ಪುತ್ತೂರು: ನರಿಮೊಗರು, ಮುಂಡೂರು ಹಾಗೂ ಶಾಂತಿಗೋಡು ಗ್ರಾಮ ವ್ಯಾಪ್ತಿಯ ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಸಂಘದ ಸಮಾಜ ಮಂದಿರದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಶ್ರೀ ದೇವಿ ಮಹಮ್ಮಾಯೆ ಅಮ್ಮನವರ ಗೋಂದೋಳು ಪೂಜೆಯು ನ.21 ರಂದು ನಡೆಯಲಿದೆ.
ಮಧ್ಯಾಹ್ನ ದೀಪಾರಾಧನೆ, ಸಾಮೂಹಿಕ ಪ್ರಾರ್ಥನೆ, ದೇವರ ಕೋಳಿಗಳಿಗೆ ಅನ್ನಪ್ರಸಾದ ಅರ್ಪಣೆ, ಅನ್ನಪ್ರಸಾದ, ಸಂಜೆ ಭೈರವ ಆರಾಧನೆ, ಗೋಂದೋಳು ಪೂಜೆ, ಬಲ್ನಾಡು ಸಾಜ ಶ್ರೀ ದುರ್ಗಾ ವೆಂಕಟ್ರಮಣ ಭಜನಾ ಮಂಡಳಿಯಿಂದ ಭಜನೆ, ಗುರು ಉಪದೇಶ ಬಳಿಕ ಅನ್ನಸಂತರ್ಪಣೆ, ರಾತ್ರಿ ಲಗೇಲೋ ಸೇವೆ, ಅಮ್ಮನವರ ನುಡಿ ಪ್ರಸಾದ, ಅಮ್ಮನವರ ಗದ್ದುಗೆ ಸೇರುವುದು, ಮಹಾ ಮಂಗಳಾರತಿ, ಪೂಜಾ ಪ್ರಸಾದ ಹಾಗೂ ಅನ್ನಪ್ರಸಾದ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಹಾಗೂ ಅಧ್ಯಕ್ಷ ಮಹಾಲಿಂಗ ನಾಯ್ಕ ನರಿಮೊಗರು, ಕಾರ್ಯದರ್ಶಿ ಕೃಷ್ಣ ನಾಯ್ಕ ಎನ್. ಸಂಪ್ಯ, ಕೋಶಾಧಿಕಾರಿ ಈಶ್ವರ ನಾಯ್ಕ ಅಜಲಾಡಿ, ಉಪಾಧ್ಯಕ್ಷರಾದ ಕೊರಗಪ್ಪ ನಾಯ್ಕ ಕಲ್ಲಮ, ಗೋಪಾಲ ನಾಯ್ಕ ಎಲಿಕ ಮತ್ತು ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಮರಾಟಿ ಯುವ ವೇದಿಕೆ ನರಿಮೊಗರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.