ರೋಟರಿಯ ಸೇವೆಯಿಂದ ಜಗತ್ತು ಕ್ಷೇಮಾಭಿವೃದ್ಧಿ-ರಾಮಕೃಷ್ಣ ಪಿ.ಕೆ
ಪುತ್ತೂರು:ಅಂತರರಾಷ್ಟ್ರೀಯ ರೋಟರಿಯು ಜಗತ್ತಿನಲ್ಲಿಯೇ ಬಹತ್ ನೆಟ್ವರ್ಕ್ ಹೊಂದಿದ್ದು, ರೋಟರಿಯ ಸಮಾಜಮುಖಿ ಸೇವಾ ಕಾರ್ಯಗಳು ಜಗತ್ತಿನ ಕ್ಷೇಮಾಭಿವೃದ್ಧಿಗೆ ಶ್ರಮಿಸುವಂತಾಗಿದ್ದು ತನ್ನ ಉದಾತ್ತ ಸೇವೆಯ ಮೂಲಕ ಜಗತ್ತಿಗೆ ಶಾಂತಿಯನ್ನು ತರಲು ಅವಲಂಭಿಸುತ್ತಿದೆ ಎಂದು ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ.ರವರು ಹೇಳಿದರು.

ಡಿ.16ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಿದ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ನಾಲ್ಕರ ರೋಟರಿ ಕ್ಲಬ್ ಪುತ್ತೂರು ಸಿಟಿಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭದಲ್ಲಿ ಅವರು ಕ್ಲಬ್ನ ವಿವಿಧ ಚಟುವಟಿಕೆಗಳನ್ನು ಅನಾವರಣಗೊಳಿಸಿ ಮಾತನಾಡಿದರು.
ವೃತ್ತಿ, ಸಂಘಟನೆ ಇವೆರಡೂ ಸಂಭ್ರಮಿಸಿದಾಗ ಅಲ್ಲಿದೆ ನಿಜವಾದ ಸಂಭ್ರಮ-ಡಾ.ರಾಜಾರಾಮ್ ಬಿ.ಕೆ:
ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ.ರಾಜಾರಾಮ್ ಕೆ.ಬಿರವರು ಕ್ಲಬ್ನ ಬುಲೆಟಿನ್ “ರೋಟ ವಿಕಾಸ” ಎಡಿಟರ್ ಮನೋಹರ್ ಕೆ. ಸಂಪಾದಕತ್ವದ ಬುಲೆಟಿನ್ ಅನಾವರಣಗೊಳಿಸಿ ಮಾತನಾಡಿ, ರೋಟರಿ ಸಿಟಿ ಅಧ್ಯಕ್ಷ ಉಲ್ಲಾಸ್ ಪೈರವರು ಕ್ಲಬ್ ಅಭಿವೃದ್ಧಿಯಲ್ಲಿ ರೋಟರಿಯ ಐದು ಆಯಾಮಗಳಲ್ಲಿ ಸರ್ವರ ಸಹಕಾರದೊಂದಿಗೆ ಬಹಳ ಉಲ್ಲಾಸದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿ ಹಾಗೂ ಸಂಘಟನೆ ಇವೆರಡೂ ಸಂಭ್ರಮಿಸಿದಾಗ ಅಲ್ಲಿ ನಿಜವಾದ ಸಂಭ್ರಮ ಮೂಡಿಕೊಳ್ಳುತ್ತದೆ. ರೋಟರಿ ಪ್ರಸ್ತುತ ಧ್ಯೇಯವಾಗಿರುವ ಒಳಿತಿಗಾಗಿ ಒಂದಾಗೋಣ ಎಂಬಂತೆ ನಾವೆಲ್ಲಾ ಕಾರ್ಯ ನಿರ್ವಹಿಸೋಣ ಎಂದರು.
