ಉಪ್ಪಿನಂಗಡಿ ವಿಜೃಂಭಿಸಿದ ಉಬಾರ್ ಕಪ್ ಕ್ರಿಕೆಟ್ ಪಂದ್ಯಾಟ-ಸಾಧಕರಿಗೆ ಸನ್ಮಾನ, ಹೊಲಿಗೆ ಯಂತ್ರ ವಿತರಣೆ

0

ಉಪ್ಪಿನಂಗಡಿ: 2025ರ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಉಬಾರ್ ಸ್ಪೋರ್ಟಿಂಗ್ ಕ್ಲಬ್ (ರಿ) ಉಪ್ಪಿನಂಗಡಿ ಹಾಗೂ ಉಬಾರ್ ಡೋನರ್ಸ್ ಹೆಲ್ಪ್ ಲೈನ್ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ವರ್ಷಂಪ್ರತಿ ನಡೆಯುತ್ತಿರುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಾಧಕರಿಗೆ ಸನ್ಮಾನ, ಅರ್ಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮತ್ತು ಆಹ್ವಾನಿತ ತಂಡಗಳ ದ.ಕ. ಜಿಲ್ಲಾ ಮಟ್ಟದ ಹೊನಲು ಬೆಳಕಿನ ‘ಉಬಾರ್ ಕಪ್- 2025’ ಕ್ರಿಕೆಟ್ ಪಂದ್ಯಾಟ ಡಿ.13 ಮತ್ತು 14ರಂದು ಉಪ್ಪಿನಂಗಡಿಯಲ್ಲಿ ಅದ್ದೂರಿಯಾಗಿ ನಡೆಯಿತು.


ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿದರು. ಮಾಜಿ ಶಾಸಕರಾದ ಸಂಜೀವ ಮಠಂದೂರು ಬಲೂನ್ ಹಾರಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.


ಕಾರ್ಯಕ್ರಮದಲ್ಲಿ ಬಡ ಕುಟುಂಬಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ, ಡಾ. ಎಂ ಆರ್ ಶೆಣೈ, ಕರುಣಾಕರ , ಡಾ. ನಿರಂಜನ್ ರೈ, ಉದಯ ಕುಮಾರ್ ಯು.ಎಲ್., ಡಾ. ನಾಝೀರಾ ಬಾನು, ಹಾಗೂ ನಂದೀಶ್ ವೈ.ಡಿ. ಸೇರಿದಂತೆ ಹಲವು ಸಾಧಕರಿಗೆ ಸನ್ಮಾನವನ್ನು ನಡೆಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಬಾರ್ ಸ್ಪೋರ್ಟಿಂಗ್ ಕ್ಲಬ್ ಹಾಗೂ ಉಬಾರ್ ಡೋನರ್ಸ್ ಹೆಲ್ಪ್ ಲೈನ್ ಸಂಸ್ಥೆಯ ಅಧ್ಯಕ್ಷ ಶಬೀರ್ ಕೆಂಪಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಹಕಾರಿ, ನಿವೃತ್ತ ಅಧ್ಯಾಪಕ ವಿನ್ಸೆಂಟ್ ಫೆರ್ನಾಂಡಿಸ್, ದ.ಕ. ಜಿಲ್ಲಾ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಎಸ್. ಭೂಮ್ ರೆಡ್ಡಿ, ಶಿವಮೊಗ್ಗ ಜಿಲ್ಲಾ ಎಸ್ಪಿ ನಟರಾಜ್, ಅನಿವಾಸಿ ಭಾರತೀಯ ಉದ್ಯಮಿಗಳಾದ ಫಯಾಝ್ ಯೂಸುಫ್, ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಧನಂಜಯ ನಟ್ಟಿಬೈಲ್, ಸುರೇಶ ಅತ್ರಮಜಲು, ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ಇಳಂತಿಲ ಗ್ರಾ.ಪಂ. ಸದಸ್ಯ ಯೂಸುಫ್ ಪೆದಮಲೆ, ಎಸ್‌ಡಿಪಿಐಯ ಅನ್ವರ್ ಸಾದಾತ್ ಬಜತ್ತೂರು, ಕಾಂಗ್ರೆಸ್ ಮುಖಂಡ ಮುರಳೀಧರ ರೈ ಮಠಂತಬೆಟ್ಟು, ಡಾ. ರಾಜಾರಾಮ್ ಕೆ.ಬಿ., ಉದ್ಯಮಿಗಳಾದ ಚಂದಪ್ಪ ಮೂಲ್ಯ, ಆಚಿ ಇಬ್ರಾಹೀಂ, ಸಿದ್ದೀಕ್ ಕೆಂಪಿ, ನಝೀರ್ ಮಠ, ಹಾರೂನ್ ರಶೀದ್ ಅಗ್ನಾಡಿ ಮತ್ತಿತರರು ಉಪಸ್ಥಿತರಿದ್ದರು.


