ಪುತ್ತೂರು: ಬೀರ್ನಹಿತ್ಲು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಇತ್ತೀಚೆಗೆ ಜರಗಿತು.
ಕಾರ್ಯಕ್ರಮದಲ್ಲಿ ಮಕ್ಕಳು ಆಟವಾಡುವ ಉಯ್ಯಾಲೆಗೆ ಶೀಟ್ ಮೆಲ್ಚ್ವಾಣಿಯನ್ನು ಒದಗಿಸಿಕೊಟ್ಟ ಮಹಾಲಿಂಗೇಶ್ವರ ವುಡ್ &ಇಂಜಿನಿಯರ್ ವರ್ಕ್ಸ್ನ ಮಾಲಕರಾದ ದಯಾನಂದ ಗೌಡ ಕೆಮ್ಮಾಯಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಅರುಣಾ, ಬನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ತಿಮ್ಮಪ್ಪ ಪೂಜಾರಿ, ರಾಘವೇಂದ್ರ ಅಂದ್ರಟ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