ರೋಟರಿ ಸಿಟಿಯ ಸೇವಾ ಕಾರ್ಯಗಳು ಸಮಾಜದಲ್ಲಿ ಜನಮನ್ನಣೆ-ಹರೀಶ್ ಸಿ.ಎಚ್:
ರೋಟರಿ ವಲಯ ಸೇನಾನಿ ಹರೀಶ್ ಸಿ.ಎಚ್ ವಿಟ್ಲ ಮಾತನಾಡಿ, ತಾನು ಪ್ರತಿನಿಧಿಸುವ ವಿಟ್ಲ ಕ್ಲಬ್ನ ಮಾತೃಕ್ಲಬ್ ಆಗಿರುವ ರೋಟರಿ ಸಿಟಿ ಕ್ಲಬ್ ಸಮಾಜಮುಖಿ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡುವ ಮೂಲಕ ಜನಮನ್ನಣೆ ಗಳಿಸಿದೆ. ನೆಲ್ಲಿಕಟ್ಟೆ ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಯನ್ನು ಆರಂಭಿಸಿರುವುದು ಜೊತೆಗೆ ಇನ್ನಿತರ ಸಮಾಜಮುಖಿ ಕಾರ್ಯಗಳನ್ನು ಸಮಾಜಕ್ಕೆ ಪರಿಚಯಿಸಿರುವುದು ಶ್ಲಾಘನೆಗೆ ಪಾತ್ರವಾಗಿದೆ ಎಂದರು.
ಸಮಾಜಮುಖಿ ಕಾರ್ಯ ನಿರ್ವಹಿಸಲು ಬಹಳ ಹೆಮ್ಮೆ-ಉಲ್ಲಾಸ್ ಪೈ:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಉಲ್ಲಾಸ್ ಪೈ ಮಾತನಾಡಿ, ರೋಟರಿ ಸಿಟಿ ಅಧ್ಯಕ್ಷನಾಗಿ ಸಮಾಜಮುಖಿ ಕಾರ್ಯ ನಿರ್ವಹಿಸಲು ನನಗೆ ಬಹಳ ಹೆಮ್ಮೆಯೆನಿಸುತ್ತದೆ. ನಮ್ಮ ಸಮಾಜಮುಖಿ ಕಾರ್ಯಗಳ ಹಿಂದೆ ನಮ್ಮ ಸದಸ್ಯರ ಪ್ರೋತ್ಸಾಹ ಮೆಚ್ಚುವಂತಹುದು. ಇಲ್ಲಿಯವರೆಗೆ ಕ್ಲಬ್ ಸದಸ್ಯರು ಹಾಗೂ ಇತರ ಕ್ಲಬ್ನ ಸದಸ್ಯರು ಪ್ರೋತ್ಸಾಹ ನೀಡಿದ್ದು ಇದು ಮುಂದೆಯೂ ಮುಂದುವರೆಯಲಿ ಎಂದರು.
ಅಭಿನಂದನೆ:
ಕ್ಲಬ್ ಕಾರ್ಯದರ್ಶಿ ಡಾ.ಪೊಡಿಯರವರ ಮಕ್ಕಳಾದ ಗಗನ್ ದೀಪ್ರವರು ವಾಲಿಬಾಲ್ ಹಾಗೂ ಬ್ಯಾಡ್ಮಿಂಟನ್ನಲ್ಲಿ ಶಾಲಾ ವಿಭಾಗೀಯ ಮಟ್ಟವನ್ನು ಪ್ರತಿನಿಧಿಸಿದ್ದು, ರಾಷ್ಟ್ರೀಯ ಕರಾಟೆ ಸ್ಪರ್ಧೆಯ ಕಟಾದಲ್ಲಿ ಬೆಳ್ಳಿ, ಕುಮಿಟೆಯಲ್ಲಿ ಕಂಚಿನ ಪದಕ ಪಡೆದ ಕು.ವೃದ್ಧಿರವರನ್ನು ಕ್ಲಬ್ ಯೂತ್ ಸರ್ವಿಸ್ನಡಿಯಲ್ಲಿ ಅಭಿನಂದಿಸಲಾಯಿತು.
