ಈಶ್ವರಮಂಗಲ: ಜಾಗೃತ ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲ ಮತ್ತು ಆಯುಧ ಪೂಜಾ ಸೇವಾ ಸಮಿತಿ ಈಶ್ವರಮಂಗಲದ ವತಿಯಿಂದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಅಗತ್ಯವಾಗಿ ಬೇಕಾಗಿದ್ದ ಮೈಕ್, ಮೈಕ್ ಸ್ಟಾಂಡ್, ಕೇಬಲ್, ಮೈಕ್ರೋ ಫೋನ್ ಇನ್ನಿತರ ಸುಮಾರು 21 ಸಾವಿರ ಮೌಲ್ಯದ ವಸ್ತುಗಳನ್ನು ಕೊಡುಗೆಯಾಗಿ ನೀಡಲಾಯಿತು.
ಜಾಗೃತ ಹಿಂದೂ ಜಾಗರಣ ವೇದಿಕೆ ಮತ್ತು ಆಯುಧ ಪೂಜಾ ಸೇವಾ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಕಾರ್ಯಕರ್ತರಿಗೆ ದೇವಾಲಯದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.
ಈ ವೇಳೆ ಜಾಗರಣ ವೇದಿಕೆಯ ಗೌರವಾಧ್ಯಕ್ಷ ಮುಂಡ್ಯ ಶ್ರೀಕೃಷ್ಣ ಭಟ್, ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯ ಮೆಣಸಿನಕಾನ, ಅರ್ಚಕ ರವಿಂದ್ರ ಮಾಣಿಲತ್ತಾಯ, ಜಾಗೃತ ಹಿಂದೂ ಜಾಗರಣ ವೇದಿಕೆಯ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
