ಪುತ್ತೂರು : ಮಳೆಗಾಲದಲ್ಲಿ ಸದಾ ಹೊಳೆಯಂತಾಗುತ್ತಿರುವ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿಯ ರಸ್ತೆ ಇದೀಗ ಮಳೆ ಬಾರದಿದ್ದರೂ ರಸ್ತೆ ಹೊಳೆಯಂತಾಗಿದೆ. ರಸ್ತೆ ಬದಿಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದೆ.

ನೆಲ್ಲಿಕಟ್ಟೆ ಎನ್ ಸುಧಾಕರ ಶೆಟ್ಟಿಯವರ ಮನೆಯ ಬಳಿಯ ರಸ್ತೆಯಲ್ಲಿ ಒಡೆದಿರುವ ನೀರಿನ ಪೈಪ್ ನಿಂದ ನೀರು ರಬಸವಾಗಿ ಚಿಮ್ಮುತ್ತಿದೆ. ನೀರು ರಸ್ತೆಯನ್ನೆಲ್ಲ ಆವರಿಸಿ ಚಿಕ್ಕಪುತ್ತೂರು ಸ್ಮಶಾನದ ತನಕ ರಸ್ತೆ ತುಂಬಾ ನೀರು ಹರಿಯುತ್ತಿದೆ.