ಗುಜರಾತ್‌ನಲ್ಲಿ ನಡೆಯುವ ಎನ್‌ಸಿಸಿ ಆರ್ಮಿ ಟ್ರಕ್ಕಿಂಗ್ ಎಕ್ಸ್ಪೆಡಿಷನ್-2025ಕ್ಕೆ ಕಡಬದ ಮೂರು ವಿದ್ಯಾರ್ಥಿಗಳ ಆಯ್ಕೆ

0

ಕಡಬ: ಗುಜರಾತ್‌ನಲ್ಲಿ ನ.25 ರಿಂದ ಡಿ.2ರವರೆಗೆ ನಡೆಯುವ ಎನ್‌ಸಿಸಿಯ ಆಲ್ ಇಂಡಿಯಾ ಎನ್‌ಸಿಸಿ ಆರ್ಮಿ ಟ್ರಕ್ಕಿಂಗ್ ಎಕ್ಸ್ಪೆಡಿಷನ್-2025ಕ್ಕೆ ಕಡಬದ ಮೋಕ್ಷಿತ್ ಪಿ.ಎ., ಅಭಿನವ್ ಡಿ ಹಾಗೂ ದಿಶಾಂತ್ ವಿ.ಆಯ್ಕೆಯಾಗಿದ್ದಾರೆ.


ಇವರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಮ್ಮಾಜೆ ಕಿನ್ನಿಗೋಳಿ ಇಲ್ಲಿನ 9ನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ. ಶಾಲೆಯ ಎನ್‌ಸಿಸಿ ಆರ್ಮಿ ವಿಂಗ್‌ನ ಕೆಡೆಟ್‌ಗಳಾದ ಇವರು 18 ಕರ್ನಾಟಕ ಎನ್‌ಸಿಸಿ ಬೆಟಾಲಿಯನ್ ಮಂಗಳೂರಿನಿಂದ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಎನ್.ಸಿ.ಸಿ ಅಧಿಕಾರಿ ಪ್ರವೀಣ್ ಪೂಜಾರಿ ತರಬೇತಿ ನೀಡಿದ್ದಾರೆ. ಮೋಕ್ಷಿತ್ ಪಿ.ಎ. ಇವರು ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ, ಪಿಜಕ್ಕಳ ಕೊಂಕ್ಯಾಡಿ ನಿವಾಸಿ ಆನಂದ ಗೌಡ-ಪೂರ್ಣಿಮಾ ಜಿ.ದಂಪತಿ ಪುತ್ರ. ಅಭಿನವ್ ಡಿ.ಎ. ಕೊಣಾಜೆ ಗ್ರಾಮದ ದೊಡ್ಡಮನೆ ಅಶೋಕ ಗೌಡ-ಪ್ರಶಾಂತಿ ದಂಪತಿ ಪುತ್ರ. ದಿಶಾಂತ್ ವಿ., ಮೆಸ್ಕಾಂ ಕಡಬ ಶಾಖಾ ಸಿಬ್ಬಂದಿ ವಾಸುದೇವ ಗೌಡ-ಮಮತ ದಂಪತಿಯ ಪುತ್ರ. ವಿದ್ಯಾರ್ಥಿಗಳನ್ನು ಸಮಾಜ ಕಲ್ಯಾಣ ಇಲಾಖೆ ಮಂಗಳೂರು ಇಲ್ಲಿನ ಉಪನಿರ್ದೇಶಕರು, ಸಂಸ್ಥೆಯ ಪ್ರಾಂಶುಪಾಲರಾದ ಡಾ.ಎನ್ ಪುಟ್ಟಸ್ವಾಮಿ ಮತ್ತು ಶಿಕ್ಷಕರು, ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here