ಆವಿಷ್ಕಾರ್- 2025: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

0

ಪುತ್ತೂರು: ಪುತ್ತೂರು ವಿವೇಕಾನಂದ ಸೆಂಟ್ರಲ್ ಸ್ಕೂಲ್ ಡಿಸೆಂಬರ್ 5ರಂದು ಆಯೋಜಿಸಿದ ಅಂತರ್ ಶಾಲಾ ವಿಜ್ಞಾನ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳು ಭಾಗವಹಿಸಿದ್ದು ಅತೀ ಹೆಚ್ಚು ಅಂಕಗಳಿಸಿ ‘ಓವರ್ ಆಲ್ ಚಾಂಪಿಯನ್ಶಿಪ್’ ಪ್ರಶಸ್ತಿಯನ್ನು ಶಾಲೆಯ ಮುಡಿಗೇರಿಸಿದ್ದಾರೆ.

ಜೂನಿಯರ್ ವಿಭಾಗದಲ್ಲಿ 8ನೇ ತರಗತಿಯ ಧನಿಷ್ ಗೌಡ ( ಶ್ರೀ ಜನಾರ್ಧನ ಮತ್ತು ಶ್ರೀಮತಿ ಯಶೋಧ ದಂಪತಿ ಪುತ್ರ ) ಹಾಗೂ ಧೃತಿ ಪ್ರಭು ( ಶ್ರೀ ರಾಜಾರಾಮ್ ಪ್ರಭು ಮತ್ತು ಶ್ರೀಮತಿ ದೀಪ ಪ್ರಭು ದಂಪತಿ ಪುತ್ರಿ ) ಅವರ ತಂಡ ‘ಐಡೆಂಟಿಫಿಕೇಶನ್ ಆಫ್ ಪ್ಲಾಂಟ್ಸ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಆರಾಧ್ಯ ಎ ರಾವ್ (ಶ್ರೀ ಅಭಿಷೇಕ್ ರಾವ್ ಎಂ ಸಿ ಮತ್ತು ಶ್ರೀಮತಿ ಸುರೇಖಾ ಟಿ ದಂಪತಿ ಪುತ್ರಿ) ಹಾಗೂ ಅನಘ ಪಿ ( ಶ್ರೀ ಶ್ರೀಹರಿ ಮತ್ತು ಶ್ರೀಮತಿ ಅಕ್ಷತಾ ದಂಪತಿ ಪುತ್ರಿ ) ಅವರ ತಂಡ ‘ಸೈನ್ಸ್ ವರ್ಕಿಂಗ್ ಮಾಡೆಲ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಪ್ರತೀಕ್ಷ ದೀಪ್ತಿ ಯು (ಶ್ರೀ ಉಮೇಶ್ ಚಂದ್ರ ಎಚ್ ಜಿ ಮತ್ತು ಶ್ರೀಮತಿ ಸೌಮ್ಯ ಲಕ್ಷ್ಮಿ ಆರ್ ದಂಪತಿ ಪುತ್ರಿ) ಹಾಗೂ ಶರಧಿ ಚಣಿಲ (ಶ್ರೀ ರಘುರಾಮಚಂದ್ರ ಚಣಿಲ  ಮತ್ತು ಶ್ರೀಮತಿ ಸಂಧ್ಯಾ ಪಿ ಎಂ ದಂಪತಿ ಪುತ್ರಿ) ಅವರ ತಂಡ ‘ಸೈನ್ಸ್ ಕ್ವಿಜ್’ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ. ಸೀನಿಯರ್ ವಿಭಾಗದಲ್ಲಿ 10ನೇ ತರಗತಿಯ ಭುವನ್ (ಶ್ರೀ ಬಾಲಸುಬ್ರಹ್ಮಣ್ಯ ಎ ಮತ್ತು ಕಿರಣ ಬಿ ಎಸ್ ದಂಪತಿ ಪುತ್ರ) ಹಾಗೂ ಓಂಕಾರ್ ಮಯ್ಯ ( ಶ್ರೀ ಎ ಜಯಶೇಖರ ಮಯ್ಯ ಮತ್ತು ಶ್ರೀಮತಿ ಲತಾ ದಂಪತಿ ಪುತ್ರ) ಅವರ ತಂಡ ‘ಮಿಮ್ ಕ್ರಿಯೇಷನ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 9ನೇ ತರಗತಿಯ  ಚಂದನ್( ಶ್ರೀ ಶಾಂತರಾಮ ನಾಯಕ್ ಮತ್ತು ಶ್ರೀಮತಿ ಕಾಂತಿಮಣಿ ದಂಪತಿ ಪುತ್ರ) ಹಾಗೂ ಪಿ ಕೆ ಶುಭನ್ (ಶ್ರೀ ಪದ್ಮನಾಭ ಕೆ ಮತ್ತು ಶ್ರೀಮತಿ ರೇಖಾ ಪಿ ನಾಯ್ಕ್ ದಂಪತಿ ಪುತ್ರ) ಅವರ ತಂಡ  ‘ಬೆಸ್ಟ್ ಔಟ್ ಆಫ್ ವೇಸ್ಟ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಅತೀತ್ ಹೆಚ್ ರೈ( ಶ್ರೀ ಹರೀಶ್ ರೈ ಪಿ ಮತ್ತು ಶ್ರೀಮತಿ ಜಲಜ  ಹೆಚ್ ರೈ ದಂಪತಿ ಪುತ್ರ) ‘ಪಿಕ್ ಅಂಡ್ ಸ್ಪೀಕ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 10ನೇ ತರಗತಿಯ  ಪ್ರಮತ್ ಶಾನಭಾಗ್( ಶ್ರೀ ಪ್ರಸಾದ್ ಶಾನಭಾಗ್ ಮತ್ತು ಡಾ. ಗೀತಾ ಕುಮಾರಿ ಟಿ ದಂಪತಿ ಪುತ್ರ)  ಹಾಗೂ ಸಾಯಿ ಘನಶ್ಯಾಮ್( ಶ್ರೀ ಶಂಕರ ವಡ್ಯ ಮತ್ತು ಶ್ರೀಮತಿ ಸತ್ಯವತಿ ವಿ ಎಸ್ ದಂಪತಿ ಪುತ್ರ) ಅವರ ತಂಡ ‘ರೀಲ್ಸ್ ಮೇಕಿಂಗ್’ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖೋಪಾಧ್ಯಾಯರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here