ವಿಟ್ಲ: ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ (ನಿ) ವಿಟ್ಲ ಶಾಖೆಯ ಗ್ರಾಹಕ ಸಂಪರ್ಕ ಸಭೆಯು ವಿಟ್ಲ ಶಾಖೆಯಲ್ಲಿ ನ.20ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸಹಕಾರ ರತ್ನ ಲ. ಎ ಸುರೇಶ್ ರೈ, ಸಂಘದ ಬೆಳವಣಿಗೆಗೆ ಗ್ರಾಹಕರ ಉತ್ತಮ ಸಲಹೆಗಳು ಬಹಳ ಅಗತ್ಯ. ಈ ನಿಟ್ಟಿನಲ್ಲಿ ನಾವು ಸಂಪರ್ಕ ಸಭೆಯನ್ನು ಆಯೋಜಿಸಿದ್ದೇವೆ. ಸಂಘದಲ್ಲಿ ಬ್ಯಾಂಕಿಂಗ್ ತತ್ವವನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆಯನ್ನು ನಮ್ಮ ಸಿಬ್ಬಂದಿಗಳು ನೀಡುತ್ತಿದ್ದಾರೆ. ಸಾಲ ನೀಡುವಂತಹ ಸಂದರ್ಭದಲ್ಲಿ ಅವರು ಕಟ್ಟುವ ಸಾಮರ್ಥ್ಯವನ್ನು ಪರಿಗಣಿಸಿ ಸಿಬಿಲ್ ನ್ನು ನೋಡಿಕೊಂಡು ಸಾಲ ನೀಡುತ್ತಿದ್ದೇವೆ. ಪ್ರತೀ ತಿಂಗಳು ಸಿಬ್ಬಂದಿಗಳ ಸಭೆಯನ್ನು ಕರೆದು ಶಾಖಾವಾರು ಪ್ರಗತಿ ಪರಿಶೀಲನೆ ನಡೆಸುತ್ತಿದ್ದೇವೆ. ಸಂಘ ಬೆಳವಣಿಗೆಗೆ ಸಹಕರಿಸಿದ ಎಲ್ಲಾ ಗ್ರಾಹಕ ಬಂಧುಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ ಎಂದರು.

ಈ ಸಭೆಯಲ್ಲಿ ಶಾಖಾ ಉಸ್ತುವಾರಿ ನಿರ್ದೇಶಕ ಗಣಪತಿ ಭಟ್ ಸೇರಾಜೆ, ನಿರ್ದೇಶಕರುಗಳಾದ ದೇವಪ್ಪ ನಾಯ್ಕ, ಜಯಪ್ರಕಾಶ್ ನೂಜಿಬೈಲು ಹಾಗೂ ಅಶೋಕ್ ಕುಮಾರ್ ಬಿಸಿರೋಡ್, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ ಉಪಸ್ಥಿತರಿದ್ದರು.
ಶಾಖಾಧಿಕಾರಿ ರಾಜೀವಿಯವರು ಪ್ರಾಸ್ತಾವಿಕ ಮಾತನಾಡಿ ಶಾಖೆಯ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ಗ್ರಾಹಕ ಬಂಧುಗಳಿಗೆ ಅಭಿನಂದಿಸುತ್ತಾ ಶಾಖೆಯ ಪ್ರಗತಿಯ ಪಕ್ಷಿನೋಟವನ್ನು ನೀಡಿ ಸಭೆಗೆ ಎಲ್ಲರನ್ನು ಸ್ವಾಗತಿಸಿದರು.
ಸಂಘದ ಸದಸ್ಯರಾದ ಸುರೇಶ್ ಬನಾರಿ, ಸೀತಾರಾಮ ಶೆಟ್ಟಿ ಒಕ್ಕೆತ್ತೂರು, ಚಂದ್ರಶೇಖರ ರೈ ಮುಡಿಮಾರು, ನಾರಾಯಣ ಬಳ್ಳಾಲ್ ರವರು ಉತ್ತಮ ಅನಿಸಿಕೆ ಹಾಗೂ ಸಲಹೆಗಳನ್ನು ನೀಡಿದರು. ಯೋಜನೆಯ ಮೇಲ್ವಿಚಾರಕಿ ಲೀಲಾ, ಸಂಯೋಜಕರು ಮತ್ತು ಸೇವಾಧೀಕ್ಷಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಶಾಖೆಯ ಸಿಬ್ಬಂದಿಗಳಾದ ವನಿತಾ ಮತ್ತು ಕುಮಾರಿ ಶ್ರದ್ಧಾ. ಜೆ. ಶೆಟ್ಟಿ ಪ್ರಾರ್ಥನೆ ಮಾಡಿದರು. ಸಿಬ್ಬಂದಿಗಳಾದ ನವ್ಯಾ ಎಸ್ ಕಾರ್ಯಕ್ರಮ ನಿರೂಪಿಸಿ, ಸ್ವಾತಿ ಧನ್ಯವಾದ ಗೈದರು.
ಕೇಂದ್ರ ಕಛೇರಿಯ ಸಿಬ್ಬಂದಿ ಗಿರೀಶ್ ಹಾಗೂ ಶಾಖೆಯ ಸಿಬ್ಬಂದಿ ಶ್ರೀಹರಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.