ಆಲಂಕಾರು ಗ್ರಾಮ

ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಲಂಕಾರು
ಶರವೂರು ಅಂಚೆ, ಆಲಂಕಾರು ಗ್ರಾಮ, ಪುತ್ತೂರು ತಾ| ದ.ಕ.-574285
ಫೋನ್: 08251-263286, 9481229464, 9845642887
E-mail: [email protected], web: www.sdptsharavoorcom

alankaru-2ದ್ವಾಪರ ಯುಗಾಂತ್ಯದಲ್ಲಿ ಪಾಂಡವರ ಪುರೋಹಿತರಾದ ಧೌಮ್ಯ ಋಷಿಗಳು ದ್ವೈತವನದಲ್ಲಿ ವಾಸಿಸುತ್ತಿದ್ದ ಒಂದು ದಿನ ಸ್ನಾನ ಮಾಡುತ್ತಾ ‘ಅಪಾಂ ಸ್ವರೂಪ ಸ್ಥಿತಯೇತಿ’ ಮಂತ್ರ ಉಚ್ಚರಿಸುವಾಗ ನೀರಿನೊಳಗೆ ದುರ್ಗಾಮೂರ್ತಿಯನ್ನು ನೋಡಿ ಮಂತ್ರಜ್ಞರಾದ ಧೌಮ್ಯರು ಭೀಮಸೇನ, ಆರುಣಿ ಎಂಬ ಶಿಷ್ಯರಿಂದೊಡಗೂಡಿಕೊಂಡು ಭಕ್ತಿವಶ್ಯರಳಾದ ಆ ದುರ್ಗಾ ಮೂರ್ತಿಯನ್ನು ಸರೋವರದ ಮಧ್ಯದಲ್ಲಿಯೇ ಪ್ರತಿಷ್ಠೆ ಮಾಡಿದರು. ಇದರಿಂದಾಗಿ ದೇವಿಗೆ ಸರಪುರೀಶ್ವರಿಯೆಂದೂ, ಊರಿಗೆ ಸರಪುರವೆಂದೂ ಹೆಸರಾಯಿತು. ಆದರೆ, ಗ್ರಾಮ್ಯ ಜನರಿಂದ ‘ಸರವೂರು’ ಕ್ರಮೇಣ ಶರವೂರು ಎಂದೂ ಕರೆಯಲ್ಪಟ್ಟಿತು. ಧೌಮ್ಯ ಋಷಿಗಳು ಕೆಲವು ಕಾಲ ಇಲ್ಲಿ ತಪಸ್ಸು ಮಾಡಿ, ತಮ್ಮ ತಪಃಶಕ್ತಿಯನ್ನು ಈ ಕ್ಷೇತ್ರದಲ್ಲಿ ಧಾರೆಯೆರದುದರಿಂದ ಈ ಕ್ಷೇತ್ರವು ಶಕ್ತಿಪೀಠವೆಂದೇ ಪ್ರಸಿದ್ಧವಾಯಿತು. ಯಾರು ಈ ಕ್ಷೇತ್ರದಲ್ಲಿ ಬಂದು ಈ ಶಕ್ತಿಯನ್ನು ಭಕ್ತಿಯಿಂದ ಆರಾಧಿಸುತ್ತಾರೋ, ಅವರು ಆಯುರಾರೋಗ್ಯ, ಐಶ್ವರ್ಯಾದಿಗಳನ್ನು, ಮುಕ್ತಿಯನ್ನು ಹೊಂದುತ್ತಾರೆ ಎಂಬುದಾಗಿ ಇಲ್ಲಿನ ಸ್ಥಳ ಮಹಿಮೆ ಸಾಕ್ಷಿ ನುಡಿಯುತ್ತದೆ.

