ನ.22 : ಪುತ್ತೂರು ತಾ| ಬಂಟರ ಸಂಘದಿಂದ ಡಾ| ಕೂಳೂರು ಕನ್ಯಾನ ಸದಾಶಿವ ಶೆಟ್ಟಿಯವರಿಗೆ ಸನ್ಮಾನ, ವಿವಿಧ ಕ್ಷೇತ್ರಗಳ 14 ಸಾಧಕರಿಗೆ ಚಿನ್ನದ ಪದಕ ಪ್ರಶಸ್ತಿ

0

ಪುತ್ತೂರು: ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲ್ಲೂಕು ಸಮಿತಿ ಇದರ ಮಾರ್ಗದರ್ಶನದಲ್ಲಿ ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದಲ್ಲಿ ನ.22 ರಂದು ಪುತ್ತೂರು ಬಂಟರ ಭವನದಲ್ಲಿ ನಡೆಯಲಿರುವ ಬಂಟೆರೆ ಸೇರಿಗೆ ಕಾರ್‍ಯಕ್ರಮದಲ್ಲಿ ಉದ್ಯಮ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡುತ್ತಿರುವ ಹೇರಂಭಾ ಗ್ರೂಪ್ ಕಂಪೆನಿಯ ಸಂಸ್ಥಾಪಕ ಡಾ| ಕೂಳೂರು ಕನ್ಯಾನ ಸದಾಶಿವ ಶೆಟ್ಟಿಯವರು ಸುವರ್ಣ ಕರ್ನಾಟಕ ಪ್ರಶಸ್ತಿ ಹಾಗೂ ಡಾಕ್ಟರೇಟ್ ಪದವಿಯನ್ನು ಪಡೆದಿರುವ ಹಿನ್ನೆಲೆಯಲ್ಲಿ ಉದ್ಯಮ ಕ್ಷೇತ್ರದ ಸಾಧಕರ ನೆಲೆಯಲ್ಲಿ ಪುತ್ತೂರು ತಾಲೂಕು ಬಂಟರ ಸಂಘದಿಂದ ಸನ್ಮಾನ ಕಾರ್‍ಯಕ್ರಮ ನಡೆಯಲಿದೆ.

ವಿವಿಧ ಕ್ಷೇತ್ರಗಳ 14 ಸಾಧಕರಿಗೆ ಚಿನ್ನದ ಪದಕ ಪ್ರಶಸ್ತಿ
ಬನ್ನೂರುಗುತ್ತು ತಾರಾ ಅಂತಪ್ಪ ಶೆಟ್ಟಿ ಕಾವು ಬಂಟ ಶಿರೋಮಣಿ ಪ್ರಶಸ್ತಿಯನ್ನು ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈಯವರಿಗೆ (ಪ್ರಾಯೋಜಕರು- ಕಾವು ಹೇಮನಾಥ ಶೆಟ್ಟಿ), ಮಿತ್ರಂಪಾಡಿ ಚೆನ್ನಪ್ಪ ರೈ ಸ್ಮರಣಾರ್ಥ ಸಮಾಜ ಸೇವಾ ಮಿತ್ರ ಪ್ರಶಸ್ತಿಯನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‌ರವರಿಗೆ (ಪ್ರಾಯೋಜಕರು- ಜಯರಾಮ್ ರೈ ಮಿತ್ರಂಪಾಡಿ ಅಬುಧಾಬಿ), ಬೂಡಿಯಾರ್ ವೈದ್ಯಕೀಯ ಪ್ರತಿಷ್ಠಿತ ಪ್ರಶಸ್ತಿಯನ್ನು ಡಾ. ಶ್ಯಾಮ್‌ಪ್ರಸಾದ್ ಶೆಟ್ಟಿ ಬೆಳ್ಳಿಪ್ಪಾಡಿಯವರಿಗೆ (ಪ್ರಾಯೋಜಕರು- ಡಾ. ಬೂಡಿಯಾರ್ ಸಂಜೀವ ರೈ), ಸಾಧಕ ಸಹಕಾರಿ ರಶ್ಮಿ ಪ್ರಶಸ್ತಿಯನ್ನು ಶಶಿಕುಮಾರ್ ರೈ ಬಾಲ್ಯೊಟ್ಟುರವರಿಗೆ (ಪ್ರಾಯೋಜಕರು- ಸವಣೂರು ಕೆ.ಸೀತಾರಾಮ ರೈ), ಪುತ್ತೂರು ಬಂಟಸಿರಿ ಪ್ರಶಸ್ತಿಯನ್ನು ಆಪ್ತ ಸಮಾಲೋಚಕಿ ರಾಣಿ ಶೆಟ್ಟಿಯವರಿಗೆ (ಪ್ರಾಯೋಜಕರು- ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ), ಉತ್ತಮ ಶಿಕ್ಷಕ ಅಶ್ವಿನಿ ಪ್ರಶಸ್ತಿಯನ್ನು ವಿಠಲ ರೈ ಕೊಣಾಲುಗುತ್ತುರವರಿಗೆ (ಪ್ರಾಯೋಜಕರು- ದೇರ್ಲ ಕರುಣಾಕರ್ ರೈ), ಪಂಚಮಿ ಉದ್ಯಮಿ ಸಿರಿ ಪ್ರಶಸ್ತಿಯನ್ನು ಎನ್. ಶಿವಪ್ರಸಾದ್ ಶೆಟ್ಟಿ ಕಿನಾರರವರಿಗೆ (ಪ್ರಾಯೋಜಕರು- ಮಿತ್ರಂಪಾಡಿ ಪುರಂದರ ರೈ), ಸಿರಿ ಕಡಮಜಲು ಕೃಷಿ ಪ್ರಶಸ್ತಿಯನ್ನು ಸುಧಾಕರ್ ರೈ ಪರಾರಿಗುತ್ತುರವರಿಗೆ (ಪ್ರಾಯೋಜಕರು- ಕಡಮಜಲು ಸುಭಾಸ್ ರೈ), ದಿ.ರೇಖಾ ಮುತ್ತಪ್ಪ ರೈ ಮತ್ತು ದಿ.ಜಯಂತ್ ರೈ ಸ್ಮರಣಾರ್ಥ ಕ್ರೀಡಾ ಪ್ರಶಸ್ತಿಯನ್ನು ಸದಾಶಿವ ಶೆಟ್ಟಿ ಅಜಿಲಾಡಿಬೀಡುರವರಿಗೆ (ಪ್ರಾಯೋಜಕರು- ಎನ್.ಚಂದ್ರಹಾಸ್ ಶೆಟ್ಟಿ), ಅರಣ್ಯಾಧಿಕಾರಿ ದಿ. ಮಂಜುನಾಥ ಶೆಟ್ಟಿ ಪನಡ್ಕ ಸ್ಮರಣಾರ್ಥ ಅರಣ್ಯ ಮಿತ್ರ ಪ್ರಶಸ್ತಿಯನ್ನು ಪಿ.ಡಿ.ಕೃಷ್ಣಕುಮಾರ್ ರೈ ಪುಣ್ಚಪ್ಪಾಡಿ ದೇವಸ್ಯರವರಿಗೆ (ಪ್ರಾಯೋಜಕರು- ವಿಜಯಾ ಮಂಜುನಾಥ ಶೆಟ್ಟಿ), ದೇಶ ಸೇವಾ ಅಗರಿ ಪ್ರಶಸ್ತಿಯನ್ನು ಜಗನ್ನಾಥ ರೈ ಎಂರವರಿಗೆ ( ಪ್ರಾಯೋಜಕರು- ಅಗರಿ ಭಂಡಾರಿ ಸಹೋದರರು), ಪಿಯುಸಿ ವಿಭಾಗದ ಪ್ರತಿಭಾನ್ವಿತ ವಿದ್ಯಾ ಅರಿಯಡ್ಕ ಪ್ರಶಸ್ತಿಯನ್ನು ವರ್ಷಿಣಿ ಆಳ್ವರವರಿಗೆ (ಪ್ರಾಯೋಜಕರು- ಅರಿಯಡ್ಕ ಚಿಕ್ಕಪ್ಪ ನಾಕ್), ಎಸ್‌ಎಸ್‌ಎಲ್‌ಸಿ ವಿಭಾಗದ ಪ್ರತಿಭಾನ್ವಿತ ವಿದ್ಯಾ ಚನಿಲ ಪ್ರಶಸ್ತಿಯನ್ನು ಅನ್ವಿತಾ ರೈಯವರಿಗೆ( ಪ್ರಾಯೋಜಕರು- ಚನಿಲ ತಿಮ್ಮಪ್ಪ ಶೆಟ್ಟಿ), ಬೂಡಿಯಾರ್ ಮಹಿಳಾ ಕೃಷಿ ಪ್ರಶಸ್ತಿಯನ್ನು ದಯಾ ವಿ. ರೈ ಕೇಕಾನಜೆ (ಪ್ರಾಯೋಜಕರು-ಗುಲಾಬಿ ಎಂ. ಚೌಟ ಮತ್ತು ಮಕ್ಕಳು) ರವರಿಗೆ ನೀಡಲಾಗುವುದು ಎಂದು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಹಾಗೂ ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಸಾಜ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here