ಆರ್ಯಾಪು ಗ್ರಾಮ

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಆರ್ಯಾಪು ಅಂಚೆ, ಪುತ್ತೂರು ದ.ಕ. ಫೋನ್: 08251-285600, 9449331867

aryapu-karpadiಪುತ್ತೂರು-ಸುಳ್ಯ ರಸ್ತೆಯಲ್ಲಿ ಆರ್ಯಾಪು ಗ್ರಾಮದ ಕಲ್ಲರ್ಪೆ ಸಮೀಪ ಕೃಷಿ ತೋಟಗಳ ಮಧ್ಯೆ ಬಲ್ಲೇರಿ ರಕ್ಷಿತಾರಣ್ಯದ ಬುಡದಲ್ಲಿರುವ ಪುರಾತನ ಕಾರಣಿಕ ಕ್ಷೇತ್ರ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ. ಇದರ ಮೂಲಸ್ಥಾನ ಬಲ್ಲೇರಿ ರಕ್ಷಿತಾರಣ್ಯದ ಶಿಖರ.
ಈ ಹಿಂದೆ ಜೈನ ಬಳ್ಳಾಲರ, ಪುತ್ತೂರಾಯ ಕುಟುಂಬಿಕರ ಆಡಳಿತವಿದ್ದು ಪ್ರಸ್ತುತ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿ ದೇವಳದ ಕಾರ್ಯ ನಡೆಯುತ್ತಿದೆ. ದೇವಳದಲ್ಲಿ ಕಿರು ಷಷ್ಠಿಗೆ ವಾರ್ಷಿಕ ಜಾತ್ರೋತ್ಸವ ನೆರವೇರುತ್ತದೆ.
ಸೋಣ ತಿಂಗಳ ಶನಿವಾರದಂದು ವೃತಧಾರಿ ಹೆಂಗಸರು ಈ ಕ್ಷೇತ್ರಕ್ಕೆ ಬಂದು ಸೇವೆಗೈಯುವುದು ವಿಶೇಷ. ಮೇ ೧೭ರಂದು ಪ್ರತಿಷ್ಠಾದಿನದ ಕಾರ್ಯಕ್ರಮ ನಡೆಯುತ್ತದೆ. ಕ್ಷೇತ್ರದಲ್ಲಿ ವಿಶೇಷವಾಗಿ ಶನಿವಾರ, ಆದಿತ್ಯವಾರ, ಮಂಗಳವಾರದಂದು ವಿಶೇಷ ಪೂಜೆ, ಅನ್ನಸಂತರ್ಪಣೆಯಿದೆ. ಸುತ್ತು ಪೌಳಿ, ದುರ್ಗಾಗುಡಿ, ಗಣಪತಿಗುಡಿ, ವ್ಯಾಘ್ರ ಚಾಮುಂಡಿಗುಡಿ, ನಾಗ ಸಾನಿಧ್ಯದ ನವೀಕರಣ ಆಗಬೇಕಾಗಿದೆ. ಪ್ರಶ್ನಾಚಿಂತನೆ ಮೂಲಕ ಪರಿಹಾರ ಕಾರ್ಯಕ್ಕೆ ತೊಡಗಲಾಗಿದೆ. ದೇವಳದ ಉತ್ತರ ದಿಕ್ಕಿನಲ್ಲಿ ಉಳ್ಳಾಲ್ತಿ, ಉಳ್ಳಾಕುಲು, ಪಂಜುರ್ಲಿ, ಪುರುಷರಾಯ, ಗುಳಿಗ ಸ್ಥಾನವೂ ಇದ್ದು ಇದೇ ಕ್ಷೇತ್ರದಿಂದ ನಿರ್ವಹಣೆಯಾಗುತ್ತಿದ್ದು ಪ್ರತೀ ಸಂಕ್ರಮಣಕ್ಕೆ ತಂಬಿಲ ಸೇವೆ ನಡೆಯುತ್ತದೆ. ಕಾರ್ಪಾಡಿಯಲ್ಲಿ ಭಕ್ತರ ಅನುಕೂಲಕ್ಕಾಗಿ ‘ಆಶ್ಲೇಷ ಬಲಿ’, ‘ಸರ್ಪ ಸಂಸ್ಕಾರ’, ‘ರಂಗಪೂಜೆ’ ಯಂತಹ ಪ್ರಧಾನ ಸೇವೆಗಳೂ ನಡೆಯುತ್ತಿದೆ. ವಿವಾಹ ಭಾಗ್ಯ, ಸಂತಾನ ಭಾಗ್ಯ, ಆರೋಗ್ಯ ಸಮಸ್ಯೆ, ನೀರಿನ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದ ಉದಾಹರಣೆಗಳೂ ಇವೆ. ಈ ದೇವಸ್ಥಾನದಲ್ಲಿ ತ್ರಿಕಾಲದಲ್ಲಿ ಪೂಜೆ ನಡೆಯುತ್ತಿದ್ದು. ಕೇವಲ ಆರ್ಯಾಪು ಗ್ರಾಮಸ್ಥರು ಮಾತ್ರವಲ್ಲದೆ ಪಕ್ಕದ ಒಳಮೊಗ್ರು, ಕುರಿಯ ಸೇರಿದಂತೆ ವಿವಿಧ ಪ್ರದೇಶಗಳಿಂದ ಭಕ್ತರು ಅನೇಕ ಸೇವೆಗಳನ್ನು ಮಾಡಿಸುತ್ತಿದ್ದಾರೆ.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ – ಸದಾನಂದ ಶೆಟ್ಟಿ ಕೂರೇಲು, ಅರ್ಚಕ – ಅನಂತಯ್ಯ ಕಾರಂತ, ಸದಸ್ಯರುಗಳು: ಗಂಗಯ್ಯ ಮರಿಕೆ (ಪರಿಶಿಷ್ಟ ಪಂಗಡ), ಶ್ರೀಮತಿ ಮೀನಾಕ್ಷಿ ಎಸ್. ಗೌಡ ನೀರ್ಕಜೆ, ಜ್ಯೋತಿವಸಂತ ಸಂಪ್ಯ, ಲಿಂಗಪ್ಪ ಗೌಡ ಕೊಲ್ಯ, ಜಿ. ಮಹಾಬಲ ರೈ ಒಳತ್ತಡ್ಕ, ಪಿ. ಯತೀಂದ್ರನಾಥ ಸಂಟ್ಯಾರ್, ಜಗನ್ನಾಥ ರೈ ಕೊಮ್ಮಂಡ ಆಡಳಿತ ನಿರ್ವಹಣೆ ಮಾಡುತ್ತಿದ್ದಾರೆ.

ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಆರ್ಯಾಪು, ಪುತ್ತೂರು. ಮೊ: 9449511117

kunjuru-2
ಪೂರ್ವ ಕಾಲದಲ್ಲಿ ವಿಜಯ ನಗರ ಅರಸು ಮನೆತನದವರು ದೇಶದ ರಕ್ಷಣೆಗೂ, ಪ್ರಜೆಗಳ ಕ್ಷೇಮಕ್ಕೂ ಮತ್ತು ಸರ್ವ ಐಶ್ವರ್ಯ ಸಿದ್ಧಿಗೂ ಮಹಿಷಮರ್ದಿನಿ ವಿಗ್ರಹದಲ್ಲಿ ದುರ್ಗೆಯನ್ನು ಸಂಕಲ್ಪಿಸಿ ಆರಾಧಿಸಿಕೊಂಡು ಬಂದರು. ಅನಂತರದ ಕಾಲ ಘಟ್ಟದಲ್ಲಿ ಸಾಮ್ರಾಜ್ಯ ವಿಸ್ತರಣೆಯ ಉದ್ದೇಶದಿಂದ ಶ್ರೀ ದೇವಿಯಲ್ಲಿ ಪ್ರಾರ್ಥಿಸಿ ದಕ್ಷಿಣಾಭಿಮುಖವಾಗಿ ಯಾತ್ರೆಯಾದರು.
