ಪುತ್ತೂರು: ಕುಡಿಯುವ ನೀರಿಗೆ ಮಲವಿಸರ್ಜನೆ ಮಾಡಿ ಜಾತಿ ನಿಂದನೆ: ಆರೋಪಿಗೆ ಶಿಕ್ಷೆ ಪ್ರಕಟ

0

ಪುತ್ತೂರು: ಸುಳ್ಯ ತಾಲೂಕು ಕೆಮ್ರಾಜೆಯ ಗಿರೀಶ ಎಂಬಾತ 3-11-2017 ರಂದು ಪರಿಶಿಷ್ಟ ಜಾತಿಗೆ ಸೇರಿದ ಮರ್ಕಂಜ ಗ್ರಾಮದ ಗುಂಡಿಮಜಲಿನ ಮಹಿಳೆಯೋರ್ವರು ಕುಡಿಯಲು ಮತ್ತು ಗೃಹ ಬಳಕೆಗಾಗಿ ಶೇಖರಿಸಿಟ್ಟ ನೀರಿನ ಬ್ಯಾರೆಲ್‌ನಲ್ಲಿ ಮಲವಿಸರ್ಜನೆ ಮಾಡಿ ನೀರನ್ನು ಮಲಿನ ಮಾಡಿದ್ದು ಇದನ್ನು ವಿಚಾರಿಸಲು ಬಂದ ಮಹಿಳೆ ಮತ್ತು ಅವರ ಗಂಡನಿಗೆ ಜಾತಿನಿಂದನೆ ಮಾಡಿ, ಬೈದು ಅವಮಾನ ಮಾಡಿ ದೌರ್ಜನ್ಯ ಎಸಗಿದ್ದರಿಂದ ಆರೋಪಿತನ ವಿರುದ್ಧ ಪ.ಜಾ ಮತ್ತು ಪ.ಪ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಪುತ್ತೂರು ಉಪವಿಭಾಗದ ಉಪಾಧೀಕ್ಷಕರಾಗಿದ್ದ ಶ್ರೀನಿವಾಸ್.ಬಿ.ಎಸ್ ರವರು ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಪ್ರಕರಣಗಳಲ್ಲಿ ಸಾಕ್ಷಿದಾರರ ಸಾಕ್ಷ್ಯ ಹಾಗೂ ದಾಖಲೆಗಳ ಸಾಕ್ಷ್ಯವನ್ನು ಪರಿಶೀಲಿಸಿ ಹಾಗೂ ವಾದ ವಿವಾದವನ್ನು ಆಲಿಸಿ ದೂರುದಾರರ ಸಾಕ್ಷ್ಯವನ್ನು ಪ್ರಮುಖವಾಗಿ ಪರಿಗಣಿಸಿ ಆರೋಪಿತ ಕೃತ್ಯ ಎಸಗಿರುವುದು ಸಾಬೀತಾಗಿದ್ದು, 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ, ಮಂಗಳೂರು(ಪೀಠಾಸೀನ ಪುತ್ತೂರು) ಇಲ್ಲಿನ ನ್ಯಾಯಾಧೀಶರಾದ ಸರಿತಾ, ಡಿ ಇವರು ಆರೋಪಿತನಿಗೆ 6 ತಿಂಗಳ ಶಿಕ್ಷೆ ಹಾಗೂ ದಂಡ ವಿಧಿಸಿ ನ.27 ರಂದು ತೀರ್ಪು ನೀಡಿರುತ್ತಾರೆ. ಅಭಿಯೋಜನೆಯ ಪರವಾಗಿ ಜಯಂತಿ. ಕೆ. ಭಟ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here