ವಾಯುಸೇನೆಗೆ ಆಯ್ಕೆಯಾದ ಕೀರ್ತನ್ ಕೆ.ಪಿ ಅವರಿಗೆ ವಿದ್ಯಾಮಾತಾದಲ್ಲಿ ಅಭಿನಂದನಾ ಸಮಾರಂಭ

0

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ವಾಯುಸೇನೆಗೆ ಆಯ್ಕೆಯಾಗಿರುವ ಕೀರ್ತನ್ ಕೆ.ಪಿ ಯವರಿಗೆ ವಿದ್ಯಾಮಾತಾದ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು.

2023ರಿಂದ ವಿದ್ಯಾಮಾತಾ ಅಕಾಡೆಮಿಯ ಉಚಿತ ಮಿಲಿಟರಿ ನೇಮಕಾತಿಗಳಿಗೆ ತರಬೇತಿ ಪಡೆಯುತ್ತಿದ್ದ ಪುತ್ತೂರು ತಾಲೂಕು ಉಪ್ಪಿನಂಗಡಿಯ ಹಿರೇಬಂಡಾಡಿ ಗ್ರಾಮದ ಕಂದಲಾಜೆ ನಿವಾಸಿ ಪದ್ಮಯ ಗೌಡ ಮತ್ತು ಪುಷ್ಪಲತಾ ದಂಪತಿಗಳ ಪುತ್ರ ಕೀರ್ತನ್ ವಿವೇಕಾನಂದ ತಾಂತ್ರಿಕ ವಿದ್ಯಾಲಯದಲ್ಲಿ ಡಿಪ್ಲೋಮಾ ಪದವಿ ಓದುತ್ತಿದ್ದು, ಓದಿನೊಂದಿಗೆ ವಿದ್ಯಾಮಾತಾ ಅಕಾಡೆಮಿಯಲ್ಲಿ ಮಿಲಿಟರಿ ಹುದ್ದೆಗಳ ನೇಮಕಾತಿಗಳಿಗೆ ತರಬೇತಿಯನ್ನು ಪಡೆಯುತ್ತಿದ್ದರು. ವಿಶೇಷ ಏನೆಂದರೆ ಇವರು ಅಗ್ನಿಪಥ್ ಯೋಜನೆಯಲ್ಲಿ ಭೂಸೇನೆಯ ನೇಮಕಾತಿಯಲ್ಲೂ ಪ್ರಥಮ ಹಂತದ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಅದರಲ್ಲಿ ದೈಹಿಕ ಕ್ಷಮತೆಯ ಪರೀಕ್ಷೆ ಮಾತ್ರ ಬಾಕಿ ಇರುತ್ತದೆ. ಇದರ ಮಧ್ಯೆಯೇ ವಾಯುಸೇನೆಯ ಎಲ್ಲಾ ಹಂತಗಳ ಪರೀಕ್ಷೆಯನ್ನು ಪಾಸ್ ಮಾಡಿ ವಾಯುಸೇನೆಗೆ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ನಿವೃತ್ತ ಸೈನಿಕರಾದ ಸುಬೇದಾರ್ ಮೇಜರ್ (ASC) ಸುರೇಶ್ ಎಂ.ರವರು ಆಗಮಿಸಿ ಕೀರ್ತನ್ ಕೆ.ಪಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅಕಾಡೆಮಿಯ ವಿದ್ಯಾರ್ಥಿಗಳಿಗೆ ಭಾರತೀಯ ಸೇನೆಯಲ್ಲಿರುವ ವಿವಿಧ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಝೇವಿಯರ್ ಡಿ’ಸೋಜರವರು ವಿದ್ಯಾಮಾತಾ ಅಕಾಡೆಮಿಯು ಇಂತಹ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ತರಬೇತಿ ಮತ್ತು ಮಾಹಿತಿ ನೀಡುವ ಮೂಲಕ ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಹಲವಾರು ಅವಕಾಶಗಳನ್ನು ಪಡೆಯಲು ಕಾರಣವಾಗಿರುವುದಕ್ಕೆ ಸಂಸ್ಥೆಯನ್ನು ಅಭಿನಂದಿಸಿ, ಕೀರ್ತನ್ ರವರಿಗೆ ಶುಭ ಹಾರೈಸಿದರು.

