ಪುತ್ತೂರು:ಯಾವುದೇ ಪದವಿ ಓದಿರುವ ಮಹಿಳಾ ಅಭ್ಯರ್ಥಿಗಳಿಗೆ ಪ್ರತಿಷ್ಠಿತ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಒಂದು ವರ್ಷದ ಕಂಪ್ಯೂಟರ್ ಶಿಕ್ಷಕಿ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ನವೆಂಬರ್ 30 – 2025 ರೊಳಗಾಗಿ ಎಪಿಎಂಸಿ ರಸ್ತೆ ಪುತ್ತೂರು(ದ. ಕ) ಇಲ್ಲಿರುವ ವಿದ್ಯಾಮಾತಾ ಅಕಾಡೆಮಿಯ ಕಚೇರಿಗೆ ಬಯೋಡಾಟಾ ಮತ್ತು 2 ಪಾಸ್ಪೋರ್ಟ್ ಸೈಜ್ ಫೋಟೋದೊಂದಿಗೆ ಭೇಟಿಕೊಟ್ಟು ತಮ್ಮ ಹೆಸರನ್ನು ನೋಂದಾಯಿಸಲು ಈ ಮೂಲಕ ಸೂಚಿಸಲಾಗಿದೆ .
ತರಬೇತಿಯು ಆರು ತಿಂಗಳು ಮೊದಲ ಹಂತದ ತರಬೇತಿಯಾಗಿದ್ದು,ನಂತರ ಆರು ತಿಂಗಳು ಇಂಟರ್ನ್ ಶಿಪ್ ನ್ನು ಒಳಗೊಂಡಿರುತ್ತದೆ. ಎರಡನೇ ಹಂತದ ತರಬೇತಿಯಲ್ಲಿ ಇಂಟರ್ನ್ ಶಿಪ್ ನೊಂದಿಗೆ ತರಬೇತಿಯಲ್ಲಿರುವ ಅಭ್ಯರ್ಥಿಗೆ ಗೌರವಧನವನ್ನು ಕೂಡ ನೀಡಲಾಗುವುದು. ಒಂದು ವರ್ಷದ ತರಬೇತಿಯ ನಂತರ ಉದ್ಯೋಗವನ್ನು ಖಚಿತವಾಗಿ ಸಂಸ್ಥೆಯ ವತಿಯಿಂದಲೇ ನೀಡಲಾಗುತ್ತದೆ. ಮಹಿಳಾ ಅಭ್ಯರ್ಥಿಗಳಿಗೆ ಈ ಯೋಜನೆಯ ಲಭ್ಯವಿದ್ದು, ಆಸಕ್ತರು ತಕ್ಷಣವೇ ಹೆಸರನ್ನು ನೋಂದಾಯಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9620468869 ನ್ನು ಸಂಪರ್ಕಿಸಬಹುದು.
