ಕೋಡಿಂಬಾಳ: ಹಲ್ಲೆ ಆರೋಪ-ಪ್ರಕರಣ ದಾಖಲು

0

ಕಡಬ: ವ್ಯಕ್ತಿಯೊಬ್ಬರು ಇಲೆಕ್ಟ್ರಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸಮಯ ಅಂಗಡಿಗೆ ಬಂದ ಪರಿಚಯಸ್ಥ ಇಬ್ಬರು ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಬೆದರಿಕೆ ಒಡ್ಡಿದ ಆರೋಪದ ಮೇರೆಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕೋಡಿಂಬಾಳ ಗ್ರಾಮದ ಎಸ್‌.ಎಂ ಅಬ್ದುಲ್‌ ಖಾದರ್‌ ಅವರು ಡಿ.7ರಂದು ತಮ್ಮ, ಇಲೆಕ್ಟ್ರಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ವೇಳೆ ಅಂಗಡಿಗೆ ಬಂದ ದಕ್ಷತ್ ಮತ್ತು ದೀಕ್ಷಿತ್ ಎಂಬವರು ಅಂಗಡಿಯ ಒಳಗಡೆ ಇರುವ ಕಬ್ಬಿಣದ ಸ್ಟಾಂಡ್ ಮೇಲೆ ಕಾಲು ಇಟ್ಟು ಕುಳಿತಿದ್ದು ಇದನ್ನು ಅಬ್ದುಲ್ ಖಾದರ್ ಪ್ರಶ್ನಿಸಿದ್ದರು.
ಆಗ ಆ ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಬೆದರಿಕೆ ಒಡ್ಡಿ ಹೋಗಿರುವುದಾಗಿ ಕಡಬ ಪೊಲೀಸ್‌‌ ಠಾಣಾ ಅ.ಕ್ರ: 87/2025. ಕಲಂ: ಕಲಂ- 115(2),118(1), 352, 351(3), 118(2), 3(5) BNS-2023ಯಂತೆ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here