ಪುತ್ತೂರು: ಮಂಗಳೂರಿನ ನಿತ್ಯಾನಂದ ಧ್ಯಾನ ಕೇಂದ್ರದ ಆಶ್ರಯದಲ್ಲಿ ಪೆರ್ಲ ಮುಖ್ಯ ರಸ್ತೆಯಲ್ಲಿರುವ ಗಣೇಶ ಮಂದಿರದ ಸಭಾಂಗಣದಲ್ಲಿ ಡಿ. 21 ರಂದು ಭಾನುವಾರ ಬೆಳಿಗ್ಗೆ 11 ರಿಂದ ಅಪರಾಹ್ನ 1 ರವರೆಗೆ ಪ್ರಾಥಮಿಕ ವೇದಾಂತ ತರಬೇತಿ ಹಾಗೂ ಭಾವಿ ಜನ್ಮಯಾನ ಶಿಬಿರವನ್ನು ಆಯೋಜಿಸಲಾಗಿದೆ.
ಪ್ರಾಥಮಿಕ ವೇದಾಂತ ತರಬೇತಿಯಿಂದ ನಮ್ಮಲ್ಲಿರುವ ಅಜ್ಞಾನ,ದುಃಖಗಳು ನಿವೃತ್ತಿಯಾಗಿ ಆನಂದ, ಸ್ವಾತಂತ್ರತೆ ಪ್ರಾಪ್ತಿಯಾಗುತ್ತದೆ. ಭಾವಿ ಜನ್ಮಯಾನದಲ್ಲಿ ನಮ್ಮ ಮುಂದಿನ ಜನ್ಮಗಳನ್ನು ಹಾಗೂ ಅದರ ಹೆಚ್ಚಿನ ವಿವರಗಳನ್ನು ನಾವೇ ಸ್ವತಃ ನೋಡಬಹುದಾಗಿದೆ. ಶಿಬಿರದಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರ ನೀಡಲಾಗುವುದು.ಹೆಚ್ಚಿನ ಮಾಹಿತಿಗೆ 9744275999,9449639340 www.nityayoga.in ಸಂಪರ್ಕಿಸುವಂತೆ ಕಾರ್ಯಕ್ರಮದ ಮಾರ್ಗದರ್ಶಕರಾದ ಮಂಗಳೂರಿನ ಕಣ್ಣಿನ ತಜ್ಞ ಡಾ. ನಿತ್ಯನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾರ್ಗದರ್ಶನ ಮಾಡಲಿದ್ದಾರೆ