ಗ್ರಂಥಾಲಯಕ್ಕೆ ಕೀರ್ತನ್ ಕೆ ಪಿ ಅವರಿಂದ ಕೊಡುಗೆ
ತನಗೆ ಉಚಿತ ತರಬೇತಿಯನ್ನು ನೀಡುತ್ತಾ ಸತತ ತನ್ನ ಪರಿಶ್ರಮಕ್ಕೆ ಪ್ರೋತ್ಸಾಹ ನೀಡಿ ತನ್ನ ಕನಸನ್ನು ನನಸು ಮಾಡಲು ಕಾರಣವಾದ ವಿದ್ಯಾಮಾತಾ ಸಂಸ್ಥೆಯ ಗ್ರಂಥಾಲಯಕ್ಕೆ ಹತ್ತು ಸಾವಿರ ರೂಪಾಯಿಗಳನ್ನು ಕೊಡುಗೆಯಾಗಿ ನೀಡಿದರು.

ಕಾರ್ಯಕ್ರಮದಲ್ಲಿ ತರಬೇತುದಾರರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇಷ್ಟರವರೆಗೆ ಮಿಲಿಟರಿ ಭಾರತೀಯ ಸೇನೆಗಳ ಎಲ್ಲಾ ವಿಭಾಗಗಳಿಗೂ ನಮ್ಮಲ್ಲಿ ತರಬೇತಿ ಪಡೆದು ಆಯ್ಕೆಯಾಗಿದ್ದರೂ, ವಾಯುಸೇನೆಗೆ ಆಯ್ಕೆಯಾಗಿಲ್ಲ ಎಂಬ ಕೊರಗಿತ್ತು. ಕೀರ್ತನ್ ಕೆ.ಪಿ.ಯವರು ವಾಯುಸೇನೆಗೆ ಆಯ್ಕೆಯಾಗುವುದರ ಮೂಲಕ ಆ ಕೊರಗು ನೀಗಿದೆ. ಮಿಲಿಟರಿ ಅರೆಮಿಲಿಟರಿ ಹುದ್ದೆಗಳಿಗೆ ಪ್ರಯತ್ನಿಸುವವರು ಸತತವಾಗಿ ಪ್ರಯತ್ನಿಸಿದರೆ ಖಂಡಿತವಾಗಿಯೂ ಎರಡು ವರ್ಷದ ಒಳಗೆ ಸೇವೆಗೆ ಆಯ್ಕೆಯಾಗಬಹುದು. ಈ ನಿಟ್ಟಿನಲ್ಲಿ ವಿದ್ಯಾಮಾತಾ ಅಕಾಡೆಮಿಯಲ್ಲಿ ವಸತಿಯುತ ತರಬೇತಿಯನ್ನು ಕೂಡ ಪ್ರಾರಂಭಿಸಲಾಗಿದೆ. ಕೀರ್ತನ್ ಕೆ.ಪಿ. ಅವರಿಗೆ ಅಭಿನಂದನೆಗಳು
ಭಾಗ್ಯೇಶ್ ರೈ, ಆಡಳಿತ ನಿರ್ದೇಶಕರು, ವಿದ್ಯಾಮಾತಾ ಅಕಾಡೆಮಿ

ಭಾಗ್ಯೇಶ್ ರೈ, ಆಡಳಿತ ನಿರ್ದೇಶಕರು, ವಿದ್ಯಾಮಾತಾ ಅಕಾಡೆಮಿ

LEAVE A REPLY

Please enter your comment!
Please enter your name here