ಕಡಬ: ಒಕ್ಕಲಿಗ ಗೌಡ ಸೇವಾ ಸಂಘದ ಕ್ರೀಡಾಕೂಟ, ಔಷಧಾಲಯ ಉದ್ಘಾಟನೆಯ ಪೂರ್ವಭಾವಿ ಸಭೆ-ಆಮಂತ್ರಣ ಪತ್ರಿಕೆ ಬಿಡುಗಡೆ

0

ಕಡಬ: ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕು ಇದರ ಮಾತೃ ಸಮಿತಿಯ ಆಶ್ರಯದಲ್ಲಿ ಹಾಗೂ ತಾಲೂಕು ಯುವ ಘಟಕದ ನೇತೃತ್ವದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಕುರಿತು ಪೂರ್ವಭಾವಿ ಸಭೆ ಡಿ.07 ರಂದು ಹೊಸಮಠದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.

ಸಭೆಯಲ್ಲಿ ಡಿಸೆಂಬರ್ 25, 2025 ರಂದು ಆಯೋಜಿಸಲಿರುವ ವಾರ್ಷಿಕ ಕ್ರೀಡಾಕೂಟ ಮತ್ತು ಸಂಘದ ವತಿಯಿಂದ ಆರಂಭಗೊಳ್ಳುವ ಔಷಧಾಲಯ ಉದ್ಘಾಟನಾ ಸಮಾರಂಭಕ್ಕಾಗಿ ಆಮಂತ್ರಣ ಪತ್ರಿಕೆಯ ಬಿಡುಗಡೆ ನೆರವೇರಿತು.

ಡಿ. 21 ರಂದು ತಾಲೂಕು ವ್ಯಾಪ್ತಿಯ 42 ಗ್ರಾಮಗಳ ಸಮುದಾಯ ಬಾಂಧವರಿಂದ ಸಮರ್ಪಣೆಗೊಳ್ಳಲಿರುವ ಹೊರೆಕಾಣಿಕೆ ಮನವಿ ಪತ್ರದ ಬಿಡುಗಡೆ ಹಾಗೂ ಅದರ ಸಂಬಂಧಿಸಿದ ಕಾರ್ಯಚಟುವಟಿಕೆಗಳ ಕುರಿತು ಚರ್ಚೆ ನಡೆಯಿತು.

ಸಂಘದ ಪದಾಧಿಕಾರಿಗಳು, ಮಾತೃ ಸಮಿತಿ ಸದಸ್ಯರು, ಯುವ ಘಟಕದ ಪ್ರತಿನಿಧಿಗಳು ಹಾಗೂ ವಿವಿಧ ಗ್ರಾಮದ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಗತ್ಯ ತಯಾರಿಗಳನ್ನು ಚರ್ಚಿಸಿದರು.

LEAVE A REPLY

Please enter your comment!
Please enter your name here