ನೆಲ್ಯಾಡಿ: ಮಂಗಳೂರು ಲಾಲ್ಬಾಗ್ನಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ ಟೆಕ್ವಾಂಡೋ ಕರಾಟೆ ಸ್ಪರ್ಧೆಯಲ್ಲಿ ನೆಲ್ಯಾಡಿ ಅಲ್ ಬದ್ರಿಯಾ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ ಲಭಿಸಿದೆ.
ಶಾಲೆಯಿಂದ 22 ಬಾಲಕರು ಮತ್ತು 3 ಬಾಲಕಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿವಿಧ ವಿಭಾಗಗಳಲ್ಲಿ ಒಟ್ಟು 9 ಚಿನ್ನ, 11 ಬೆಳ್ಳಿ ಮತ್ತು 2 ಕಂಚು ಪದಕ ಲಭಿಸಿದೆ. ವಿಜೇತ ವಿದ್ಯಾರ್ಥಿಗಳಿಗೆ ಸ್ಪೀಕರ್ ಯು.ಟಿ. ಖಾದರ್ ಪ್ರಶಸ್ತಿ ವಿತರಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ನೆಲ್ಯಾಡಿ ಅಲ್ ಬದ್ರಿಯಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಧ್ಯಕ್ಷರಾದ ನಾಝೀಂ ಸಾಹೇಬ್, ಸದಸ್ಯರಾದ ರಫೀಕ್ ಅಲಂಪಾಡಿ ಉಪಸ್ಥಿತರಿದ್ದರು. ಕರಾಟೆ ಮಾಸ್ಟರ್ ಶಿಹಾಬ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.
