ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಪ್ರೇರಣಾ’ ಸ್ಪರ್ಧಾ ಕಾರ್ಯಕ್ರಮ

0

ಪೋಷಕರ ಸ್ಪರ್ಧಾ ಮನೋಭಾವ ಮಕ್ಕಳ ಸ್ಪರ್ಧಾಸಕ್ತಿಗೆ ಪ್ರೇರಕವಾಗಿದೆ – ಡಾ| ಆಶಾ


ಪುತ್ತೂರು: ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರ ಪ್ರಮುಖವಾದುದು. ಸ್ಪರ್ಧೆಗಳಲ್ಲಿ ಆಸಕ್ತಿ ಹಾಗೂ ಉತ್ಸಾಹದಿಂದ ಭಾಗವಹಿಸಿದಾಗ ಅದು ತಮ್ಮ ಮಗುವಿನ ವ್ಯಕ್ತಿತ್ವ ಬೆಳವಣಿಗೆಗೆ ಪ್ರೇರಣೆಯಾಗುತ್ತದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಡಾ. ಆಶಾ ಇವರು ಶಾಲೆಯಲ್ಲಿ ಪೋಷಕರ ಆಸಕ್ತಿಗೊಂದು ವೇದಿಕೆಯಾಗಿ ’ಪ್ರೇರಣಾ’ ಸ್ಪರ್ಧಾ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಸ್ಪರ್ಧಾರ್ಥಿಗಳಿಗೆ ಶುಭ ಹಾರೈಸಿದರು.


ಪೋಷಕರಿಗಾಗಿ ಪ್ರಬಂಧ, ಭಾಷಣ, ಚಿತ್ರಕಲೆ, ದೇಶಭಕ್ತಿಗೀತೆ, ಕಸದಿಂದ ರಸ, ಮೆಹಂದಿ ಹಾಕುವುದು, ಕೇಶವಿನ್ಯಾಸ, ಹೂಮಾಲೆ ಕಟ್ಟುವುದು, ಕವನ ರಚನೆ ಹಾಗೂ ಮನೋರಂಜನಾ ಸ್ಪರ್ಧೆಗಳನ್ನು ನಡೆಸಲಾಯಿತು. ಎಲಾ ಸ್ಪರ್ಧೆಗಳಲ್ಲಿ ಪೋಷಕರು ಸ್ಪರ್ಧಾ ಸ್ಫೂರ್ತಿಯಿಂದ ಭಾಗವಹಿಸಿದ್ದರು.


ವೇದಿಕೆಯಲ್ಲಿ ಶಾಲೆಯ ಹಿರಿಯ ಶಿಕ್ಷಕಿ ವೀಣಾಸರಸ್ವತಿ ಹಾಗೂ ಅನ್ನಪೂರ್ಣಾ ಸಮಿತಿಯ ಅಧ್ಯಕ್ಷರಾದ ಶ್ಯಾಮಲ ನಾಯಕ್ ಉಪಸ್ಥಿತರಿದ್ದರು. ಶಾಲಾ ಸಹಶಿಕ್ಷಕರಾದ ಲಕ್ಷ್ಮೀ, ಸ್ವಾತಿ, ಕೃಪಾ, ಜಯಲಕ್ಷ್ಮೀ ಸ್ಪರ್ಧಾ ಚಟುವಟಿಕೆಗಳ ಆಯೋಜನೆಯಲ್ಲಿ ಸಹಕರಿಸಿದರು. ಸಹಶಿಕ್ಷಕಿ ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here