ಕ್ಲಬ್‌ನ ಇರ್ಷಾದ್ ಯು.ಟಿ., ಸಿದ್ದೀಕ್ ಹ್ಯಾಪಿ ಟೈಮ್ಸ್, ರಫೀಕ್ ಮಾಸ್ಟರ್, ಇಬ್ರಾಹೀಂ ಸಿಟಿ, ನವಾಝ್ ಎಲೈಟ್ ಹಾಗೂ ಅನೀಸ್ ಗಾಂಧಿಪಾರ್ಕ್ ಕಾರ್ಯಕ್ರಮ ನಿರ್ವಹಿಸಿದರು.


ಸಮಾರೋಪ ಸಮಾರಂಭ:
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಾಜಿ ಝಕಾರಿಯಾ ಜೋಕಟ್ಟೆ ಅಲ್‌ಮುಝೈನ್‌ರವರು ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಮಾಜಸೇವೆಯ ಮೂಲಕ ಬಡವರ ಪಾಲಿಗೆ ನೆರಳಾಗುತ್ತಿರುವ ಉಬಾರ್ ಸ್ಪೋರ್ಟಿಂಗ್ ಕ್ಲಬ್‌ನಂತಹ ಸಂಸ್ಥೆಗಳು ಸಮಾಜಕ್ಕೆ ಶಕ್ತಿಯಿದ್ದ ಹಾಗೆ. ಕ್ರೀಡೆ ದೈಹಿಕ ಆರೋಗ್ಯವನ್ನು ಕಾಪಾಡುವುದಲ್ಲದೆ, ಸೌಹಾರ್ದತೆಯನ್ನು ಬೆಳೆಸುತ್ತದೆ. ಸಮಾಜದಲ್ಲಿ ಸಹೋದರತೆ, ಸೌಹಾರ್ದತೆ ಮುಖ್ಯವಾಗಿದ್ದು, ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಒಗ್ಗಟ್ಟಾಗಿ ಸಾಗಬೇಕು. ಬಡವರಿಗೆ ನಮ್ಮ ಕೈಲಾದ ಸಹಾಯವನ್ನು ಮಾಡಬೇಕು. ಉಬಾರ್ ಸ್ಪೋರ್ಟಿಂಗ್ ಕ್ಲಬ್ ಕೇವಲ ಕ್ರೀಡೆಗಷ್ಟೇ ಆದ್ಯತೆ ನೀಡದೇ ಇದರೊಂದಿಗೆ ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾದ ಸಂಸ್ಥೆಯಾಗಿದೆ. ಮುಂದಕ್ಕೆ ನಾನು ಇದರ ಸಮಾಜಮುಖಿ ಕೆಲಸಗಳಿಗೆ ಬೆಂಬಲ ನೀಡುತ್ತೇನೆ. ರಂಝಾನ್ ಸಮಯದಲ್ಲಿ ಈ ಕ್ಲಬ್‌ನವರು ಎಷ್ಟು ಬಡ ಜನರ ಹೆಸರು ನೀಡಿದರೂ ಅವರಿಗೆ ಆಹಾರದ ಕಿಟ್ ನಾನು ನೀಡುತ್ತೇನೆ. ಇದರಲ್ಲಿ ಯಾವುದೇ ಧರ್ಮ ಬೇಧವಿಲ್ಲ. ನಾನು ನೂರು ಮಂದಿಯನ್ನು ವಿದೇಶಕ್ಕೆ ಉದ್ಯೋಗಕ್ಕೆಂದು ಕರೆದುಕೊಂಡು ಹೋಗುವ ಯೋಜನೆ ರೂಪಿಸಿದ್ದು, ಅದರಲ್ಲಿ ಈ ಕ್ಲಬ್‌ನ ಮೂಲಕ ಐದು ಮಂದಿ ಕೌಶಲ್ಯಭರಿತ ಹಾಗೂ ಕ್ರಿಯಾಶೀಲ ಯುವಕರನ್ನು ಆಯ್ಕೆ ಮಾಡಿ ಕಳುಹಿಸಿ ಅವರನ್ನು ನಾನು ವಿದೇಶಕ್ಕೆ ಕರೆದುಕೊಂಡು ಹೋಗಿ ಉದ್ಯೋಗ ಕೊಡಿಸುತ್ತೇನೆ ಎಂದರು.


ಈ ಸಂದರ್ಭ ಪ್ರಮುಖರಾದ ಇನಾಯತ್ ಅಲಿ, ಸುಹೈಲ್ ಕಂದಕ್, ಹೇಮನಾಥ ಶೆಟ್ಟಿ, ಸಿರಾಜ್ ಎರ್ಮಾಲ್, ಹಾಜಿ ಯೂಸುಫ್ ಎಚ್., ಶುಕೂರ್ ಹಾಜಿ, , ಡಾ. ಎಂ ಆರ್ ಶೆಣೈ, ಡಾ. ನಿರಂಜನ್ ರೈ, ಪ್ರಶಾಂತ್ ಡಿಕೋಸ್ತ, ಅಬ್ದುಲ್ ರಹಿಮಾನ್ ಯೂನಿಕ್, ಫಾರೂಕ್ ಬಯ್ಯಬೆ, ಫಾರೂಕ್ ಪೆರ್ನೆ, ಗಿರೀಶ್ ಆಳ್ವ, ಮಸೂದ್ ನೆಕ್ಕಿಲಾಡಿ, ಅಲ್ತಾಫ್ ಮಂಗಳೂರು, ನಝೀರ್ ಮಠ, ಇಕ್ಬಾಲ್ ಕರ್ವೇಲ್, ಮುಸ್ತಫಾ ಡಬಲ್ ಫೋರ್, ಮೋನು ಪಿಲಿಗೂಡು ಮತ್ತಿತರರು ಇದ್ದರು.

