ಪುತ್ತೂರು: ಈಶ್ವರಮಂಗಲದಲ್ಲಿರುವ ಚಿಲ್ಲೀಸ್ ಹೈಪರ್ ಮಾರ್ಕೆಟ್ ತನ್ನ ಎರಡನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ಪ್ರಕಟಿಸಿದೆ. ಡಿ.21ರಂದು ಆಫರ್ ಮೇಳ ಆರಂಭಗೊಳ್ಳಲಿದ್ದು ಡಿ.31ಕ್ಕೆ ಆಫರ್ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಆಫರ್‌ಗಳ ಕರಪತ್ರ ಬಿಡುಗಡೆ ಕಾರ್ಯಕ್ರಮ ಡಿ.15ರಂದು ಮ ಚಿಲ್ಲಿಸ್ ಹೈಪರ್ ಮಾರ್ಕೆಟ್ ಮುಂಭಾಗದಲ್ಲಿ ಉದ್ಯಮಿ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ನೇತೃತ್ವದಲ್ಲಿ ನಡೆಯಿತು. ಡಾ. ಶ್ರೀಕುಮಾರ್ ಈಶ್ವರಮಂಗಲ, ಈಶ್ವರಮಂಗಲ ನಿತ್ಯಾನಂದ ಮೆಡಿಕಲ್ ನ ಮಾಲಕ ರಾಮಪ್ರಸಾದ್ ಆಳ್ವ, ಈಶ್ವರಮಂಗಲ ತ್ವೈಬಾ ಫ್ಯಾಶನ್ ಮಾಲಕ ಅಬ್ದುಲಾ ಮದನಿ ಕೆ.ಎಂ.ಸಿ ಈಶ್ವರಮಂಗಲ ಜನತಾ ಟ್ರೇಡರ್ಸ್ ನ ನಿಜಾಮುದ್ದೀನ್, ಚಿಲ್ಲೀಸ್ ಹೈಪರ್ ಮಾರ್ಕೆಟ್ ನ ವ್ಯಸ್ಥಾಪಕ ಅಬ್ದುಲ್ ಜಲೀಲ್ ಪಿ.ಎಂ, ಚಿಲ್ಲೀಸ್ ಹೈಪರ್ ಮಾರ್ಕೆಟ್ ನ ಮಾಲಕ ನಿಸಾರ್ ಹಾಜಿ ಮತ್ತು ರಿಯಾಸ್ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಚಿಲ್ಲೀಸ್ ಹೈಪರ್ ಮಾರ್ಕೆಟ್ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಗ್ರಾಹಕರಿಗೆ ಆಕರ್ಷಕ ರಿಯಾಯಿತಿಗಳು ಹಾಗೂ ವಿಶೇಷ ಆಫರ್‌ಗಳನ್ನು ನೀಡಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ವ್ಯಸ್ಥಾಪಕರು ತಿಳಿಸಿದ್ದಾರೆ.