ಪುತ್ತೂರು: ಮೂಲತಃ ಕಲ್ಮಡ್ಕ ಗ್ರಾಮದ ಕೊಳಚಿಪ್ಪುನವರಾಗಿದ್ದು, ಪುತ್ತೂರಿನ ಕೆಮ್ಮಿಂಜೆಯಲ್ಲಿ ವಾಸವಾಗಿದ್ದ ನಿವೃತ್ತ ಬಿ.ಎಸ್.ಎಫ್ ಕಾನ್ಸ್ಟೇಬಲ್ ರಾಮಚಂದ್ರ ನಾಯ್ಕ ನ. 28ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇವರಿಗೆ 68 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಸಾವಿತ್ರಿ, ಪುತ್ರ ಹರ್ಷಿತ್, ಸಹೋದರ ನಾರಾಯಣ ನಾಯ್ಕ ಕೊಳಚಿಪ್ಪು, ಸಹೋದರಿ ಗಂಗಮ್ಮ ಶಂಭು ನಾಯ್ಕ ಏಣಿತ್ತಡ್ಕ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.