ರೊಟೇರಿಯನ್ಸ್ಗಳ ಗುರುತಿಸುವಿಕೆ:
ಕ್ಲಬ್ನ ಸದಸ್ಯರಾಗಿದ್ದು ವರ್ಷದಲ್ಲಿ ರೂ.ಒಂದು ಲಕ್ಷಕ್ಕಿಂತಲೂ ಮಿಕ್ಕಿ ನೆರವು ನೀಡುತ್ತಿರುವ ಪ್ರಕಾಶ್ ಬಿ.ಕೆ, ರವಿಕುಮಾರ್ ಕಲ್ಕಾರು, ವಿಕ್ಟರ್ ಮಾರ್ಟಿಸ್, ಎಸ್.ಪಿ.ಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ನ ರೂಪಲೇಖ ಪಾಣಾಜೆ, ರೋಟರಿ ಫೌಂಡೇಶನ್ಗೆ ಟಿ.ಆರ್.ಎಫ್ ದೇಣಿಗೆ ನೀಡಿ ಎಂ.ಪಿ.ಎಚ್.ಎಫ್ ಪದವಿ ಪಡೆದಿರುವ ಪೂರ್ವಾಧ್ಯಕ್ಷ ಡಾ.ಹರಿಕೃಷ್ಣ ಪಾಣಾಜೆ, ಪಿ.ಎಚ್.ಎಫ್ ಪದವಿ ಪಡೆದ ರಾಮಚಂದ್ರ ಬನ್ನೂರು, ಅಧ್ಯಕ್ಷ ಉಲ್ಲಾಸ್ ಪೈ, ಪ್ರಶಾಂತ್ ಶೆಣೈ, ಲಾರೆನ್ಸ್ ಗೊನ್ಸಾಲ್ವಿಸ್, ಜೆರೋಮಿಯಸ್ ಪಾಯಿಸ್, ಲಕ್ಷ್ಮೀಕಾಂತ್ ಆಚಾರ್ಯರವರುಗಳಿಗೆ ಶಾಲು ಹೊದಿಸಿ ಗುರುತಿಸಲಾಯಿತು.
ಸೇವಾ ಕೊಡುಗೆಗಳು:
ಕಮ್ಯೂನಿಟಿ ಸರ್ವೀಸ್ ವತಿಯಿಂದ ಕೊಂಬೆಟ್ಟು ಜ್ಯೂನಿಯರ್ ಕಾಲೇಜಿಗೆ ಹಾಗೂ ಹಾರಾಡಿ ಸರಕಾರಿ ಶಾಲೆಗೆ ಶುದ್ಧ ನೀರಿನ ಘಟಕವನ್ನು, ಮಚ್ಚಿಮಲೆ ಅಂಗನವಾಡಿಗೆ ನೀರಿನ ಟ್ಯಾಂಕ್, ಸದಸ್ಯ ರವಿಕುಮಾರ್ ಕಲ್ಕಾರುರವರ ಪ್ರಾಯೋಜಕತ್ವದಲ್ಲಿ ಬಡಗ ಸರಕಾರಿ ಶಾಲೆಗೆ ರೂ.20 ಸಾವಿರದ ಲ್ಯಾಬ್ ಸಲಕರಣೆಗಳು, ಬೆಳ್ತಂಗಡಿ ಸರಕಾರಿ ಶಾಲೆಗೆ ಶಿಕ್ಷಕರ ವೇತನವಾಗಿ ರೂ.25 ಸಾವಿರ ದೇಣಿಗೆಯನ್ನು ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆರವರು ಹಸ್ತಾಂತರಿಸಿದರು.
ವ್ಹೀಲ್ಚೇರ್ ಕೊಡುಗೆ:
ಕಳೆದ 23 ವರ್ಷದಿಂದ ಅರ್ಹ ಫಲಾನುಭವಿಗಳಿಗೆ ೪೬ ವ್ಹೀಲ್ಚೇರ್ಗಳನ್ನು ನೀಡಿದ್ದು ಇದೀಗ 47ನೇ ವ್ಹೀಲ್ಚೇರ್ ಅನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ನೀಡುತ್ತಿರುವ ಕ್ಲಬ್ ಪೂರ್ವಾಧ್ಯಕ್ಷ ಜಯಕುಮಾರ್ ರೈ ಎಂ.ಆರ್ರವರು ವ್ಹೀಲ್ಚೇರ್ ಅನ್ನು ಸರಕಾರಿ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ.ಯದುರಾಜ್ರವರಿಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಿದರು.
