ಬಲ್ಯ: ಬೈಕ್ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದನೆ-ಹಲ್ಲೆ ಆರೋಪ :ಪ್ರಕರಣ ದಾಖಲು

0

ಕಡಬ: ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಹಲ್ಲೆ ನಡೆಸಿದ ಆರೋಪದ ಮೇರೆಗೆ ಇಬ್ಬರ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬಲ್ಯ ಗ್ರಾಮದ ಯೋಗೇಂದ್ರ ಕುಮಾರ್ ಎಂಬವರು ಕಡಬದ ಗೌಡ ಸಮಾಜ ಮಂದಿರದಲ್ಲಿ ಸಭೆಯೊಂದರಲ್ಲಿ ಭಾಗವಹಿಸಿ ಮನೆಗೆ ಸಂಜೆ 5.30 ಗಂಟೆಗೆ ಬಲ್ಯದಲ್ಲಿರುವ ಅವರ ಮನೆಗೆ ಮೋಟಾರ್ ಸೈಕಲ್ ನಲ್ಲಿ ಹೊರಟಿದ್ದ ವೇಳೆ ಬಲ್ಯ ಗ್ರಾಮದ ನೆಲ್ಲ ಎಂಬಲ್ಲಿ ತನ್ನ ಚಿಕ್ಕಪ್ಪ ಪುರುಷೋತ್ತಮ ಮತ್ತು ಅವರ ಮಗ ಪ್ರಜ್ವಲ್ ಎಂಬವರು ಅವರ ಬೈಕಿನಲ್ಲಿ ಬಂದು ಏಕಾಏಕಿ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಯೇ ಮಾರ್ಗದಲ್ಲಿ ಬಿದ್ದಿದ್ದ ಒಂದು ಜಲ್ಲಿ ಕಲ್ಲನ್ನು ತೆಗೆದುಕೊಂಡು ಎದೆಯ ಬಲಭಾಗಕ್ಕೆ ಬಲವಾಗಿ ಗುದ್ದಿರುವುದಾಗಿ ಆರೋಪಿಸಲಾಗಿದೆ. ಹಲ್ಲೆಯ ರಭಸಕ್ಕೆ ಅಲ್ಲಿಯೇ ಬಿದ್ದಿದ್ದು ಅದೇ ವೇಳೆಯಲ್ಲಿ ಅದೇ ದಾರಿಯಲ್ಲಿ ಹಾದು ಹೋಗುತ್ತಿರುವ ವ್ಯಕ್ತಿಯೊಬ್ಬರು ನೋಡಿ ಉಪಚರಿಸಿ ಕೂಡಲೇ ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಒಳರೋಗಿಯಾಗಿ ದಾಖಲಿಸಲಾಗಿದೆ.

ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅ.ಕ್ರ: 83/2025. ಕಲಂ: 126(2)ಬಲ್ಯ, 118(1), 352, 351(3), 3(5) 190 BNS-2023 ಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here