ಪುತ್ತೂರು: ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದ ಶಶಿಧರ ರಾವ್ ಬೊಳಿಕ್ಕಲರವರ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ನ.26 ರಂದು ಚುನಾವಣೆ ನಡೆಯಿತು. ಸಂಘದ ಉಪಾಧ್ಯಕ್ಷರಾಗಿದ್ದ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತುರವರು ಮಾತ್ರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾ ಅಧಿಕಾರಿಯಾಗಿದ್ದ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಛೇರಿ ಪುತ್ತೂರು ಉಪ ವಿಭಾಗದ ಮಾರಾಧಿಕಾರಿ, ರಿಟರ್ನಿಂಗ್ ಅಧಿಕಾರಿ ಶೋಭಾ ಎನ್.ಎಸ್ರವರು ಕೃಷ್ಣ ಕುಮಾರ್ ರೈಯವರನ್ನು ಸಂಘದ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದರು. ಸಂಘದ ನಿರ್ದೇಶಕ ಎಸ್.ಬಿ.ಜಯರಾಮ ರೈ ಬಳಜ್ಜ ಸೂಚಕರಾಗಿ, ನಿರ್ದೇಶಕ ಜನಾರ್ದನ್ ರೈ ಪಡ್ಡಂಬೈಲು ಅನುಮೋದಕರಾಗಿ ಸಹಕರಿಸಿದ್ದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಎಸ್.ಬಿ.ಜಯರಾಮ ರೈ ಬಳಜ್ಜ, ತಾರಾನಾಥ ಕಂಪ, ಜನಾರ್ದನ ರೈ ಪಡ್ಡಂಬೈಲು, ರಿತೇಶ್ ಎಂ, ಸೀತಾರಾಮ ಗೌಡ ಇದ್ಯಪೆ, ಪುಷ್ಪಲತಾ ಜೆ ರೈ,ಜಯಂತಿ, ಲೋಕೇಶ್ ಬಿ, ಪ್ರವೀಣ, ಸಂತೋಷ್ ಕುಮಾರ್ ರೈ ಕೋರಂಗ, ಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕ ಶರತ್ ಡಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಕುಮಾರ್ ರೈ ದೇರ್ಲ, ಕೆಯ್ಯೂರು ಶಾಖಾ ವ್ಯವಸ್ಥಾಪಕರಾದ ನಿರುಪಮ, ಸಿಬ್ಬಂದಿಗಳಾದ ಪ್ರೀತಮ್ ಬಿ.ರೈ, ಕೌಶಲ್ಯ ಎಂ, ದುರ್ಗಾಕಿರಣ್ ರೈ, ಭವ್ಯ, ಐತ್ತಪ್ಪ ನಾಯ್ಕ್, ಅಣ್ಣು ತಿಂಗಳಾಡಿ, ಪ್ರದೀಪ, ಕೊರಗಪ್ಪ ಪೂಜಾರಿ ಸಹಕರಿಸಿದ್ದರು.
ಗಣ್ಯರ ಆಗಮನ ಅಭಿನಂದನೆ ಸಲ್ಲಿಕೆ
ಕೆದಂಬಾಡಿಗುತ್ತು ಕೃಷ್ಣ ಕುಮಾರ್ ರೈಯವರು ಅಧ್ಯಕ್ಷರಾಗುತ್ತಿದ್ದಂತೆ ಹಲವು ಮಂದಿ ಗಣ್ಯರು ಸ್ಥಳಕ್ಕೆ ಆಗಮಿಸಿ ಅಭಿನಂದನೆ ಸಲ್ಲಿಸಿದರು. ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕಾರ್ಯದರ್ಶಿಗಳಾದ ಸುನೀಲ್ ದಡ್ಡು, ಹರಿಪ್ರಸಾದ್ ಯಾದವ್, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಸಹಕಾರ ಭಾರತಿ ಕಾರ್ಯದರ್ಶಿ ಮೋಹನ್ ಕುಂಡಾಪು, ಕೋಶಾಧಿಕಾರಿ ನೌಹುಷ ಭಟ್, ಕೆದಂಬಾಡಿ ಗ್ರಾಪಂ ಮಾಜಿ ಅಧ್ಯಕ್ಷ, ಗ್ರಾಮಾಂತರ ಮಂಡಲ ಕಾರ್ಯದರ್ಶಿ ರತನ್ ರೈ ಕುಂಬ್ರ, ಬಿಜೆಪಿ ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಮುಂಡಾಲಗುತ್ತು ಮೋಹನ ಆಳ್ವ, ಶರತ್ ರೈ ದೇರ್ಲ, ಶರತ್ ಗುತ್ತು ಸೇರಿದಂತೆ ಹಲವು ಮಂದಿ ಆಗಮಿಸಿ ಹೂ ಹಾರಾರ್ಪಣೆಯೊಂದಿಗೆ ಅಭಿನಂದನೆ ಸಲ್ಲಿಸಿದರು.
ಹಿರಿಯ ಸಹಕಾರಿ ಧುರೀಣ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು
ಸಹಕಾರಿ ಕ್ಷೇತ್ರದ ಹಿರಿಯ ಧುರೀಣರಾಗಿರುವ ಕೆದಂಬಾಡಿಗುತ್ತು ಕೃಷ್ಣ ಕುಮಾರ್ ರೈಯವರು ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 22 ವರ್ಷಗಳಿಂದ ನಿರ್ದೇಶಕರಾಗಿ ಕಳೆದ 2 ವರ್ಷಗಳಿಂದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರು 2005 ರಿಂದ ಪುತ್ತೂರು ಟಿಎಪಿಸಿಎಂಎಸ್ನ ಉಪಾಧ್ಯಕ್ಷರಾಗಿ ಪ್ರಸ್ತುತ 15 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಲ್ಲದೆ ಸಹಕಾರಿ ಭಾರತಿ ಪುತ್ತೂರು ತಾಲೂಕು ಅಧ್ಯಕ್ಷರಾಗಿ, ಎಪಿಎಂಸಿ ನಿರ್ದೇಶಕರಾಗಿ, ಕೆದಂಬಾಡಿ ಗ್ರಾಮ ಪಂಚಾಯತ್ ಸದಸ್ಯರಾಗಿ, ಶ್ರೀ ಕೃಷ್ಣ ಮಿತ್ರವೃಂದದ ಅಧ್ಯಕ್ಷರಾಗಿ, ಶ್ರೀ ದೇವತಾ ಸಮಿತಿ ದೇವಗಿರಿ ಇದರ ಕಾರ್ಯದರ್ಶಿಯಾಗಿ ಪ್ರಸ್ತುತ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ, ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿಯಾಗಿ ಹೀಗೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.