ಪುತ್ತೂರು: ತಾವರೆ ನೀರಿನ ಟ್ಯಾಂಕ್ಗೆ ಒಂದೂವರೆ ವರ್ಷದ ಮಗು ಬಿದ್ದು ಮೃತಪಟ್ಟ ದಾರುಣ ಘಟನೆ ಬನ್ನೂರು ನೀರ್ಪಾಜೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಮನೆಯಂಗಳದಲ್ಲಿ ಮಗುವಿಗೆ ಊಟ ಕೊಡುತ್ತಿದ್ದ ತಾಯಿ ಮನೆಯೊಳಗೆ ಹೋಗಿ ಬರುತ್ತಿದ್ದಂತೆ ಮಗು ನಾಪತ್ತೆಯಾಗಿದೆ. ಹುಡುಕಾಡಿದಾಗ ಮನೆಯಂಗಳದ ತಾವರೆ ನೀರಿನ ಟ್ಯಾಂಕ್ಗೆ ಬಿದ್ದಿರುವುದು ಬೆಳಕಿಗೆ ಬಂದಿದ್ದು. ತಕ್ಷಣ ಮಗುವನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದರು ಮಗು ಆಗಲೇ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
