03-12-2025
ಪುತ್ತೂರು ಮಾಯ್ ದೆ ದೇವುಸ್ ಚರ್ಚ್ ವಠಾರದಲ್ಲಿ ಬೆಳಿಗ್ಗೆ ೯.೩೦ಕ್ಕೆ ಮಾಯ್ ದೆ ದೇವುಸ್ ಅನುದಾನಿತ ಹಿ.ಪ್ರಾ. ಶಾಲೆಯ ವಾರ್ಷಿಕೋತ್ಸವ, ಬಹುಮಾನ ವಿತರಣೆ, ಅಪರಾಹ್ನ ೩ರಿಂದ ಸಭಾ ಕಾರ್ಯಕ್ರಮ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಬೆಳಿಗ್ಗೆ ೯ರಿಂದ ಶ್ರೀ ಗುರುಚರಿತ್ರೆ-ವೇದ ಪಾರಾಯಣ, ೯.೩೦ರಿಂದ ಹರಿಕಥಾ ಸತ್ಸಂಗ, ೧೦ರಿಂದ ಶ್ರೀ ದತ್ತ ನಾಮಜಪ, ಮಧ್ಯಾಹ್ನ ೧೨.೩೦ರಿಂದ ಕಲ್ಪೋಕ್ತ ಪೂಜೆ, ಮಹಾಪೂಜೆ, ಮಹಾಸಂತರ್ಪಣೆ, ೨ರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ ೫ರಿಂದ ಶ್ರೀ ದತ್ತ ನಾಮಜಪ, ರಾತ್ರಿ ೭ರಿಂದ ರಂಗಪೂಜೆ, ಬೆಳ್ಳಿರಥೋತ್ಸವ
ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ ಬೆಳಿಗ್ಗೆ ೯.೩೦ರಿಂದ ಕ್ರೀಡೋತ್ಸವ
ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಅಷ್ಟಮಂಗಲ ಪ್ರಶ್ನೆ
ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಬೆಳಿಗ್ಗೆ ವಾರ್ಷಿಕ ಕ್ರೀಡಾಕೂಟ
ಕೊಣಾಜೆ ಮಂಗಳ ಗಂಗೋತ್ರಿ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಬೆಳಿಗ್ಗೆ ೯.೩೦ಕ್ಕೆ ಬ್ರಹ್ಮಶ್ರೀ ನಾರಾಯಣ ಗುರು, ಮಹಾತ್ಮ ಗಾಂಧಿ ಸಂವಾದ ಶತಮಾನೋತ್ಸವ, ಅಪರಾಹ್ನ ೨ರಿಂದ ಸರ್ವಮತ ಸಮ್ಮೇಳನ



