19-11-2025
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ, ರಾತ್ರಿ ೭.೩೦ರಿಂದ ಶ್ರೀ ದೇವರ ಬಲಿ ಉತ್ಸವ, ಕಟ್ಟೆಪೂಜೆ, ಚಂದ್ರಮಂಡಲ ಉತ್ಸವ, ಕೆರೆ ಉತ್ಸವ
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಬಿಜೆಪಿಯಿಂದ ಬೆಳಿಗ್ಗೆ ೯.೩೦ಕ್ಕೆ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಮಾನೋತ್ಸವ ವರ್ಷದ ಪ್ರಯುಕ್ತ ಮೆರವಣಿಗೆ, ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಬಳಿಯ ಮೈದಾನದಲ್ಲಿ ೧೦ರಿಂದ ಅಟಲ್ ವಿರಾಸತ್-ಸಮಾವೇಶ
ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ರಾತ್ರಿ ೯ಕ್ಕೆ ಲಕ್ಷ ದೀಪೋತ್ಸವ
ವಿಟ್ಲ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಬೆಳಿಗ್ಗೆ ೯.೩೦ರಿಂದ ಕಾಲೇಜು ವಿಭಾಗದ ವಾರ್ಷಿಕೋತ್ಸವ
ಒಳಮೊಗ್ರು ಗ್ರಾಮ ಶಿರೋಡಿಯನ್ ತರವಾಡು ಮನೆ ಕೈಕಾರದಲ್ಲಿ ಸಂಜೆ ೪ರಿಂದ ಕೊರತಿ, ಮೈಯಂತಿ ದೈವದ ಕೋಲ, ಧರ್ಮದೈವ, ಕುಪ್ಪೆಪಂಜುರ್ಲಿ, ಕಲುರ್ಟಿ ದೈವದ ಭಂಡಾರ ತೆಗೆಯುವುದು, ಧರ್ಮದೈವ, ಕುಪ್ಪೆ ಪಂಜುರ್ಲಿ ಕಲ್ಲುರ್ಟಿ ದೈವದ ನೇಮ
ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಪ್ರಯುಕ್ತ ಗೊನೆ ಮುಹೂರ್ತ
ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ರಾತ್ರಿ ೭ರಿಂದ ಲಕ್ಷದೀಪೋತ್ಸವ, ೮ರಿಂದ ಕಾರ್ತಿಕ ಪೂಜೆ, ಅನ್ನಸಂತರ್ಪಣೆ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ, ಗೌರಿಮಾರು ಕಟ್ಟೆ ಉತ್ಸವ
ಉತ್ತರಕ್ರಿಯೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ಮಧ್ಯಾಹ್ನ ೧೨ಕ್ಕೆ ಉಪ್ಪಿನಂಗಡಿ ನಮಿತಾ ಟೆಕ್ಸ್ಟೈಲ್ಸ್ನ ಮಾಲಕ ಹೆಬ್ಬಾರಬೈಲು ಎಚ್. ಹರಿದಾಸ ಭಂಡಾರಿಯವರ ಉತ್ತರಕ್ರಿಯೆ



