ಪುತ್ತೂರು: ಪುತ್ತೂರು ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪಾಪೆಮಜಲು ಸರಕಾರಿ ಪ್ರೌಢಶಾಲೆಯ 10ನೇ ತರಗತಿಯ ವಿನುತ ಬಿ ತುಳು ಭಾಷಣದಲ್ಲಿ ಪ್ರಥಮ ಹಾಗೂ ಜನಪದ ನೃತ್ಯ ಸ್ಪರ್ಧೆಯಲ್ಲಿ 9ನೇ ತರಗತಿಯ ಅಭಿಷೇಕ್, ನಿಖಿತ್ ಬಿ, ಭವಿತ್ ಪಿ, ಹಸ್ವತ್, ಸುರಜ್ ರೈ, ಎಂಟನೇ ತರಗತಿಯ ಚಿಂತನ್ ಸಿ ಕೆ ಕಿಶಾಂತ್ ಬಿ, ಹತ್ತನೇ ತರಗತಿಯ ದೀಪಕ್, ಪ್ರಮೋದ್ ಕುಮಾರ್ ಅವರನ್ನೊಳಗೊಂಡ ತಂಡ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದೆ. ಹಿಂದಿ ಭಾಷಣ ಸ್ಪರ್ಧೆಯಲ್ಲಿ ಅಮೃತ್ ನಾಯ್ಕ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
