ಅಧ್ಯಕ್ಷ ಸುರೇಶ್ ದೇವಸ್ಯ, ಕಾರ್ಯದರ್ಶಿ ರಂಜಿತ್ ಶೆಟ್ಟಿ, ಖಜಾಂಚಿ ರಮಾನಾಥ ಶೆಟ್ಟಿ
ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರುಪಂಜ ಶ್ರೀ ದುರ್ಗಾ ಸೇವಾ ಸಮಿತಿಯ ಆಶ್ರಯದಲ್ಲಿರುವ ಶ್ರೀ ದುರ್ಗಾ ಭಜನಾ ಮಂದಿರದ ನೂತನ ಅಧ್ಯಕ್ಷರಾಗಿ ಸುರೇಶ್ ದೇವಸ್ಯ, ಕಾರ್ಯದರ್ಶಿಯಾಗಿ ರಂಜಿತ್ ಶೆಟ್ಟಿ ದೇವಸ್ಯ ಹಾಗೂ ಕೋಶಾಧಿಕಾರಿಯಾಗಿ ರಮಾನಾಥ ಶೆಟ್ಟಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಚಂದ್ರಶೇಖರ ವಿಶ್ವಕರ್ಮ, ಜೊತೆ ಕಾರ್ಯದರ್ಶಿಯಾಗಿ ರೇಖಾ ಕುಲಾಲ್, ಸದಸ್ಯರಾಗಿ ರಾಜೇಶ್ ಬಂಗಾರಡ್ಕ, ಜಗದೀಶ್ ವಳತ್ತಡ್ಕ, ಪ್ರಮೋದ್ ಕುಮಾರ್ ಜೈನ್, ಮಮತಾ, ಮಹಿಳಾ ಸಮಿತಿಯ ಅಧ್ಯಕ್ಷರಾಗಿ ವೀಣಾ ಮೇಗಿನಪಂಜ, ಕಾರ್ಯದರ್ಶಿಯಾಗಿ ಧನ್ಯ ಸುರೇಶ್ ಕುಂಜೂರುಪಂಜ, ಪದಾಧಿಕಾರಿಗಳಾಗಿ ಉಮಾವತಿ ರೈ ಗೆಣಸಿನಕುಮೇರು, ಅಶ್ವಿತಾ ಕುಂಜೂರುಪಂಜ, ಕುಸುಮ ವಳತಡ್ಕ, ಚೈತ್ರ ದೇವಸ್ಯ, ಜಾನಕಿ ಕುಂಜೂರುಪಂಜ, ಆಶಾ ದೇವಸ್ಯ, ಸುನಿತಾ ಮೇಗಿನಪಂಜ, ನಯನ ಮೇಗಿನಪಂಜ, ವಿದ್ಯಾ ಕುಂಜೂರುಪಂಜ, ಸವಿತಾ ಡೆಂಜಿಬಾಗಿಲು ಆಯ್ಕೆಯಾಗಿದ್ದಾರೆ.
ಮಂದಿರದ ಅಧ್ಯಕ್ಷ ರಾಧಾಕೃಷ್ಣ ಜಿ ಇವರ ಅಧ್ಯಕ್ಷತೆಯಲ್ಲಿ ನ.23ರಂದು ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಎರಡು ವರ್ಷದ ಆಯವ್ಯಯ ಮಂಡಿಸಿ ಅನುಮೋದನೆ ಪಡೆಯಲಾಯಿತು. ಭಜನಾ ಮಂದಿರದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಮಹಿಳಾ ಸಮಿತಿಯನ್ನು ರಚಿಸುವುದು ಹಾಗೂ ಮುಂದಿನ ಶುಕ್ರವಾರದಿಂದ ಮನೆ ಮನೆ ಭಜನೆ ಪ್ರಾರಂಭ ಮಾಡುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಗುರುರಾಜ್ ಕಲ್ಲೂರಾಯ ಕುಂಜೂರು ಪಂಜ ಹಾಗೂ ಇರುವೆರು ಉಲ್ಲಾಕ್ಲು ದೈವಸ್ಥಾನದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ತಿಮ್ಮಪ್ಪ ನಾಯಕ ಜಂಗಮುಗೇರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.
ಭವಿಷ್ಯ ದೇವಸ್ಯ ಪ್ರಾರ್ಥಿಸಿದರು. ಅರುಣ್ ಕುಮಾರ್ ವಂದಿಸಿದರು. ರಂಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜಗದೀಶ್ ಹಾಗೂ ಸದಸ್ಯರು ಸಹಕರಿಸಿದರು. ಸಭೆಯ ಬಳಿಕ ಅಧ್ಯಕ್ಷರಾದ ರಾಧಾಕೃಷ್ಣ ಜಿ ಉಪಹಾರ ಏರ್ಪಡಿಸಿದ್ದರು. ಭಜನಾ ಮಂದಿರದ ಮಾಜಿ ಪದಾಧಿಕಾರಿಗಳು, ಸದಸ್ಯರು, ಗಣೇಶೋತ್ಸವ ಸಮಿತಿಯ ಮಾಜಿ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಮಾಜಿ ಪದಾಧಿಕಾರಿಗಳು ಸದಸ್ಯರು, ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಸದಸ್ಯರು ಸಭೆಯಲ್ಲಿ ಉಪಸ್ಥಿತದ್ದರು.