ಟ್ರೋಫಿ ಹಸ್ತಾಂತರ:
ಇತ್ತೀಚೆಗೆ ದರ್ಬೆ ಫಿಲೋಮಿನಾ ಕ್ರೀಡಾಕೂಟದಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಆಯೋಜಿಸಿದ ಜಿಲ್ಲಾ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ರೋಟರಿ ಸಿಟಿಯವರು ಗಳಿಸಿದ್ದು ಈ ಸಮಗ್ರ ಟ್ರೋಫಿಯನ್ನು ಕ್ಲಬ್ ಅಧ್ಯಕ್ಷ ಉಲ್ಲಾಸ್ ಪೈರವರಿಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.
ರವಿಕುಮಾರ್ ಕಲ್ಕಾರು ಪ್ರಾರ್ಥಿಸಿದರು. ಕ್ಲಬ್ ಅಧ್ಯಕ್ಷ ಉಲ್ಲಾಸ್ ಪೈರವರ ಪತ್ನಿ ಸವಿತಾ ಉಲ್ಲಾಸ್ ಪೈ ಉಪಸ್ಥಿತರಿದ್ದರು. ಕ್ಲಬ್ ಅಧ್ಯಕ್ಷ ಉಲ್ಲಾಸ್ ಪೈ ಸ್ವಾಗತಿಸಿ, ಕಾರ್ಯದರ್ಶಿ ಡಾ.ಪೊಡಿಯ ವರದಿ ಮಂಡಿಸಿದರು. ಕ್ಲಬ್ ನಿಯೋಜಿತ ಅಧ್ಯಕ್ಷ ಉಮೇಶ್ಚಂದ್ರ ವಂದಿಸಿದರು. ಕ್ಲಬ್ ಪೂರ್ವಾಧ್ಯಕ್ಷರಾದ ಜೋನ್ ಕುಟಿನ್ಹಾ, ನಟೇಶ್ ಉಡುಪ, ಜೆರೋಮಿಯಸ್ ಪಾಯಿಸ್ರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಸದಸ್ಯ ಕಾರ್ತೀಕ್ ರೈರವರು ಜಿಲ್ಲಾ ಗವರ್ನರ್ರವರ ಪರಿಚಯ ಮಾಡಿದರು. ಕ್ಲಬ್ ಪೂರ್ವಾಧ್ಯಕ್ಷ ಕೃಷ್ಣಮೋಹನ್ ಪಿ.ಎಸ್ ಹಾಗೂ ಅಕ್ಷತಾ ಪಿ.ಶೆಣೈ ಕಾರ್ಯಕ್ರಮ ನಿರೂಪಿಸಿದರು. ವೊಕೇಶನಲ್ ಸರ್ವಿಸ್ ನಿರ್ದೇಶಕ ಧರ್ಣಪ್ಪ ಗೌಡ, ಯೂತ್ ಸರ್ವಿಸ್ ನಿರ್ದೇಶಕ ಡೆನ್ನಿಸ್ ಮಸ್ಕರೇನ್ಹಸ್, ಸಾರ್ಜೆಂಟ್ ಎಟ್ ಆಮ್ಸ್೯ ಸುಬ್ರಹ್ಮಣ್ಯ ಹೆಬ್ಬಾರ್ರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ದ್ವಾರಕಾ ಪ್ರತಿಷ್ಠಾನದ ಗೋಪಾಲಕೃಷ್ಣ ಭಟ್ರವರಿಗೆ ರೋಟರಿ ‘ಸಮರ್ಥ’ ಪ್ರಶಸ್ತಿ ಪ್ರದಾನ…
ರೋಟರಿ ಸಿಟಿ ವರ್ಷಂಪ್ರತಿ ಕೊಡಲ್ಪಡುವ ವೊಕೇಶನಲ್ ಎಕ್ಸೆಲೆನ್ಸ್ ‘ಸಮರ್ಥ’ ಅವಾರ್ಡ್ನ್ನು 2025-26ನೇ ಸಾಲಿನಲ್ಲಿ ಸಿವಿಲ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸಾಧನೆಗೆ ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆರವರು ದ್ವಾರಕಾ ಪ್ರತಿಷ್ಠಾನ, ದ್ವಾರಕಾ ಕನ್ಸ್ಟ್ರಕ್ಷನ್ಸ್ ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿ ಸುಮಾರು 350ಕ್ಕೂ ಮಿಕ್ಕಿ ಜನರಿಗೆ ಉದ್ಯೋಗ ನೀಡಿದ ಅನ್ನದಾತರೆನಿಸಿಕೊಂಡ ಗೋಪಾಲಕೃಷ್ಣ ಭಟ್ರವರಿಗೆ ಪ್ರದಾನ ಮಾಡಿದರು. ವೃತ್ತಿ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದ್ದು, ತಮ್ಮ ವೃತ್ತಿಯೊಂದಿಗೆ ಅನನ್ಯವಾದ ಅನುಕರಣೀಯ ಸಮಾಜಮುಖಿ ಕಾರ್ಯಗಳನ್ನು ಮಾಡಿದ ರೋಟರಿ ಸದಸ್ಯರಲ್ಲದ ವ್ಯಕ್ತಿಗೆ ಕಳೆದ 16 ವರ್ಷಗಳಿಂದ ರೋಟರಿ ಸಿಟಿಯು ಈ ಅವಾರ್ಡ್ನ್ನು ನೀಡುತ್ತಾ ಬಂದಿದೆ. ಸಮರ್ಥ ಅವಾರ್ಡ್ ಸ್ವೀಕರಿಸಿ ಮಾತನಾಡಿದ ಗೋಪಾಲಕೃಷ್ಣ ಭಟ್ ರವರು ದುಡಿದ ದುಡಿಮೆಯಲ್ಲಿ ಒಂದಷ್ಡು ಅಂಶವನ್ನು ಸಮಾಜದ ಅಭಿವೃದ್ಧಿಗೆ, ಕಷ್ಟದಲ್ಲಿರುವವರಿಗೆ ಸ್ಪಂದಿಸಲು ತೊಡಗಿಸಿದಾಗ ಜೀವನ ಸಾರ್ಥಕವೆನಿಸುತ್ತದೆ. ಇಂದು ರೋಟರಿ ಸಿಟಿಯವರು ನನ್ನನ್ನು ಗುರುತಿಸಿ ಸಮರ್ಥ ಅವಾರ್ಡ್ ನೀಡಿ ಗೌರವಿಸಿದ್ದಕ್ಕೆ ಕೃತಜ್ಞತೆಗಳು ಜೊತೆಗೆ ನನಗೆ ಸಿಕ್ಕಿದ ಈ ಪ್ರಶಸ್ತಿಯನ್ನು ನಾನು ಸಮಾಜಕ್ಕೆ ಅರ್ಪಣೆ ಮಾಡುತ್ತೇನೆ ಎಂದರು.
ಸನ್ಮಾನ…
ಕಣ್ಣಿಗೆ ಬಟ್ಟೆ ಕಟ್ಟಿ ಗಾಂಧಾರಿ ವಿದ್ಯೆ ಮೂಲಕ 24 ಗಂಟೆಯಲ್ಲಿ ಸುಮಾರು 350ಕ್ಕೂ ಮಿಕ್ಕಿ ಸ್ಯಾಂಡ್ ಆರ್ಟ್(ಮರಳು ಚಿತ್ರಗಾರಿಕೆ) ಬಿಡಿಸಿ ದಾಖಲೀಕರಣಗೊಳಿಸುವ ಮೂಲಕ ಏಷ್ಯನ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಭಾಜನರಾಗಿರುವ ವರ್ಣಕುಟೀರ ಸಂಸ್ಥೆಯ ಹಾಗೂ ಉಪ್ಪಿನಂಗಡಿ ಇಂದ್ರಪ್ರಸ್ಥ ಶಾಲೆಯ ವಿದ್ಯಾರ್ಥಿನಿ, ಹಿರೇಬಂಡಾಡಿ ನಿವಾಸಿ ಶಮಿಕ ಪಿ.ಎಂರವರನ್ನು ಹಾಗೂ ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆರವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಶಮಿಕರವರ ಸನ್ಮಾನ ಸಂದರ್ಭ ಶಮಿಕರವರ ಹೆತ್ತವರಾದ ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ನಿಯೋಜಿತ ಅಧ್ಯಕ್ಷ ಕೇಶವ ಪಿ.ಎಂ ಹಾಗೂ ಗೀತಾಮಣಿ ಉಪಸ್ಥಿತರಿದ್ದರು.