ಪುತ್ತೂರು ಪ್ರದೇಶಕ್ಕೆ ಬಂದಾಗ ಇಲ್ಲಿಯೂ ಕೂಡಾ ಯುದ್ಧದಲ್ಲಿ ವಿಜಯಿಗಳಾಗಿ ಮುಂದೆ ದಕ್ಷಿಣಕ್ಕೆ ಪ್ರಯಾಣ ಮಾಡಲು ವಿದ್ಯುಕ್ತರಾದರು. ಈ ಸಂದರ್ಭ ಕೆಲವು ದುರ್ನಿಮಿತ್ತಗಳು ಕಾಣಲು ಎಡೆಯಾಯಿತು. ಕಾರಣವನ್ನು ರಾಜ ಪುರೋಹಿತರಲ್ಲಿ ವಿಚಾರಿಸಿದಾಗ ಆದಿಯಲ್ಲಿ ಅನುದಿನವೂ ಆರಾಧಿಸುವ ದುರ್ಗಾ ಪರಮೇಶ್ವರಿಯ ಅನುಗ್ರಹದ ವೈಕಲ್ಯವೆಂದು ತಿಳಿಯಿತು. ಪರಿಹಾರವಾಗಿ ಕುಂಜೂರು ಎಂಬ ಸ್ಥಳದಲ್ಲಿ ಶ್ರೀ ದುರ್ಗಾ ಪರಮೇಶ್ವರಿಯನ್ನು ಪ್ರತಿಷ್ಠಾಪಿಸಿ ಆರಾಧಿಸಿದರು. ಪ್ರಕೃತಿ ರಮಣೀಯವಾದ ಸ್ಥಳವೂ, ದೇವಾಲಯಕ್ಕೆ ಯೋಗ್ಯವಾದ ಸ್ಥಳವಾದುದರಿಂದ
ಶ್ರೀ ಕ್ಷೇತ್ರದಲ್ಲಿರುವ ಸ್ಥಳವನ್ನು (ಸಾನಿಧ್ಯವನ್ನು) ಗ್ರಾಮಸ್ಥರು ಗ್ರಾಮ ದೇವತೆಯಾಗಿ ಆರಾಧಿಸಿದರು.
ಮುಂದಿನ ಕಾಲದಲ್ಲಿ ಆರಾಧನೆಗೆ ವಿಕಲತೆ ಉಂಟಾಗಿ ದೇವಸ್ಥಾನದ ಗರ್ಭಗುಡಿ ಪೌಳಿಗಳು, ಬಿಂಬೋಪಾದಿಗಳು ಮತ್ತು ಪೂಜಾ ವಸ್ತುಗಳು ಎಲ್ಲವೂ ಮಣ್ಣಿನಂತರ್ಗತವಾಗಿ ಹೋಯಿತು. ಇದರಿಂದಾಗಿ ಊರಿನ ಜನರು ರೋಗ ಹಾಗೂ ವಿವಿಧ ದುರ್ನಿಮಿತ್ತಗಳನ್ನು ಅನುಭವಿಸಿದರು.
