ಪುತ್ತೂರು: ಭಾರತದಲ್ಲಿ ಈಗಿನ ದೊಡ್ಡ ಸಮಸ್ಯೆ,ಸಾಧಿಸಲು ಹಂಬಲದಲ್ಲಿ ಇರುವ ಯುವಜನರು ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು,ಇದರಿಂದ ಎಷ್ಟೋ ಯುವಜನರು ಮಾನಸಿಕ ದೈಹಿಕವಾಗಿ ಖಿನ್ನತೆಗೆ ಒಳಗಾಗಿ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಯುವಜನರು ಇಂತಹ ಆರೋಗ್ಯಕ್ಕೆ ಹಾನಿಕಾರಕವಾದ ಮಾದಕ ವ್ಯಸನಗಳಿಂದ ದೂರವಿರಿ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ತರಬೇತುದಾರರಾದ ಶ್ರೀಕಾಂತ್ ಬಿರಾವು ಹೇಳಿದರು. ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೇರಾ ಯುವ ಭಾರತ್ ದಕ್ಷಿಣ ಕನ್ನಡ, ವಿದ್ಯಾಮಾತ ಅಕಾಡೆಮಿ ಪುತ್ತೂರು ಇದರ ಸಹಯೋಗದೊಂದಿಗೆ ಮಾದಕ ದ್ರವ್ಯ ವ್ಯಸನ ತಡೆಗಟ್ಟುವಿಕೆ ಅರಿವು ಕಾರ್ಯಕ್ರಮ ಉದ್ದೇಶಿತ ಮಾತನಾಡಿದರು. ಯುವಜನರು ತಮ್ಮ ಸುತ್ತಮುತ್ತಲಿನಲ್ಲಿ ಜನರಿಗೆ ಮಾದಕ ದ್ರವ್ಯ ವ್ಯಸನದಿಂದಾಗಿವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ನಶೆಮುಕ್ತ ಭಾರತವಾಗಲು ಶ್ರಮಿಸಬೇಕಾಗಿದೆ ಎಂದರು.

ವಿದ್ಯಾಮಾತ ಅಕಾಡೆಮಿಯ ನಿರ್ದೇಶಕರಾದ ಭಾಗ್ಯೇಶ್ ರೈ ಮಾತನಾಡಿ ಯುವಜನರ ಉಲ್ಲಾಸ ಉತ್ಸಾಹವನ್ನು ಮಾದಕ ವ್ಯಸನಗಳು ಬಲಿ ತೆಗೆದುಕೊಳ್ಳುತ್ತಿದೆ, ಇದಕ್ಕೆ ಯಾರಿಂದಲೂ ನಾವು ಪ್ರೇರೆಪಿತರೊಳಗಾಗದೆ ಸ್ವತಃ ಮನಸ್ಸಿನಿಂದ ಇದರಿಂದ ದೂರವಿರಬೇಕು, ಇದರ ಅರಿವನ್ನು ತಮ್ಮ ತಮ್ಮ ಗ್ರಾಮಗಳಲ್ಲಿ ಅರಿವು ಮೂಡಿಸಿ ಎಂದರು.ಕಾರ್ಯಕ್ರಮದಲ್ಲಿ ತರಬೇತುದಾರರಾದ ಚಂದ್ರಕಾಂತ್ ಉಪಸ್ಥಿತರಿದ್ದರು.