2ನೇ ಕಂತಿನ ಅಕ್ಕಿಯನ್ನು ಹುಟ್ಟು ಹಬ್ಬದ ದಿನ ಸಮರ್ಪಣೆ ಮಾಡಿದ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿಯಿಂದ 12 ಕ್ವಿಂಟಾಲ್ ಅಕ್ಕಿ ಸಮರ್ಪಣೆಯ ವಾಗ್ದಾನದ ಹಿನ್ನೆಲೆಯಲ್ಲಿ 2ನೇ ಕಂತಿನ ಅಕ್ಕಿಯನ್ನು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿಯವರು ತನ್ನ ಹುಟ್ಟುಹಬ್ಬದ ದಿನವಾದ ನ.25ರಂದು ಸಮರ್ಪಣೆ ಮಾಡಿದರು.
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ದೇವಳದಲ್ಲಿ ಅನ್ನಪ್ರಸಾದ ವಿತರಣೆಗೆ ಅಕ್ಕಿ ಸಂಗ್ರಹಿಸುವ ಅಭಿಯಾನ ಕೈಗೊಂಡ ಸಂದರ್ಭದಲ್ಲಿ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯಿಂದ ವರ್ಷಕ್ಕೆ 12 ಕ್ವಿಂಟಾಲ್ ಅಕ್ಕಿಯ ವಾಗ್ದಾನ ಮಾಡಿದ್ದರು. ಅದರ ಸಲುವಾಗಿ ಆರಂಭದಲ್ಲಿ 1 ಕ್ವಿಂಟಾಲ್ ಅಕ್ಕಿಯನ್ನು ಸಮಿತಿಯಿಂದ ನೀಡಲಾಗಿತ್ತು. ಇದೀಗ 2ನೇ ಕಂತಿನ ಅಕ್ಕಿಯನ್ನು ಎನ್ ಚಂದ್ರಹಾಸ ಶೆಟ್ಟಿಯವರು ತನ್ನ ಹುಟ್ಟು ಹಬ್ಬದ ಸಂದರ್ಭದಲ್ಲಿ ಸಮರ್ಪಣೆ ಮಾಡಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಪ್ರಾರ್ಥನೆ ಮಾಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ದೇವಳದ ಗೌರವಾರ್ಥವಾಗಿ ಶಲ್ಯ ಹೊದಿಸಿ ಗೌರವಿಸಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ ಉಪಸ್ಥಿತರಿದ್ದರು.