ಹೊಲಿಗೆ ಯಂತ್ರ ವಿತರಣೆ
ಭಾರತೀಯ ಜೀವನ ಪದ್ದತಿಯ ಪ್ರಧಾನ ಕಾರ್ಯಗಳಾದ ತ್ಯಾಗ ಮತ್ತು ಸೇವೆಯನ್ನು ತನ್ನ ಧ್ಯೇಯವನ್ನಾಗಿಸಿರುವ ಹುಡುಗಾಟಿಕೆಯ ಯುವಕರ ತಂಡ ಒಗ್ಗೂಡಿ ಕಟ್ಟಿರುವ ಉಬಾರ್ ಡೋನರ್ಸ್ ಮತ್ತು ಉಬಾರ್ ಸ್ಪೋರ್ಟಿಂಗ್ ಕ್ಲಬ್ ಸಂಘಟನೆಗೆ ಒದಗಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಹಿನ್ನೆಲೆಯಲ್ಲಿ ಹಸಿದವನಿಗೆ ಒಂದೊತ್ತು ಅನ್ನ ನೀಡುವುದಕ್ಕಿಂತ ಅನ್ನವನ್ನು ತಾನೇ ಸಂಪಾದಿಸುವ ಶಕ್ತಿ ನೀಡುವುದು ಶ್ರೇಷ್ಠ ಎಂಬ ಸಿದ್ಧಾಂತದಂತೆ ಈ ಬಾರಿ 100 ಮಂದಿ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರವನ್ನು ವಿತರಿಸುವ ಯೋಜನೆಗೆ ಉಬಾರ್ ಕಪ್ ಕ್ರಿಕೆಟ್ ಪಂದ್ಯಾಟದ ವೇಳೆ ಚಾಲನೆ ನೀಡಲಾಯಿತು.


ಉಬಾರ್ ಸ್ಪೋರ್ಟ್ಂಗ್ ಕ್ಲಬ್ ದಶಮಾನೋತ್ಸವದ ಸಮಯದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದ ವೇಳೆ ಸಂಘಟನೆಯ ಅಧ್ಯಕ್ಷ ಶಬೀರ್ ಕೆಂಪಿ ಹಾಗೂ ಗೌರವ ಸಲಹೆಗಾರ ಯು.ಟಿ. ತೌಸೀಫ್ ನೇತೃತ್ವದಲ್ಲಿ ಹೊಲಿಗೆ ಯಂತ್ರದ ವಿತರಣಾ ಕಾರ್ಯ ನಡೆಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಯು.ಟಿ. ತೌಸೀಫ್‌ರವರು, ಈ ಹಿಂದೆಲ್ಲಾ ಬಡವರನ್ನು ಗುರುತಿಸಿ ಅವರಿಗೆ ಆಹಾರದ ಕಿಟ್ ವಿತರಿಸುತ್ತಿದ್ದೆವು. ಆದರೆ ನಮ್ಮ ಸಮಾಜಸೇವೆಯನ್ನು ಗುರುತಿಸಿ ಈ ಬಾರಿ ನಮ್ಮ ಸಂಘಟನೆಗೆ ಜಿಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದಾಗ ನಮ್ಮ ಹೊಣೆಗಾರಿಕೆ ಹೆಚ್ಚಾದಂತೆ ಭಾಸವಾಗಿದೆ. ಅದಕ್ಕಾಗಿ ಕಿಟ್ ಬದಲು ಬಡವರೇ ಕಿಟ್ ನೀಡಲು ಸಾಮರ್ಥ್ಯವನ್ನು ಹೊಂದುವಂತಹ ಸ್ವ ಉದ್ಯೋಗವನ್ನು ಸೃಷ್ಟಿಸುವ ಯೋಜನೆ ರೂಪಿಸಲಾಯಿತು. ಅದಕ್ಕಾಗಿ ಈ ಬಾರಿ ೧೦೦ ಮಂದಿಗೆ ಹೊಲಿಗೆ ಯಂತ್ರವನ್ನು ವಿತರಿಸಿ, ಅವರಿಗೆ ಅಗತ್ಯ ವೆನಿಸಿದರೆ ತರಬೇತಿ ನೀಡಿ, ಅವರಿಂದ ಹೊಲಿಯಲ್ಪಟ್ಟ ವಸ್ತ್ರಗಳಿಗೆ ಮಾರುಕಟ್ಟೆಯನ್ನೂ ಒದಗಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದರು.

LEAVE A REPLY

Please enter your comment!
Please enter your name here