ಪುತ್ತೂರು; ಕಳೆದ 26 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಸಕ್ರೀಯರಾಗಿ ಪುತ್ತೂರು ವಿಧಾನಸಭಾ ಕ್ಷೆತ್ರದ ಅಧ್ಯಕ್ಷರಾಗಿದ್ದ, ಇದೀಗ ಜೆಡಿಎಸ್ ರಾಜ್ಯ ಕಾರ್ಯದರ್ಶಿಯಾಗಿರುವ ಇಬ್ರಾಹಿಂ ಗೋಳಿಕಟ್ಟೆಯವರು ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಯಾದರು.ಸೋಮವಾರ ಶಾಸಕ ಅಶೋಕ್ ರೈ ಅವರ ಕಚೇರಿಯಲ್ಲಿ ಪಕ್ಷದ ದ್ವಜ ನೀಡಿ ಶಾಸಕರು ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಇಬ್ರಾಹಿಂ ಗೋಳಿಕಟ್ಟೆಯವರು ಕಳೆದ 26 ವರ್ಷಗಳಿಂದ ಜೆಡಿಎಸ್ ಪಕ್ಷಕ್ಕಾಗಿ ಕೆಲಸ ಮಾಡಿದ್ದೆನೆ. ಪುತ್ತೂರಿನಲ್ಲಿ ಶಾಸಕ ಅಶೋಕ್ ರೈ ಅವರ ಕಾರ್ಯ ವೈಖರಿ ನನ್ನನ್ನು ಕಾಂಗ್ರೆಸ್ ಪಕ್ಷದತ್ತ ಆಕರ್ಷಿಸುವಂತೆ ಮಾಡಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಪುತ್ತೂರಿನಲ್ಲಿ ಅಭಿವೃಧ್ದಿ ಕೆಲಸಗಳು ನಡೆಯುತ್ತಿದೆ. ಪುತ್ತೂರಿನಲ್ಲಿ ನಾನು ಅನೇಕ ಶಾಸಕರನ್ನು ನೋಡಿದ್ದೇನೆ ಆದರೆ ಅಶೋಕ್ ರೈ ಅವರ ಹಾಗೆ ಯಾವ ಶಾಸಕರೂ ಕೆಲಸ ಮಾಡಿಲ್ಲ ಎಂದು ಹೇಳಿದ ಅವರು ಅಶೋಕ್ ರೈ ಅವರೇ ಮುಂದಿನ 15 ವರ್ಷಗಳ ಶಾಸಕರಾಗಿ ಬರಬೇಕು ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಶಾಸಕರ ಪರ ಕೆಲಸವನ್ನು ಮಾಡಲಿದ್ದೇವೆ ಎಂದು ಹೇಳಿದರು.
ಜೆಡಿಎಸ್ ಮೊದಲಿನಂತಿಲ್ಲ, ಕಮ್ಯುನಲ್ ಪಕ್ಷವಾಗಿದೆ;
ಮೊದಲು ಜೆಡಿಎಸ್ ಜಾತ್ಯಾತೀತವಾಗಿತ್ತು ಆದರೆ ಈಗ ಬಿಜೆಪಿಯೊಂದಿಗೆ ಸೇರಿದ ಬಳಿಕ ಜೆಡಿಎಸ್ ನಾಯಕರು ಸಮುದಾಯದ ವಿರುದ್ದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಇದು ನನ್ನಂತೆ ಹಲವರ ಮನಸ್ಸಿಗೆ ನೋವು ತಂದಿದೆ. ಜಾತ್ಯಾತೀತತೆಯ ಹೆಸರಿನಲ್ಲಿ ಪಕ್ಷವನ್ನು ಸಂಘಟಿಸಿ ಈಗ ಕೋಮುವಾದಿ ಬಿಜೆಪಿ ಜೊತೆ ಕೈ ಜೋಡಿಸಿಕೊಂಡ ಬಳಿಕ ಜೆಡಿಎಸ್ ನೆಲೆ ಕಳೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಕುಟುಂಬಕ್ಕೆ ಸ್ವಾಗತ:
ಗೋಳಿಕಟ್ಟೆಯನ್ನು ಪಕ್ಷದ ದ್ವಜ ನೀಡಿ ಬರಮಾಡಿಕೊಂಡ ಶಾಸಕರು, ಕಾಂಗ್ರೆಸ್ ಕುಟುಂಬಕ್ಕೆ ಸ್ವಾಗತ ಎಂದು ಹೇಳಿದರು. ಪಕ್ಷದ ಅಭಿವೃದ್ದಿಗಗಿ ಕೆಲಸ ಮಾಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪುತ್ತೂರು ಬ್ಲಾಕ್ ಅಲ್ಪಸಂಖ್ಯಾತರ ಘಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್ ದಬೆ, ಪಕ್ಷದ ಮುಖಂಡರಾದ ಶ್ರೀರಾಂ ಪಕ್ಕಳ, ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಸಂಟ್ಯಾರ್, ಬಶೀರ್ ಪರ್ಲಡ್ಕ, , ಅಝೀಝ್ದರ್ಬೆ, ಇಸ್ಮಾಯಿಲ್, ಅನ್ವರ್ ಕಬಕ ಮತ್ತಿತರರು ಉಪಸ್ಥತರಿದ್ದರು.
