ಪುತ್ತೂರು: ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್ನಲ್ಲಿ ಡಿ.4ರಂದು ನಡೆದ ಇನ್ಸೆಫ್ ರೀಜನಲ್ ಫೇರ್ನಲ್ಲಿ ಸುದಾನ ಶಾಲೆಯಿಂದ ಆಯ್ಕೆಯಾಗಿ ಭಾಗವಹಿಸಿದ್ದ ಎರಡೂ ವಿದ್ಯಾರ್ಥಿಗಳು ಬಹುಮಾನ ಪಡೆದಿರುತ್ತಾರೆ.
6ನೇ ತರಗತಿಯ ಧ್ಯುತಿ ಜೆ ಎ (ಶ್ರೀ ಜಗದೀಶ್ ಮತ್ತು ಶ್ರೀಮತಿ ಅಶ್ವಿನಿಯವರ ಪುತ್ರಿ) ಪ್ರಾಜೆಕ್ಟ್- ಸ್ಮಾರ್ಟ್ ಎಗ್ರಿ ಕಲ್ಚರಲ್ ರೋಬೋಟ್ ವಿತ್ ಸೋಯಿಲ್ ಮಾನಿಟರಿಂಗ್ ಆಂಡ್ ಇರ್ರಿಗೇಶನ್ ಕಂಟ್ರೋಲ್ಗೆ ಗೌರವಾನ್ವಿತ ಪ್ರಶಸ್ತಿ ಮತ್ತು 5ನೇ ತರಗತಿಯ ಸಂಭ್ರಮ್ ಎನ್ ವಿ ( ಶ್ರೀ ವಿಜಯ ಕುಮಾರ್ ಎನ್ ಆರ್ ಮತ್ತು ಶ್ರೀಮತಿ ರಂಜಿತಾ ಎಮ್ ವಿ ರವರ ಪುತ್ರ) ಪ್ರಾಜೆಕ್ಟ್ – ಅಟೋಮೇಟಸ್ ಅರೇಕ ಕಲೆಕ್ಟಿಂಗ್ ಆಂಡ್ ಸ್ಟೋರಿಂಗ್ ಡಿವೈಸ್ಗೆ ಕಂಚಿನ ಪದಕ ಲಭಿಸಿದೆಯೆಂದು ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾ ನಾಗರಾಜ್ರವರು ತಿಳಿಸಿದ್ದಾರೆ. ಇವರಿಗೆ ವಿಜ್ಞಾನ ಶಿಕ್ಷಕಿ ಶ್ಯಾಮಲ ಡಿ. ಬಂಗೇರ ಮತ್ತು ನಿವೇದಿತ ಭಂಡಾರಿರವರು ಮಾರ್ಗದರ್ಶನ ನೀಡಿರುತ್ತಾರೆ. ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.