alankaru-1
ಚರಿತ್ರೆ: ನೇತ್ರಾವತಿ-ಕುಮಾರಧಾರ ನದಿಗಳ ನಡುವಿನ ಸುಮಾರು ೨೫ ಕಿ.ಮೀ. ಪ್ರದೇಶವನ್ನು ‘ಸರದಂತರ ಕ್ಷೇತ್ರ ಎಂದು ಶ್ರೀಮನ್ಮಧ್ವಾಚಾರ್ಯರು ಕರೆದಿದ್ದಾರೆ. ಶರವೂರು ಈ ಕ್ಷೇತ್ರದಲ್ಲೇ ಇರುವ ಪುಣ್ಯಸ್ಥಳವಾಗಿದೆ. ಕುಮಾರಧಾರಾ ನದಿಯು ಇಲ್ಲಿ ಪಶ್ಚಿಮೋತ್ತರವಾಗಿ ಹರಿಯುತ್ತದೆ. ಕುಮಾರಧಾರ ನದಿಯ ಉತ್ತರದಲ್ಲಿರುವ ಗ್ರಾಮಗಳಾದ ಬಲ್ಯ, ಹಳೆನೆರೇಂಕಿ, ಪೆರಾಬೆ, ಕುಂತೂರು ಮತ್ತು ಆಲಂಕಾರುಗಳನ್ನೊಳಗೊಂಡ ಸೀಮೆಗೆ ಶರವೂರು ದುರ್ಗಾ ಪರಮೇಶ್ವರಿ ಸೀಮೆ ದೇವಾಲಯ. ಧೌಮ್ಯ ಋಷಿಗಳು ದುರ್ಗಾ ಮೂರ್ತಿಯನ್ನು ಪ್ರತಿಷ್ಠಾಪಿಸುವ ಕಾರ್ಯಕ್ಕೆ ಸರಸ್ಸಿನ ಗಂಗಾಮಾತೆಯ ಸಹಕಾರ ಪಡೆದುಕೊಂಡುದರಿಂದ ನೈರುತ್ಯ ಭಾಗದಲ್ಲಿ ಗುಡಿಕಟ್ಟಿ ಗಂಗಾ ದೇವತೆಯನ್ನು ಪ್ರತಿಷ್ಠಾಪಿಸಿದರಂತೆ. ಐತಿಹ್ಯಗಳೇನೇ ಇದ್ದರೂ ಗಂಗಾಮಾತೆ ಈಗಲೂ ಈ ಸ್ಥಳದ ದೇವತೆ. ದುರ್ಗೆಗೆ ನಡೆಯುವ ಎಲ್ಲ ರೀತಿಯ ಸೇವೆಯೂ ಗಂಗಾಮಾತೆಗೂ ನಡೆಯುತ್ತದೆ. ಇಲ್ಲಿ ಯಾವಾಗಲೂ ಬತ್ತದ ನೀರಿನ ಬುಗ್ಗೆ ಇರುವ ಸ್ಥಳ ಇರುವುದು ವಿಶೇಷವಾಗಿದೆ.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ – ಪೂವಪ್ಪ ನಾಯ್ಕ, ಸದಸ್ಯರುಗಳು: ಸದಾನಂದ ಕುಮಾರ್ ಮಡ್ಯೊಟ್ಟು, ಸುಭಾನು ರೈ ಮರುವಂತಿಲ, ಶ್ರೀನಿವಾಸ ಶಾಸ್ತ್ರೀ ಬುಡೇರಿಯಾ, ಗಣಪತಿ ಭಟ್ ಮುಳ್ಳಂಕೊಚ್ಚಿ, ಲೀಲಾವತಿ ಕುಂತೂರು, ವಸಂತಿ ಗೌಡ ಹಳೆನೇರೆಂಕಿ, ದಿವಾಕರ ಕುಂಬಾರ ಕೊಂಡಾಡಿ ದೇವಳದ ಆಡಳಿತ ನಿರ್ವಹಿಸುತ್ತಿದ್ದಾರೆ.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
