ಪ್ರಗತಿ ವಿಸ್ತಾರ ಏವಿಯೇಷನ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಬಿಬಿಎ, ಡಿಪ್ಲೋಮಾ ವಿದ್ಯಾರ್ಥಿ ಪೋಷಕ-ಶಿಕ್ಷಕರ ಸಭೆ

0

ಪುತ್ತೂರು: ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿರುವ ಮನೈ ಆರ್ಕೆಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಷನ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಬಿಬಿಎ ವಿದ್ಯಾರ್ಥಿಗಳ 2025 26ನೇ ಸಾಲಿನ ಪೋಷಕರ ಸಭೆ ನ.18ರಂದು ಹಾಗೂ ಮೊದಲ ಬ್ಯಾಚ್ ಡಿಪ್ಲೋಮಾ ವಿದ್ಯಾರ್ಥಿಗಳ ಎರಡನೇ ಪೋಷಕರ ಸಭೆಯು ನ.22ರಂದು ಕಾಲೇಜಿನ ವಿಚಾರ ಸಂಕಿರಣ ಕೊಠಡಿಯಲ್ಲಿ ನಡೆಯಿತು.

ಸಭೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮುಂಬರುವ ಇಂಟರ್ವ್ಯೂ ಹಾಗೂ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಸಂಸ್ಥೆಯ ಉಪಾಧ್ಯಕ್ಷೆ ಹೇಮಲತ ಗೋಕುಲ್ ನಾಥ್,ಅವರು ಏವಿಯೇಶನ್ ಪದವಿಯ ಮಹತ್ವ, ಕಾಲಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಹೇಗೆ ಪದವಿಗೆ ಸಿದ್ದರಾಗಬೇಕು ಹಾಗೂ ಟೈಮ್ ಮ್ಯಾನೇಜ್‌ಮೆಂಟ್ ನ ಮಹತ್ವದ ಕುರಿತು ಹಾಗೂ ಉದ್ಯೋಗ ಆಧಾರಿತ  ಹೆಚ್ಚುವರಿ ಸರ್ಟಿಫಿಕೇಟ್ ಕೋರ್ಸ್ ಅನ್ನು AASSC (Aerospace and Aviation Sector Skill Council) ಸರ್ಟಿಫಿಕೇಟ್ ನೊಂದಿಗೆ ಒದಗಿಸುವ ಬಗ್ಗೆ,   ಉಚಿತ ATC (Air Traffic Control) ಭೇಟಿ ಹಾಗೂ In-flight training  ಬಗ್ಗೆ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಗಳ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸಂಸ್ಥೆಯ ಪ್ರಾಂಶುಪಾಲೆ ಮಾಧವಿ ಎಂ ಸಿ, ಆಡಳಿತಾಧಿಕಾರಿ, ಉಸನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here