ಹೀಗಿರುವ ಸಂದರ್ಭ ಒಬ್ಬ ಆದಿವಾಸಿ ಮಹಿಳೆ ಬೆಳಿಗ್ಗೆ ಕಾಡಿಗೆ ಅಗತ್ಯ ಕಾರ್ಯಕ್ಕಾಗಿ ಹೋದ ಸಂದರ್ಭ ಪ್ರಕೃತ ಆರೂಢದಲ್ಲಿ ಆರಾಧಿಸುವ ಮಹಿಷನನ್ನು ಮರ್ಧಿಸುವ ಭಂಗಿಯಲ್ಲಿರುವ ಶಿಲಾಬಿಂಬವು ಕಾಣಿಸಿತು. ಆ ಸ್ತ್ರೀಯು ಓಡಿ ಬಂದು ಮಚ್ಚಿಮಲೆಯಲ್ಲಿರುವ ಅರಸರ ಸಲಹೆಗಾರರಾಗಿದ್ದ ಉಂಗ್ರು ಪುಳಿತ್ತಾಯರ ಮನೆಯಲ್ಲಿ ವಿವರ ತಿಳಿಸಿದಳು. ಅನಂತರ ಅರಸರಿಗೂ ವಿವರ ತಿಳಿಸಿ ದೇವಾಲಯದ ನಿರ್ಮಾಣದ ಕಾರ್ಯವು ಬಹಳ ಉತ್ಸುಕತೆಯಿಂದ ನಡೆಯಿತು. ಪುನಃ ಪ್ರತಿಷ್ಠಾಧಿ ಶುಭ ಕರ್ಮಾದಿಗಳು ನಡೆದು ಪುನಃ ಆರಾಧನೆಯು ವಿಧಿಯುಕ್ತವಾಗಿ ನಡೆಯುತ್ತಾ ಬಂದಿದೆ. ಈ ದೇವಳದಲ್ಲಿ ಭಕ್ತಾದಿಗಳು
ಸೇರಿಕೊಂಡು ದೈವಜ್ಞರ ಸಲಹೆಯಂತೆ ಜೀರ್ಣೋದ್ಧಾರ ಕಾಮಗಾರಿಗಳು ನಡೆದು, ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ತಾ. ೨೮-೦೪-೨೦೧೩ರಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿರುತ್ತದೆ. ಪ್ರತಿ ಶುಕ್ರವಾರ ಇಲ್ಲಿ ಅನ್ನದಾನ ನಡೆಯುತ್ತಿದ್ದು ಶ್ರೀ ದೇವಿಯನ್ನು ನಂಬಿಕೊಂಡು ಬಂದವರಿಗೆ ಇಷ್ಟಾರ್ಥ ಸಿದ್ಧಿಯಾದ ಅನೇಕ (ವಿವಾಹ, ವ್ಯವಹಾರ, ಆರೋಗ್ಯ, ಸಂತಾನ ಭಾಗ್ಯ) ಉದಾಹರಣೆಗಳು ಇವೆ.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು – ಮುರಳಿಕೃಷ್ಣ ಹಸಂತಡ್ಕ (೯೪೪೯೫೧೧೧೧೭), ಸದಾನಂದ ಭಟ್ – ಅರ್ಚಕ, ಸದಸ್ಯರು – ಮಹಾಲಿಂಗ ನಾಯ್ಕ ಮಚ್ಚಿಮಲೆ, ರಾಜೀವಿ ರಮೇಶ್ ಗೌಡ ಕುಬಳಾಜೆ, ಗುಣವತಿ ಗೆಣಸಿನಕುಮೇರು, ವಿಶ್ವನಾಥ ಕುಲಾಲ್ ಬೊಳ್ಳಾಣ, ಚಂದಪ್ಪ ಪೂಜಾರಿ ಕುಂಜೂರು, ಎಂ. ರಾಮ ಭಟ್ಟ ಮಚ್ಚಿಮಲೆ, ರಾಕೇಶ್ ನೈಕ್ (ಸದಸ್ಯರು) ವ್ಯವಸ್ಥಾಪನಾ ಸಮಿತಿ.

ಉಳ್ಳಾಕುಲು ಮತ್ತು ಉಳ್ಳಾಲ್ತಿ ದೈವಸ್ಥಾನ ಕೂರೇಲು,ಆರ್ಯಾಪು, ಪುತ್ತೂರು, ದ.ಕ. ಮೊ: 9448153055

ullakuluದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ದಲ್ಲಿರುವ ಕೂರೇಲು ಮಣ್ಣಿನಲ್ಲಿ ನೆಲೆಯಾಗಿ ಸುಮಾರು ೬೦೦ ವರ್ಷಗಳ ಇತಿಹಾಸ ವನ್ನು ಪಡೆದಿರುವ ಶ್ರೀ ಉಳ್ಳಾಕುಲು ಮತ್ತು ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ಸಾನಿಧ್ಯವು ಪುನರ್ ನಿರ್ಮಾಣವಾಗಿ ಬ್ರಹ್ಮಕಲಶೋತ್ಸವ ಧಾರ್ಮಿಕ ನಡೆಗೆ ಸಮರ್ಪಣೆಯಾಗಿದೆ.
