ಡಿ.16-26: ಶ್ರೀಆದಿಚುಂಚನಗಿರಿ ಮಠದಲ್ಲಿ ಅರ್ಚಕ ವೃತ್ತಿ ಶಿಕ್ಷಣ ತರಬೇತಿ ಶಿಬಿರ

0

ಪುತ್ತೂರು: ಮಂಡ್ಯ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಡಿ.16ರಿಂದ 26ರವರೆಗೆ ರಾಜ್ಯಮಟ್ಟದ 18ನೇಯ ಅರ್ಚಕ ವೃತ್ತಿ ಶಿಕ್ಷಣ ತರಬೇತಿ ಶಿಬಿರ ನಡೆಯಲಿದೆ. ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಎಲ್ಲಾ ಜಾತಿ, ಮತ ಲಿಂಗಗಳ ಬೇಧವಿಲ್ಲದೆ ಭಾಗವಹಿಸಲು ಅವಕಾಶವಿದೆ.


ಶಿಬಿರದಲ್ಲಿ ಪೂಜಾ ವಿಧಾನಗಳು, ಸಂಕಲ್ಪ, ವೇದ ಮಂತ್ರಗಳ ಪಠಣ, ಗಾಯತ್ರಿ ಮಂತ್ರ, ಧ್ಯಾನ ಶ್ಲೋಕಗಳು, ಪಂಚಾಂಗ (ಹಿಂದೂ ಕ್ಯಾಲೆಂಡರ್) ಅಧ್ಯಯನ ಕಲಿಸಲಾಗುವುದು. 14 ರಿಂದ 60 ವರ್ಷದೊಳಗಿನವರು ಶಿಬಿರದಲ್ಲಿ ಭಾಗವಹಿಸಬಹುದು. ಉಚಿತ ಊಟ ಮತ್ತು ವಸತಿ, ಉಚಿತ ಸಮವಸ್ತ್ರ, ಪೂಜಾ ಪುಸ್ತಕಗಳು ಮತ್ತು ನೋಟ್‌ಬುಕ್‌ಗಳನ್ನು ನೀಡಲಾಗುತ್ತದೆ. ತಟ್ಟೆ, ಲೋಟ, ಚಾಪೆ, ದಿಂಬು ಮತ್ತು ಹೊದಿಕೆ ತರಬೇಕು.

ನೋಂದಣಿ ಕಡ್ಡಾಯ, ಆಧಾರ್ ಕಾರ್ಡ್ ಜೆರಾಕ್ಸ್ ಮತ್ತು ಎರಡು ಪಾಸ್‌ಪೋರ್ಟ್ ಸೈಜ್ ಫೋಟೋ ತರಬೇಕು. ಪೂರ್ಣ ಕಾಲದಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರ ನೀಡಲಾಗುವುದು. ಮಾಹಿತಿಗಾಗಿ 8762665613 ಸಂಪರ್ಕಿಸಬಹುದು ಎಂದು ಒಳಿತು ಮಾಡು ಮನುಷ ಸಾಂತ್ವನ ಸೇವಾಶ್ರಮದ ಚೇತನ್‌ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here