ನ್ಯೂ ಆರ್‌ಎಚ್ ಸೆಂಟರ್‌ನಲ್ಲಿ ಹಬ್ಬಗಳ ಪ್ರಯುಕ್ತ ವಿಶೇಷ ಕೊಡುಗೆ

0

ಡಿಸ್ಕೌಂಟ್ ಆಫರ್, ಖರೀದಿ ಮೇಲೆ ಸೀರೆ, ಗೌನ್ ಫ್ರೀ

ಪುತ್ತೂರು: ಬೊಳುವಾರು ಮುಖ್ಯರಸ್ತೆಯಲ್ಲಿರುವ ಪ್ರತಿಷ್ಠಿತ ಜವುಳಿ ಮಳಿಗೆ ನ್ಯೂ ಆರ್‌ಎಚ್ ಸೆಂಟರ್ ಹಬ್ಬಗಳ ಪ್ರಯುಕ್ತ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆ ಘೋಷಿಸಿದೆ. ಕ್ರಿಸ್ಮಸ್, ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬಗಳ ಪ್ರಯುಕ್ತ ಡಿಸ್ಕೌಂಟ್ ಸೇಲ್ ಜೊತೆಗೆ ಖರೀದಿ ಮೇಲೆ ನಾರಿಮಣಿಯರಿಗೆ ಖುಷಿ ನೀಡುವಂತಹ ವಿಶೇಷ ಉಡುಗೊರೆಯನ್ನೂ ನೀಡಲಾಗುತ್ತಿದೆ.


ಜವುಳಿ ಉದ್ಯಮದಲ್ಲಿ ಸುದೀರ್ಘ ಇತಿಹಾಸ ಹೊಂದಿರುವ ನ್ಯೂ ಆರ್‌ಎಚ್ ಸೆಂಟರ್ ಕಳೆದ 28 ವರ್ಷಗಳಿಂದ ಪುತ್ತೂರಿನಲ್ಲಿ ಮನೆಮಾತಾಗಿದೆ. ಸಿಲ್ಕ್ ಸಾರಿ, ಕಾಂಜೀವರಂ ಸಾರಿ, ಸಾಫ್ಟ್ ಸಿಲ್ಕ್ ಸಾರಿ, ಮಕ್ಕಳು, ಮಹಿಳೆಯರು ಮತ್ತು ಪುರುಷರ ಎಲ್ಲಾ ರೀತಿಯ ಉಡುಪುಗಳು ಅತೀ ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಇದೀಗ ಈ ಜವುಳಿ ಮಳಿಗೆಯಲ್ಲಿ ವಿಂಟರ್ ಸೇಲ್ಸ್ ಮತ್ತು ಕ್ಲಿಯರೆನ್ಸ್ ಸೇಲ್ಸ್ ಪ್ರಾರಂಭಗೊಂಡಿದ್ದು, ಚಳಿಗಾಲದಲ್ಲಿ ಅವಶ್ಯಕವಾಗಿರುವ ಬೆಡ್‌ಶೀಟ್, ಸ್ವೆಟರ್, ಬೆಡ್‌ಸ್ಟ್ರೆಡ್ ಇತ್ಯಾದಿ ಹೊಸ ಸಂಗ್ರಹಗಳ ಮೇಲೆ ಡಿಸ್ಕೌಂಟ್ ನೀಡಲಾಗುತ್ತಿದೆ ಎಂದು ಸಂಸ್ಥೆಯ ಪ್ರಕಟಣೆಯು ತಿಳಿಸಿದೆ.


ಮಹಿಳೆಯರಿಗೆ ಕೊ(ಉ)ಡುಗೆ
ನೀವು ಹಬ್ಬದ ಸಂದರ್ಭದಲ್ಲಿ ಹೊಸ ಬಟ್ಟೆಯೊಂದಿಗೆ ಮಿಂಚಲು ಯೋಚಿಸುತ್ತಿದ್ದರೆ ನ್ಯೂ ಆರ್‌ಎಚ್ ಸೆಂಟರ್‌ಗೆ ಭೇಟಿ ನೀಡಿ. ಇಲ್ಲಿ 3,000 ವೆಚ್ಚದ ಖರೀದಿಗೆ 3 ಸಾವಿರ ರೂಪಾಯಿಯ ಸಾರಿ ಅಥವಾ ಗೌನ್ (ಮಹಿಳೆಯರಿಗೆ) ಉಚಿತವಾಗಿ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 08251235673 ಸಂಪರ್ಕಿಸಿ.

LEAVE A REPLY

Please enter your comment!
Please enter your name here