
ಪುತ್ತೂರು: ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ಯಾರ್ಥಿಗಳಿಂದ ವಿದ್ವಾನ್ ದೀಪಕ್ ಕುಮಾರ್ ಇವರ ನಿರ್ದೇಶನದಲ್ಲಿ ’ತ್ರಿಶಕ್ತಿ ’ ವಿಶೇಷ ನೃತ್ಯಪ್ರಸ್ತುತಿ ಕಾರ್ಯಕ್ರಮವು ಮಂಗಳೂರಿನ ಸುಬ್ರಹ್ಮಣ್ಯ ಸಭಾದಲ್ಲಿ ಡಿ.6ರಂದು ನಡೆದ ಕಲಾಸೂರ್ಯ ನೃತ್ಯಾಲಯದ 2ನೇ ವರ್ಷದ ವಾರ್ಷಿಕ ನೃತ್ಯ ಸಂಭ್ರಮ “ಪರಿಭ್ರಮಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಡಿ. ಎ. ಪಿ ಕೃಷ್ಣ ಅವರು ಉದ್ಘಾಟಿಸಿದರು.
ಮಂಗಳೂರಿನ ಹಿರಿಯ ನೃತ್ಯಗುರು, ನಾಟ್ಯನಿಕೇತನ ಕೊಲ್ಯ ಇದರ ನೃತ್ಯ ನಿರ್ದೇಶ, ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಶೆಣೈ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿ, ಮಕ್ಕಳಲ್ಲಿ ಇಂತಹ ಆಸಕ್ತಿಯನ್ನು ಹುಟ್ಟಿಸಿ ಬೆಳೆಸುವಲ್ಲಿ ಪೋಷಕರ ಜೊತೆಗೆ ಇಂತಹ ಕಲಾ ಸಂಸ್ಥೆಗಳ ಪರಿಶ್ರಮ ಎಷ್ಟು ಇರುತ್ತದೆ. ಅದೇ ಮಾರ್ಗದಲ್ಲಿ ಸಾಗುತ್ತಿರುವ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಹಾಗೂ ಅದರ ಅಂಗಸಂಸ್ಥೆ ಕಲಾಸೂರ್ಯ ಮಂಗಳೂರು ಇವರಿಗೆ ಶುಭ ಹಾರೈಸಿದರು.
ಕಾರ್ಯಕ್ರಮವು ಕಲಾಸೂರ್ಯ ನೃತ್ಯಾಲಯದ ನೃತ್ಯ ಶಿಕ್ಷಕಿ ವಿದುಷಿ ಸೌಜನ್ಯ ಪಡುವೆಟ್ನಾಯ ಶಂಖನಾದ, ವಿದುಷಿ ಪ್ರೀತಿಕಲಾ ಓಂಕಾರನಾದ ಹಾಗೂ ಪ್ರಾರ್ಥಿಸಿದರು.
ಕಲಾಸೂರ್ಯ ನೃತ್ಯಾಲಯದ ವಿದ್ಯಾರ್ಥಿಗಳಿಂದ ವಿದುಷಿ ಸೌಜನ್ಯ ಪಡುವೆಟ್ನಾಯ ಇವರ ನಿರ್ದೇಶನದಲ್ಲಿ ನೃತ್ಯ ಪ್ರಸ್ತುತಿ ನಡೆಯಿತು.
ಸಮಾರಂಭದಲ್ಲಿ ವಿದುಷಿ ರಾಜಶ್ರೀ ಶೆಣೈ ಅವರಿಗೆ ಅವರ ಶಿಷ್ಯ ವಿದ್ವಾನ್ ಬಿ. ದೀಪಕ್ ಕುಮಾರ್ ರಚಿಸಿದ ದಶಾವತಾರ ಕುರಿತು ಸಾಹಿತ್ಯಕ್ಕೆ ಪುತ್ರಿ ಮಾತಂಗಿ ಅವರು ನರ್ತಿಸಿ ಸಮರ್ಪಣೆ ಮಾಡಿದರು.
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಇದರ ವಿದ್ಯಾರ್ಥಿಗಳಿಂದ ವಿದ್ವಾನ್ ದೀಪಕ್ ಕುಮಾರ್ ಇವರ ನಿರ್ದೇಶನದಲ್ಲಿ ’ತ್ರಿಶಕ್ತಿ ’ ವಿಶೇಷ ನೃತ್ಯಪ್ರಸ್ತುತಿ ಜನಮೆಚ್ಚುಗೆ ಗಳಿಸಿತು.
ನಟುವಾಂಗದಲ್ಲಿ ವಿದ್ವಾನ್ ಬಿ ದೀಪಕ್ ಕುಮಾರ್, ಹಾಡುಗರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ವಿದ್ವಾನ್ ವಿ ಮನೋಹರ್ ರಾವ್ ಹಾಗೂ ಪಿಟೀಲಿನಲ್ಲಿ ಕುಮಾರಿ ತನ್ಮಯಿ ಉಪ್ಪಂಗಳ ಸಹಕರಿಸಿದರು. ಮಕ್ಕಳ ಮುಖವರ್ಣಿಕೆಯಲ್ಲಿ ಶಶಿಪ್ರಭಾ ಹಾಗೂ ವಿದ್ವಾನ್ ಬಿ ಗಿರೀಶ್ ಕುಮಾರ್ ಇವರು ಸಹಕರಿಸಿದರು.
ಸತ್ಯಶೀಲಾ ಸ್ವಾಗತಿಸಿದರು. ಕಲಾಸೂರ್ಯ ನೃತ್ಯಾಲಯದ ಸಂಚಾಲಕ ವಿಕ್ರಮ್ ಪಡುವೆಟ್ನಾಯ ವಂದಿಸಿದರು. ಅನುಷಾ ಕಾರ್ಯಕ್ರಮ ನಿರೂಪಿಸಿದರು.