ಪೆರಾಬೆ: ಕಡಬ ತಾಲೂಕಿನ ಕುಂತೂರು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ ಸಹಶಿಕ್ಷಕಿ ಶೆಲ್ಜಿ ಪೌಲ್ ನ.30ರಂದು ನಿವೃತ್ತಿಯಾಗಲಿದ್ದಾರೆ.
ಇವರು ಸುಮಾರು 29 ವರ್ಷ 6 ತಿಂಗಳು ಶಿಕ್ಷಕರಾಗಿ ಸೇವೆ ಮಾಡಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿ.ಪಿ.ಪೌಲ್ ಮತ್ತು ಆಲಿಸ್ ದಂಪತಿ ಪುತ್ರಿಯಾದ ಇವರು ಸಿದ್ದಾಪುರ ಸೈಂಟ್ ಆನ್ಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸಿದ್ದಾಪುರ ಹೈಸ್ಕೂಲ್‌ನಲ್ಲಿ ಪ್ರೌಢಶಿಕ್ಷಣ ಹಾಗೂ ವಿರಾಜಪೇಟೆ ಸರ್ವೋದಯ ಮಹಿಳೆಯರ ಉಪಾಧ್ಯಾಯ ಶಿಕ್ಷಣ ತರಬೇತಿ ವಿದ್ಯಾಲಯದಲ್ಲಿ ಶಿಕ್ಷಕ ತರಬೇತಿ ಪಡೆದುಕೊಂಡಿದ್ದರು. 29.6.1996ರಲ್ಲಿ ವಿರಾಜಪೇಟೆ ತಾಲೂಕಿನ ಅಂಬಟ್ಟಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ್ದರು. 29.5.2006ರಲ್ಲಿ ಮಂಗಳೂರು ಮೂಡುಶೆಡ್ಡೆ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಗೆ ವರ್ಗಾವಣೆ, ಅಲ್ಲಿಂದ 13.6.2012ಕ್ಕೆ ಕಡಬ ತಾಲೂಕು ಕುಂತೂರು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡು ಆಗಮಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ಕುಂತೂರುಪದವು ಕೇಂದ್ರಾಜೆಯಲ್ಲಿ ಪುತ್ರ ಕೆ.ಎಸ್.ಹೆಗ್ಡೆ ಯುನಿವರ್ಸಿಟಿ ಡಿಜಿಟಲ್ ಮಾರ್ಕೆಟಿಂಗ್ ಮೇನೇಜರ್ ಆಗಿರುವ ಪವನ್ ವರ್ಗೀಸ್ ಹಾಗೂ ಯೇನೆಪೋಯ ಮೆಡಿಕಲ್ ಕಾಲೇಜ್‌ನಲ್ಲಿ ಅಸಿಸ್ಟೆಂಟ್ ಪ್ರೋಫೆಸರ್ ಆಗಿರುವ ಸೊಸೆ ಪಾವನ ಅವರೊಂದಿಗೆ ವಾಸ್ತವ್ಯವಿದ್ದಾರೆ.
