಧರ್ ಪಟ್ಲ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಅರ್ಚಕ ವೇ ಮೂ ದಿವಾಕರ ಭಟ್, ದಾಮೋದರ್ ಭಂಡಾರ್ಕರ್, ಸುಽರ್ ನೋಂಡಾ, ಹರಿಪ್ರಸಾದ್ ನೆಲ್ಲಿಕಟ್ಟೆ, ಅಬಕಾರಿ ಇಲಾಖೆ ನಿವೃತ್ತ ಎಸ್.ಐ ಅಂಗಾರ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಪೂಕರೆ ಕಟ್ಟೆಯಲ್ಲಿ ದೇವರಿಗೆ ಬುಲೆಕಾಣಿಕೆ ಸಮರ್ಪಣೆ:
ಶ್ರೀ ದೇವರು ಪೂಕರೆ ಕಟ್ಟೆಯಲ್ಲಿ ಕುಳಿತ ಬಳಿಕ ದೇವರಿಗೆ ಬುಲೆಕಾಣಿಕೆ ಸಮರ್ಪಣೆ ಸಂಪ್ರದಾಯದಂತೆ ಎರಡರೆಡರಂತೆ ಸುಮಾರು 15 ಜೊತೆ ಸಿಯಾಳವನ್ನು ಪೂಕರ ಕಟ್ಟೆಯ ಮುಂದೆ ಆರಂಭದಲ್ಲಿ ಇರಿಸಲಾಯಿತು. ಶ್ರೀ ದೇವರಿಗೆ ಮಂಗಳಾರತಿಯ ಬಳಿಕ ಎರಡು ಜೊತೆಯಿಂದ ಒಂದು ದೇವಳಕ್ಕೆ ಇನ್ನೊಂದು ದೇವಳದ ಆಡಳಿತ ಮಂಡಳಿ ಮತ್ತು ಮಾಜಿ ಸದಸ್ಯರಿಗೆ ಹಾಗೂ ಸೀಮಿತ ಭಕ್ತರಿಗೆ ನೀಡುವ ಸಂಪ್ರದಾಯ ನಡೆಯುವುದು ವಿಶೇಷ. ಇದೇ ಸಂದರ್ಭದಲ್ಲಿ ದೇವರ ಪ್ರಸಾದ ರೂಪದಲ್ಲಿ ಅಷ್ಟದ್ರವ್ಯವನ್ನು ಭಕ್ತರಿಗೆ, ನಿತ್ಯ ಕರಸೇವಕರಿಗೆ ವಿತರಿಸಲಾಯಿತು.
ಪೂಕರೆಯಲ್ಲಿ ಪೂರ್ತಿಯಾಗಿ ಭಾಗವಹಿಸಿದ ಅಶೋಕ್ ರೈ ದಂಪತಿ
ಶಾಸಕ ಅಶೋಕ್ ಕುಮಾರ್ ರೈ ಹಾಗೂ ಅವರ ಪತ್ನಿ ಸುಮಾ ಅಶೋಕ್ರೈ ಅವರು ಪೂಕರೆ ಉತ್ಸವದಲ್ಲಿ ಶ್ರೀ ದೇವರ ಜೊತೆ ಪೇಟೆ ಸವಾರಿಯಲ್ಲಿ ಬಂದು ಪೂಕರೆ ಕಟ್ಟೆಯಲ್ಲಿ ಪೂಜೆ ಮತ್ತು ನಾಗ ಸನ್ನಿಽಯಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡು, ಕೊನೆಗೆ ದೇವರು ಒಳಗಾಗುವ ತನಕ ಪೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.