ಪುತ್ತೂರು: ಸಂತ ಫಿಲೋಮಿನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಶೆಲ್ಎನ್ಎಕ್ಸ್ಫ್ಲೋರೆರ್ ಕಂಪನಿಯ ವತಿಯಿಂದ ವಿಜ್ಞಾನ ಮಾದರಿಗೆ ಸಂಬಂಧಿಸಿ ಒಂದು ದಿನದ ಕಾರ್ಯಗಾರವನ್ನು ನಡೆಸಲಾಯಿತು.
ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶೆಲ್ಎನ್ಎಕ್ಸ್ಪ್ಲೋರನ್ನ ಶಕೀರ್ ರವರು ಭಾಗವಹಿಸಿ, ಅನೇಕ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿಯನ್ನು ತಯಾರಿಸುವ ಹಂತಗಳನ್ನು ತಿಳಿಸಿಕೊಟ್ಟರು.
ವಿದ್ಯಾರ್ಥಿನಿ ಲಿನ್ ರೋಬೊ ಸ್ವಾಗತಿಸಿ, ಸಾರಾ ಫಾತಿಮಾ ವಂದಿಸಿದರು. ಶಾಲಾ ವಿದ್ಯಾರ್ಥಿಗಳಾದ ಮುಹಜಾಮ್ ಹಟ್ಟ ಮತ್ತು ಪ್ರಾಂಶಿ ಕಾರ್ಯಗಾರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು. ಶಾಲಾ ಮುಖ್ಯೋಪಾಧ್ಯಾಯನಿ ಭಗಿನಿ ಲೋರ ಪಾಯಸ್ ಹಾಗೂ ಶಿಕ್ಷಕಿ ದೀಪ್ತಿ ಮತ್ತು ಅನ್ವಿತಾ ಅವರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.
