ನೆಲ್ಯಾಡಿ: ಪತಿ ಅನಾರೋಗ್ಯದಿಂದ ಮೃತಪಟ್ಟಿದ್ದು ಒಬ್ಬಂಟಿಯಾಗಿ ವಾಸವಾಗಿದ್ದ ಕೌಕ್ರಾಡಿ ಗ್ರಾಮದ ಪುತ್ಯೆ ನಿವಾಸಿ, ಬಡ ಮಹಿಳೆ ಜಾನಕಿಯವರ ಹೊಸ ಮನೆ ನಿರ್ಮಾಣದ ಹಿನ್ನೆಲೆಯಲ್ಲಿ ಹಳೆಯ ಮನೆಯ ಶೀಟು ಹಾಗೂ ಗೋಡೆಯ ಇಟ್ಟಿಗೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು ಇದರ ನೆಲ್ಯಾಡಿ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು ಶ್ರಮದಾನದ ಮೂಲಕ ತೆರವುಗೊಳಿಸಿದರು.

ಶ್ರಮದಾನದ ನಂತರ ಘಟಕದ ಮಾಸಿಕ ಸಭೆಯನ್ನು ನೆಲ್ಯಾಡಿ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಪ್ರತಿನಿಧಿ ರಮೇಶ್ ಬಾಣಜಾಲುರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ವಲಯ ಮೇಲ್ವಿಚಾರಕರಾದ ಆನಂದ ಡಿ.ಬಿ., ಘಟಕ ಸಂಯೋಜಕಿ ನಮಿತಾ ಎಸ್ ಶೆಟ್ಟಿ, ಕೌಕ್ರಾಡಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಸುಮನಾ ಎಸ್., ಶೌರ್ಯ ಘಟಕದ ಸ್ವಯಂ ಸೇವಕರಾದ ಬಾಲಕೃಷ್ಣ ಗೌಡ, ಕುರಿಯಕೋಸ್ ಟಿ.ಎಂ., ಸಂತೋಷ್ ಕುಮಾರ್, ಚಂದ್ರ ಕೆ.ಯನ್., ಜೋಬಿ ಮತ್ತಾಯಿ, ಗೀತಾ, ರಮೇಶ್ ಬಿ, ಜಯಂತಿ, ಹೇಮಾ ವಿ ಭಾಗವಹಿಸಿದ್ದರು.