ಪುತ್ತೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಕಿರಿಯ ವಿಭಾಗದ ಕಥೆ ಹೇಳುವ ಸ್ಪರ್ಧೆಯಲ್ಲಿ ಇಲ್ಲಿನ 4ನೇ ತರಗತಿಯ ವಿದ್ಯಾರ್ಥಿನಿ ಇವಾನಿಯ.ಕೆ.ಪ್ರವೀಣ್ ಇವರು ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಉದನೆ.ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯಾಗಿರುವ ಈಕೆ ಅಡ್ಡಹೊಳೆ ನಿವಾಸಿ ಪ್ರವೀಣ್ ಥೋಮಸ್ ಹಾಗೂ ಸೈಂಟ್ ಆಂಟನೀಸ್ ಪ್ರೌಢ ಶಾಲಾ ಶಿಕ್ಷಕಿ ಎಲಿಝಬೆತ್ ಪಿ.ಯು ದಂಪತಿಗಳ ಸುಪುತ್ರಿ.

ಇವರನ್ನು ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ,ಸಹ ಸಂಚಾಲಕರಾದ ಡೀಕನ್ ಜಾರ್ಜ್ ,ಮುಖ್ಯಗುರು ಸಿಬಿಚ್ಚನ್ ಟಿ.ಸಿ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಅಭಿನಂದಿಸಿದರು.