ಪುತ್ತೂರು: ಕಾಸರಗೋಡು ತಾಲೂಕು ನೆಟ್ಟಣಿಗೆ ಗ್ರಾಮದ ಕಾಯರ್ಪದವು ನಿವಾಸಿ ಶೀನಪ್ಪ ಪೂಜಾರಿ ಬೊಳ್ಳಂದೂರು (78ವ.) ಅಲ್ಪಕಾಲದ ಅಸೌಖ್ಯದಿಂದಾಗಿ ಡಿ.14ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ ದೇವಕಿ, ಪುತ್ರರಾದ ಜಗದೀಶ್, ಪುತ್ತೂರು ತೆಂಕಿಲ ವಿವೇಕಾನಂದ ಶಾಲಾ ಶಿಕ್ಷಕ ಚಂದ್ರಶೇಖರ ಸುಳ್ಯಪದವು, ಪುತ್ರಿ ಆಶಾ ಮತ್ತು ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.
