ಪಾಣಾಜೆ ಗ್ರಾ.ಪಂ.ನ ಉದ್ಯೋಗ ಖಾತರಿ ವಿಶೇಷ ಗ್ರಾಮಸಭೆ

0

ಪುತ್ತೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಪುತ್ತೂರು ಹಾಗೂ ಗ್ರಾಮ ಪಂವಾಯತ್ ಪಾಣಾಜೆ ಇದರ ಸಹಯೋಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಗ್ರಾಮಾಭಿವೃದ್ದಿಯ ಹೊಸ ಹಾದಿ ಯುಕ್ತಧಾರ ತಂತ್ರಾಂಶದ ೨೦೨೬-೨೭ನೇ ಸಾಲಿನ ಕಾರ್ಮಿಕರ ಆಯವ್ಯಯ ಮತ್ತು ಕ್ರಿಯಾ ಯೋಜನೆ ತಯಾರಿ ವಿಶೇಷ ಗ್ರಾಮ ಸಭೆ ಪಂಚಾಯತ್ ಸಭಾಭವನದಲ್ಲಿ ನಡೆಯಿತು.


ಗ್ರಾಮ ಪಂಚಾಯತ್ ಪಿಡಿಒ ಆಶಾ ಸ್ವಾಗತಿಸಿ ಮಾತನಾಡಿ ಉದ್ಯೋಗ ಖಾತರಿಯಲ್ಲಿ ವೈಯುಕ್ತಿಕ ಹಾಗೂ ಖಾಸಗಿ ಕೆಲಸಗಳ ಹಾಜರಾತಿಗೆ ಕೆವೈಸಿ ಮಾಡಲಾಗುತ್ತಿದೆ. ಕಡ್ಡಾಯವಾಗಿ ಜಿಪಿಎಸ್, ಆನ್‌ಲೈನ್ ಮೂಲಕ ಹಣ ಪಾವತಿಯಾಗುತ್ತದೆ. ಉದ್ಯೋಗ ಖಾತರಿ ಯೋಜನೆ ಗ್ರಾಮಾಭಿವೃದ್ದಿಯ ಹೊಸ ಹಾದಿ ಯುಕ್ತಧಾರ ತಂತ್ರಾಂಶದ ಮೂಲಕ ೨೦೨೬-೨೭ನೇ ಸಾಲಿನ ಕಾರ್ಮಿಕರ ಆಯವ್ಯಯ ಮತ್ತು ಕ್ರಿಯಾ ಯೋಜನೆ ತಯಾರಿ ನಡೆಸಲಾಗುತ್ತದೆ. ಬ್ರಷ್ಟಾಚಾರ ತಡೆಯಲು ಸರಕಾರ ಆನ್‌ಲೈನ್ ತಂತ್ರಾಂಶ ಜಾರಿಗೊಳಿಸಲಾಗಿದೆ. ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಸದಸ್ಯೆ ವಿಮಲಾ ಮಾತನಾಡಿ ಉದ್ಯೋಗ ಖಾತರಿ ಯೋಜನೆ ಬದಲಾವಣೆಯೊಂದಿಗೆ ಆನ್‌ಲೈನ್ ತಂತ್ರಾಂಶದಲ್ಲಿ ಜಾರಿಯಾಗಿದೆ. ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು. ಸದಸ್ಯರಾದ ನಾರಾಯಣ ನಾಯಕ್, ಸುಲೋಚನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here