ಅನಾದಿ ಕಾಲದಿಂದಲೂ ಅಂದರೆ ಬಲ್ಲಾಳರ ಆಡಳಿತದಲ್ಲಿ ಆರಾಧನೆ ಪಡೆಯುತ್ತಿದ್ದವು ಎನ್ನಲಾದ ೬೦೦ ವರ್ಷಗಳ ದೀರ್ಘ ಇತಿಹಾಸವಿರುವ ಕೂರೇಲು ಶ್ರೀ ಉಳ್ಳಾಕುಲು ಮತ್ತು ಉಳ್ಳಾಲ್ತಿ ಹಾಗೂ ಪರಿವಾರ ದೈವಗಳಿಗೆ ಸುಮಾರು ೧೬ ಲಕ್ಷ ರೂ.ಗಳ ವೆಚ್ಚದಲ್ಲಿ ನೂತನ ದೈವಸ್ಥಾನ ನಿರ್ಮಿಸಿ ಬ್ರಹ್ಮಕಲಶೋತ್ಸವಗಳನ್ನು ನಡೆಸಿ ಇದೀಗ ಕಾಲಾನುಕಾಲಕ್ಕೆ ಆರಾಧನೆಗಳನ್ನು ನಡೆಸಿಕೊಂಡು ಬರುತ್ತಿರುವವರು ಕೂರೇಲು ಸಂಜೀವ ಪೂಜಾರಿಯವರು
ಪ್ರಸ್ತುತ ನಿರ್ಮಾಣಗೊಂಡಿರುವ ಶ್ರೀ ಉಳ್ಳಾಕುಲು ಉಳ್ಳಾಲ್ತಿ ಗುಡಿಯಿಂದ ೧೮ ಮೆಟ್ಟಿಲು ಕೆಳಗೆ ಇಳಿದರೆ ಹಿಂದಿನ ಕಾಲದಲ್ಲಿ ದೈವದ ಭಂಡಾರಗಳನ್ನು ಇಡುತ್ತಿದ್ದ “ಭಂಡಾರದ ಗದ್ದೆ”(ಮಜಲು) ಇದೆ. ಆ ನಂತರದ ಗದ್ದೆಯೇ “ನಡಾವಳಿ ಗದ್ದೆ” (ಮಜಲು). ದೈವದ ನಡಾವಳಿಗಳು ಈ ಗದ್ದೆಯಲ್ಲಿ ನಡೆಯುತ್ತಿದ್ದವು ಎನ್ನಲಾಗಿದೆ.ಈ ಗದ್ದೆಯಲ್ಲಿ ಈಗಲೂ ಬೇಸಾಯ ಮಾಡುತ್ತಿದ್ದಾರೆ. ಈ ಗದ್ದೆಯ ಪಕ್ಕದಲ್ಲಿರುವ ಗದ್ದೆಯೇ “ಸುರಿಯೊ(ಖಡ್ಗ)ದ ಬಳ್ಳಿ(ಗದ್ದೆ,ಮಜಲು) ಎಂಬ ಗದ್ದೆಯಿದೆ. ಕೋಟಿ ಚೆನ್ನಯರ ಕಥೆಯಲ್ಲಿ ಬರುವ
ಸುರಿಯೋ ಎಂಬ ಹೆಸರು ಈ ಪ್ರದೇಶದಲ್ಲಿ ಇರುವುದಾದರೆ, ಕೋಟಿ ಚೆನ್ನಯರು ಮತ್ತು ಪಡುಮಲೆಯ ಪೂಮಾಣಿ ಕಿನ್ನಿಮಾಣಿ ದೈವಗಳಿಗೂ ಸಂಬಂಧವಿರುವುದರಿಂದ, ದೈವಗಳ ನೆಲೆಯಾಗುವುದಕ್ಕೆ ಅಥವಾ ಕೋಟಿಚೆನ್ನಯರ ಇರುವಿಕೆಗೆ ಇಲ್ಲಿ ಬಲವಾದ ಸಾಕ್ಷಿ ಸಿಗುತ್ತದೆ. ಶ್ರೀ ಉಳ್ಳಾಕುಲು ಮತ್ತು ಉಳ್ಳಾಲ್ತಿ, ೧ ಕಡಿಮೆ ೪೦ ದೈವಗಳು, ರಕ್ತೇಶ್ವರಿ, ವ್ಯಾಘ್ರ ಚಾಮುಂಡಿ, ಧೂಮಾವತಿ, ಕುಪ್ಪೆ ಪಂಜುರ್ಲಿ, ಗುಳಿಗ, ಕಲ್ಲುರ್ಟಿ, ಅಬ್ಬೆಜಲಾಯ ಈ ದೈವಗಳು ಕೂರೇಲು ಮಣ್ಣಿನ ಸ್ಥಳ ದೈವಗಳಾಗಿ, ಇದೀಗ ನೂತನವಾಗಿ ದೈವಸ್ಥಾನ ನಿರ್ಮಾಣಗೊಂಡು, ಪ್ರತಿಷ್ಠೆ ಪಡೆಯಲಿವೆ. ಬಲ್ಲಾಳರ ಆಡಳಿತದಲ್ಲಿ ಈ ದೈವಗಳು ಈ ಮಣ್ಣಿನಲ್ಲಿ ಆರಾಧನೆ ಪಡೆಯುತ್ತಿದ್ದವು ಎನ್ನಲಾಗಿದೆ.ಇದಕ್ಕೆ ಪುಷ್ಠಿ ನೀಡುವಂತೆ ಈ ದೈವಗಳಿಗೆ ದೈವಸ್ಥಾನ ನಿರ್ಮಿಸುವ ವೇಳೆ ದೀಪ, ಕಂಚಿಕಲ್ಲು, ಕೆಲವೊಂದು ಕಲ್ಲುಗಳು ಕೂಡ ಪತ್ತೆಯಾಗಿವೆ.

ಮಲರಾಯ ಧರ್ಮದೈವ ದೈವಸ್ಥಾನ ಕೂರೇಲು, ಆರ್ಯಾಪು, ಪುತ್ತೂರು ದ.ಕ. ಮೊ: 9448153055

ullakulu-2ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ದಲ್ಲಿರುವ ಕೂರೇಲು ಮಣ್ಣಿನಲ್ಲಿ ೨೦೦ ವರ್ಷಗಳ ದೀರ್ಘ ಇತಿಹಾಸವಿರುವ ಕೂರೇಲು ಧರ್ಮ ದೈವಗಳಾದ ಮಲರಾಯ ಮತ್ತು ಇತರ ಪರಿವಾರ ದೈವಗಳ ಸ್ಥಾನವಿದೆ.
೧೯೯೧ರಲ್ಲಿ ತನ್ನ ಇಡೀ ಕೂರೇಲು ಕುಟುಂಬಸ್ಥರನ್ನು ಸೇರಿಸಿಕೊಂಡು ದೈವ ಸ್ಥಾನದ ಜೀರ್ಣೋ ದ್ಧಾರ ಕಾರ್‍ಯ ಕೈಗೊಂಡು ಸುಮಾರು ೨ ಲಕ್ಷ ರೂ. ವೆಚ್ಚದಲ್ಲಿ ದೈವಸ್ಥಾನ ನಿರ್ಮಿಸಿ ಬ್ರಹ್ಮಕಲಶ ಮಾಡಿಸಿ, ಮಲರಾಯ ಹಾಗೂ ಇತರ ಪರಿವಾರ ದೈವಗಳಿಗೆ ಮೊಗ, ಕತ್ತಿ, ಅಣಿ ಹಾಗೂ ಇತರ ಆಭರಣಗಳನ್ನು ಮಾಡಿಸಿ ಆ ನಂತರ ಕಾಲಕಾಲಕ್ಕೆ ದೈವಸ್ಥಾನ ದಲ್ಲಿ ಅದ್ಧೂರಿಯಾಗಿ “ಧರ್ಮ ನೇಮೋತ್ಸವ” ನಡೆಯುತ್ತಿದೆ. ೨೦೦೬ ರಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಕುಟುಂಬಸ್ಥರ ಸಹಕಾರದೊಂದಿಗೆ ಸುಮಾರು ೧೫ ಲಕ್ಷ ರೂ. ವೆಚ್ಚದಲ್ಲಿ ದೈವಗಳಿಗೆ ಬೇಕಾದ ಚಾವಡಿ ತರವಾಡು ಮನೆ ನಿರ್ಮಾಣವಾಗಿದೆ.