*ಭದ್ರಕಾಳಿ, ಉಳ್ಳಾಲ್ತಿ ದೈವಸ್ಥಾನ ಶರವೂರು
*ಶ್ರೀ ಉಳ್ಳಾಲ್ತಿ-ಉಳ್ಳಾಕ್ಲು ದೈವಸ್ಥಾನ ಬುಡೇರಿಯಾ
*ಶ್ರೀ ಅಣ್ಣಪ್ಪ ಸ್ವಾಮಿ – ಉಳ್ಳಾಕ್ಲು ದೈವಸ್ಥಾನ ಆಲಂಕಾರು
*ಶ್ರೀ ಮಲರಾಯ ದೈವಸ್ಥಾನ ನೆಕ್ಕರೆ
*ಶ್ರೀ ಕಲ್ಲರ್ಟಿ ದೈವಸ್ಥಾನ ಪಟ್ಟೆದಗುರಿ
*ಶ್ರೀ ಶಿರಾಡಿ ದೈವಸ್ಥಾನ ಕೆದಿಲ
*ಶ್ರೀ ರಕ್ತೇಶ್ವರಿ ಗುಡಿ ಕೈಯಾಪೆ
*ಶ್ರೀ ಶಿರಾಡಿ ದೈವಸ್ಥಾನ ಸುರಲ್ತಡಿ
*ಶ್ರೀ ಧರ್ಮ ದೈವಗಳ ಸ್ಥಾನ ಪಜ್ಜಡ್ಕ
*ಶ್ರೀ ಧರ್ಮದೈವ ರುದ್ರಚಾಮುಂಡಿ ಗುಡಿ ಪಜ್ಜಡ್ಕ
*ಶ್ರೀ ಶಿರಾಡಿ ಗುಡಿ ಬಡ್ಡಮೆ
*ಶ್ರೀ ಪಂಜುರ್ಲಿ ದೈವಸ್ಥಾನ ನಾರ್‍ತಿಲ ಕೊಪ್ಪ
*ಶ್ರೀ ಧರ್ಮ ದೈವ ಗುಡಿ ಕೊಂಡಾಡಿ
*ಶ್ರೀ ಉಳ್ಳಾಕ್ಲು ಮತ್ತು ಕೆಡೆಂಜಿಲ್ತಾಯ ದೈವಸ್ಥಾನ, ಕಕ್ವೆ
*ಶ್ರೀ ಧರ್ಮ ದೈವ ಗುಡಿ ಕಕ್ವೆ
*ಶ್ರೀ ಮೊಗೇರರ ಚಾವಡಿ ನಡುಗುಡ್ಡೆ
*ಶ್ರೀ ಅಯ್ಯಪ್ಪಸ್ವಾಮಿ ಗುಡಿ ಮಡ್ಯೊಟ್ಟು
*ಶ್ರೀ ಧರ್ಮ ದೈವಗಳ ಸ್ಥಾನ ಪಜ್ಜಡ್ಕ
*ಶ್ರೀ ಧರ್ಮದೈವ ರುದ್ರಚಾಮುಂಡಿ ಗುಡಿ ಪಜ್ಜಡ್ಕ
*ಶ್ರೀ ಪಂಜುರ್ಲಿ ದೈವಸ್ಥಾನ ನಾರ್‍ತಿಲ ಕೊಪ್ಪ
*ಶ್ರೀ ಧರ್ಮ ದೈವ ಗುಡಿ ಕೊಂಡಾಡಿ
*ಶ್ರೀ ಉಳ್ಳಾಕ್ಲು ಮತ್ತು ಕೆಡೆಂಜಿಲ್ತಾಯ ದೈವಸ್ಥಾನ, ಕಕ್ವೆ
*ಶ್ರೀ ಸಬ್ಬಮ್ಮ ದೇವಿ ಗುಡಿ ಕಕ್ವೆ
*ಶ್ರೀ ಧರ್ಮ ದೈವ ಗುಡಿ ಕಕ್ವೆ
*ಶ್ರೀ ಮೊಗೇರರ ಚಾವಡಿ ನಡುಗುಡ್ಡೆ
*ಶ್ರೀ ಅಯ್ಯಪ್ಪಸ್ವಾಮಿ ಗುಡಿ ಮಡ್ಯೊಟ್ಟು
*ಚಾಮುಂಡಿ ದೈವಸ್ಥಾನ ನೆಕ್ಕಿಲಾಡಿ

Copy Protected by Chetan's WP-Copyprotect.