ಪುತ್ತೂರು: ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ, ಪುತ್ತೂರು ಮತ್ತು ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪುತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಲಿಟ್ಲ್ ಫ್ಲವರ್ ಶಾಲೆ ದರ್ಬೆ ಪುತ್ತೂರು ಶಾಲೆಯ ವಿದ್ಯಾರ್ಥಿಗಳು ಹಲವು ವಿಭಾಗದಲ್ಲಿ ಬಹುಮಾನಗಳನ್ನು ಪಡೆದು ಕೊಂಡಿದ್ದಾರೆ.
ಹಿರಿಯ ವಿಭಾಗದ ಕವನ ವಾಚನ ಆಕಾಶ್ ಡಿ ಪ್ರಥಮ, ಹಿರಿಯ ವಿಭಾಗದ ಕಥೆ ಹೇಳುವ ಸ್ಪರ್ಧೆಯಲ್ಲಿ ವೀಕ್ಷಾ ಡಿ. ಕೆ ಪ್ರಥಮ, ಕಿರಿಯ ವಿಭಾಗದ ಕಥೆ ಹೇಳುವ ಸ್ಪರ್ಧೆಯಲ್ಲಿ ಹಂಶಿಕಾ ಜಿ ಪ್ರಥಮ,ಹಿರಿಯ ವಿಭಾಗದ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಚಿಂತನ ಕೆ ದ್ವಿತೀಯ, ಕಿರಿಯ ವಿಭಾಗದ ಅಭಿನಯಗೀತೆ ಸ್ಪರ್ಧೆಯಲ್ಲಿ ತನ್ವಿ ಡಿ ದ್ವಿತೀಯ, ಹಿರಿಯ ವಿಭಾಗದ ಚಿತ್ರಕಲೆಯಲ್ಲಿ ಸಾಕ್ಷಿ ತೃತೀಯ ಹಾಗೂ ಕಿರಿಯ ವಿಭಾಗದ ಭಕ್ತಿಗೀತೆ ಸ್ಪರ್ಧೆಯಲ್ಲಿ ಧನ್ವಿಕಾ ಎಂ ಜಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿಜೇತರಾದ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯ ಶಿಕ್ಷಕಿ ಐರಿನ್ ವೇಗಸ್ ಬಿ ಎಸ್ ಅಭಿನಂದಿಸಿದ್ದಾರೆ.