ಕೂರೇಲು ಕುಟುಂಬದಲ್ಲಿ ಸುಮಾರು ೫೦ಕ್ಕಿಂತಲೂ ಅಧಿಕ ಮನೆಗಳು ಇವೆ. ಮಲರಾಯ, ಮಲರಾಯ ಬಂಟ, ಮಹಿಷಾಂತಾಯ, ಕಳಾಲ್ತ ಗುಳಿಗ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕೊರತ್ತಿ ಕೊರಗಜ್ಜ, ಕಲ್ಲುರ್ಟಿ ಮತ್ತು ಮುಡಿಪು ಲಕ್ಷ್ಮೀಕೋಣೆ ಇವುಗಳು ಕೂರೇಲು ಕುಟುಂಬದ ದೈವಗಳಾಗಿ ಪ್ರತಿ ವರ್ಷ ಆರಾಧನೆ ಪಡೆಯುತ್ತಿವೆ. ಕಾಲಾನುಕಾಲಕ್ಕೆ ಕುಟುಂಬಿಕರನ್ನು ಸೇರಿಸಿ ಕೊಂಡು ದೈವದ ಆರಾಧನೆ ಮಾಡಿಕೊಂಡು ಬರುತ್ತಿರುವವರು ದೈವಭಕ್ತ ಕೂರೇಲು ಸಂಜೀವ ಪೂಜಾರಿಯವರು.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಉದಯಗಿರಿ, ಆರ್ಯಾಪು ಪೋಸ್ಟ್ ಮತ್ತು ಗ್ರಾಮ ಪುತ್ತೂರು ೫೭೪೨೧೦, ೯೭೪೧೮೧೩೯೩೦ (ಪ್ರೀತಂ ಪುತ್ತೂರಾಯ)
* ಸಂಪ್ಯ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಉದಯಗಿರಿ, ೯೭೪೧೮೧೩೯೩೦ (ಪ್ರೀತಂ ಪುತ್ತೂರಾಯ)
* ಶ್ರೀ ಉಳ್ಳಾಲ್ತಿ, ಉಳ್ಳಾಕ್ಲು ದೈವಸ್ಥಾನ ಕಾರ್ಪಾಡಿ, ೯೪೪೯೩೩೧೮೬೭, ೨೮೫೬೦೦
* ಶ್ರೀ ಬಾರಿಕೆ ಪೂಮಾಣಿ ಕಿನ್ನಿಮಾಣಿ ದೈವಸ್ಥಾನ, ಆರ್ಯಾಪು ಗ್ರಾಮ ಮತ್ತು ಪೋಸ್ಟ್ ಬಾರಿಕೆ ಮನೆ, ಪುತ್ತೂರು ದ.ಕ. ೫೭೪೨೧೦, ೯೬೧೧೪೧೧೦೫೧ (ಮಂಜಪ್ಪ ರೈ)
* ಶ್ರೀ ಮಾರಿಯಮ್ಮ ದೈವಸ್ಥಾನ ಪೆಲತ್ತಡಿ. ಕಂಬಳದಡ್ಡ
* ಶ್ರೀ ಬಳಕ್ಕ ಧೂಮಾವತಿ ದೈವಸ್ಥಾನ, ಆರ್ಯಾಪು ಗ್ರಾಮ ಮತ್ತು ಪೋಸ್ಟ್ ಪುತ್ತೂರು ದ.ಕ. ೫೭೪೨೧೦, ೯೪೮೩೨೧೧೨೧೫ (ಕುಶಾಲಪ್ಪ ಗೌಡ), ೨೮೫೯೫೫
