ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಎಸ್‌ಬಿಬಿ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಬ್ರಾಯ್ಡರಿ, ಆರಿ ವರ್ಕ್ ಸಹಿತ ಐಷಾರಾಮಿ ಉಡುಪುಗಳ ಮಳಿಗೆ ನಮೃತ ಎನ್ ಬೊಳುವಾರಿನ ಹೊಟೇಲ್ ಪಲಾರದ ಬಳಿ ಸ್ಥಳಾಂತರಗೊಂಡು ಎನ್ ಆಂಡ್ ಎನ್ ಬ್ರ್ಯಾಂಡ್ ಅಡಿಯಲ್ಲಿ ಡಿ.8ರಂದು ಶುಭಾರಂಭಗೊಂಡಿತು.

ಮದುವೆ ಇತ್ಯಾದಿ ಶುಭ ಸಮಾರಂಭಗಳಿಗೆ ಮಹಿಳೆಯರು ಹೊಸ ಉಡುಪುಗಳನ್ನು ಖರೀದಿಸುತ್ತಾರೆ. ಸೀರೆಯುಡವ ನಾರಿಯರು, ಚೂಡಿದಾರ ಇತ್ಯಾದಿ ಉಡುಪುಗಳನ್ನು ಹಾಕುವ ಕಣ್ಮನಿಗಳು ಖರೀದಿಸುವ ಬಟ್ಟೆಯಲ್ಲಿ ಎಂಬ್ರಾಯ್ಡರಿ ಮಾಡಲಾಗಿದೆಯೇ? ಆರಿ ವರ್ಕ್ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸುತ್ತಾರೆ. ಇಂತಹ ಕಾಸ್ಟ್ಲಿ ಉಡುಪುಗಳಿಗೆ ಇಂದಿನ ಮಹಿಳಾಮಣಿಗಳು ಮಾರುಹೋಗುತ್ತಿದ್ದಾರೆ. ಕಾರಣ ಆರಿವರ್ಕ್ ಮಾಡಿದ ಬಟ್ಟೆಗಳು ಆಕರ್ಷಣೆಯನ್ನು ನೀಡುತ್ತದೆ. ಹೀಗಾಗಿ ಇಂತಹ ಬಟ್ಟೆಗಳು ಅತ್ಯಂತ ಬೇಡಿಕೆಯನ್ನು ಹೊಂದಿದೆ. ಮದುವೆಯ ಸೀಸನ್ ಬಂತೆಂದರೆ ಸಾಕು ಇಂತಹ ಶಾಪ್‌ಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್.
ಇಂತಹ ಬೇಡಿಕೆಯ ಶಾಪ್‌ಗಳಲ್ಲಿ ಒಂದಾಗಿದ್ದ ಹಾಗೂ ಪುತ್ತೂರಿನ ಮುಖ್ಯರಸ್ತೆಯ ಶ್ರೀಧರ್ ಭಟ್ ಬ್ರದರ್ಸ್ (ಎಸ್‌ಎಸ್‌ಬಿ) ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಮೃತ ಎನ್ ಕೂಡ ಒಂದು. ಇದೀಗ ಗ್ರಾಹಕರ ಅನುಕೂಲಕ್ಕಾಗಿ ಬೊಳುವಾರಿಗೆ ಸ್ಥಳಾಂತರಗೊಂಡು ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ಶುಭಾರಂಭಗೊಂಡಿತು.
ಎನ್ ಆಂಡ್ ಎನ್ ಮಳಿಗೆಯಲ್ಲಿ ಟೈಲರಿಂಗ್, ಹ್ಯಾಂಡ್ ಎಂಬ್ರಾಯ್ಡರಿ, ಮೆಷಿನ್ ಎಂಬ್ರಾಯ್ಡರಿ, ಲೋಗೋ ಎಂಬ್ರಾಯ್ಡರಿ, ಎತ್ನಿಕ್ ವೇರ್ ಕಸ್ಟಮೈಜೇಶನ್ ಕುರ್ತಿ, ಪ್ಯಾಂಟ್ಸ್, ಸೆಲ್ವರ್ ಸೆಟ್ಸ್, ಕೊ ಆರ್ಡ್ಸ್ ಮತ್ತು ರೆಡಿ ಬ್ಲೌಸ್‌ಗಳು ಲಭ್ಯವಿರಲಿದೆ. ಅಲ್ಲದೆ, ಐಷಾರಾಮಿ ಉಡುಪುಗಳು ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ 7022051771 ಸಂಪರ್ಕಿಸುವಂತೆ ಮಾಲಕಿ ನಮೃತ ಅವರು ತಿಳಿಸಿದ್ದಾರೆ.