ಒಳಮೊಗ್ರು ಗ್ರಾಪಂನಲ್ಲಿ ಸಂವಿಧಾನ ದಿನಾಚರಣೆ- ಉಗ್ರರ ದಾಳಿಯಲ್ಲಿ ಮಡಿದವರಿಗೆ ನಮನ

0

ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್‌ನಲ್ಲಿ ಸಂವಿಧಾನ ದಿನಾಚರಣೆಯನ್ನು ಸಂವಿಧಾನ ಪೀಠಿಕೆಯನ್ನು ಒದುವ ಮೂಲಕ ಆಚರಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಕೆ.ರವರು ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. 2008 ನವೆಂಬರ್ 26 ಮುಂಬಯಿ ತಾಜ್ ಹೋಟೆಲ್ ಉಗ್ರ ದಾಳಿಯಲ್ಲಿ ಮಡಿದ ನಾಗರೀಕರಿಗೆ ಹಾಗೂ ಹುತಾತ್ಮರಾದ ಯೋಧರಿಗೆ ಇದೇ ಸಂದರ್ಭದಲ್ಲಿ ನಮನವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಮಹೇಶ್ ಕೇರಿ, ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕ, ಸುಂದರಿ, ಲತೀಫ್, ಗ್ರಾಪಂ ಕಾರ್ಯದರ್ಶಿ ಜಯಂತಿ, ನರೇಗಾ ತಾಂತ್ರಿಕ ಸಿಬ್ಬಂದಿಗಳು, ಅಂಚೆ ಪಾಲಕರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here