* ಶ್ರೀ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ದೈವಸ್ಥಾನ ಬಾರಿಕೆ, ಆರ್ಯಾಪು ಗ್ರಾಮ ಮತ್ತು ಪೋಸ್ಟ್, ಪುತ್ತೂರು ದ.ಕ. ೫೭೪೨೧೦, ೯೪೪೯೫೭೯೨೦೦ (ಅಣ್ಣಿ ಪೂಜಾರಿ)
* ಶ್ರೀ ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನ ಕುಂಜೂರು, ಆರ್ಯಾಪು ಪೋಸ್ಟ್, ಪುತ್ತೂರು ದ.ಕ. ೫೭೪೨೧೦, ೯೪೪೯೩೬೬೧೧೮ (ಸೀತಾರಾಮ ಪೂಜಾರಿ)
* ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಉದಯಗಿರಿ ಸಂಪ್ಯ, ಆರ್ಯಾಪು ಪೋಸ್ಟ್, ಪುತ್ತೂರು ದ.ಕ. ೫೭೪೨೧೦, ೯೭೪೧೮೧೩೯೩೦ (ಪ್ರೀತಂ ಪುತ್ತೂರಾಯ)
* ಶ್ರೀ ಪರ್ಪುಂಜ ಮಾರಿಯಮ್ಮ ದೈವಸ್ಥಾನ ಟಶ್ರೀ ಧೂಮಾವತಿ ದೈವಸ್ಥಾನ ಸಂಪ್ಯಬೈಲು
* ಶ್ರೀ ರಕ್ತೇಶ್ವರಿ ದೈವಸ್ಥಾನ ಕಾರ್ಪಾಡಿ
* ಶ್ರೀ ಸಂಪ್ಯ ಗುಳಿಗನ ಕಟ್ಟೆ
* ಶ್ರೀ ಸಂಟ್ಯಾರು ಗುಳಿಗ ಸ್ಥಾನ
* ಶ್ರೀ ಮರಿಕೆ ಗುಳಿಗ ಸ್ಥಾನ
* ಕುಂಜೂರುಪಂಜ ಶ್ರೀ ದುರ್ಗಾ ಭಜನಾ ಮಂದಿರ ಆರ್ಯಾಪು ಗ್ರಾಮ ಮತ್ತು ಪೋಸ್ಟ್-೫೭೪ ೨೧೦ ಪುತ್ತೂರು, ೯೭೪೧೬೬೯೩೧೬ (ತಿಮ್ಮಪ್ಪ ನಾಯ್ಕ ಅಧ್ಯಕ್ಷರು), ೨೮೬೮೦೩ (ಯಶೋಧರ ಆರಿಗ)
* ಬಂಗಾರಡ್ಕ ಶ್ರೀ ರಾಮ ಭಜನಾ ಮಂದಿರ ಆರ್ಯಾಪು ಗ್ರಾಮ & ಪೋಸ್ಟ್-೫೭೪೨೧೦, ೯೯೮೦೫೪೧೩೫೦
* ದೊಡ್ಡಡ್ಕ ಶ್ರೀ ಮಹಾಲಕ್ಷ್ಮೀ ಭಜನಾ ಮಂದಿರ ಆರ್ಯಾಪು ಗ್ರಾಮ & ಪೋಸ್ಟ್-೫೭೪ ೨೧೦, ೯೪೪೯೯೩೬೮೮೬ (ಶೇಷಪ್ಪ ನಾಯ್ಕ ಅಧ್ಯಕ್ಷರು)
* ಸಂಟ್ಯಾರು ವಿನಾಯಕ ಭಜನಾ ಮಂದಿರ, ಆರ್ಯಾಪು ಗ್ರಾಮ & ಪೋಸ್ಟ್-೫೭೪೨೧೦ ಪುತ್ತೂರು, ೯೮೮೦೯೭೧೨೩೩

Copy Protected by Chetan's WP-Copyprotect.